ರಾಧಿಕಾ ಕುಮಾರಸ್ವಾಮಿ ಕಮ್‌ ಬ್ಯಾಕ್‌ಗೆ ಉತ್ತರ ಸಿಕ್ತು, ರಮ್ಯಾ ಯಾವಾಗ?

By Web Desk  |  First Published Nov 12, 2019, 4:09 PM IST

'ದಮಯಂತಿ'ಯಾಗಿ ತೆರೆ ಮೇಲೆ ಬರಲಿದ್ದಾರೆ ರಾಧಿಕಾ ಕುಮಾರಸ್ವಾಮಿ | ರಮ್ಯಾ ಕಮ್ ಬ್ಯಾಕ್ ಆಗೋದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ |  


ಸ್ಯಾಂಡಲ್ ವುಡ್ ಮೋಹಕ ತಾರೆ, ಕ್ವೀನ್ ರಮ್ಯಾ 10 ವರ್ಷಗ ಕಾಲ ಚಿತ್ರರಂಗವನ್ನು ಆಳಿದವರು. ತಮ್ಮದೇ ಆದ ಹವಾ ಸೃಷ್ಟಿಸಿಕೊಂಡವರು. 

'ಅಭಿ' ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಾರೆ. "ತನನಣ ತನನಂ', ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂ ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 

Tap to resize

Latest Videos

undefined

ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಾರಾ ಬ್ಯೂಟಿ ಕ್ವೀನ್ ರಮ್ಯಾ?

ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಸಿನಿಮಾದಿಂದ ದೂರ ಸರಿದು ರಾಜಕೀಯದತ್ತ ಹೊರಳುತ್ತಾರೆ. 2013 ರಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಂಡ್ಯದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. 2014 ರ ಚುನಾವಣೆಯಲ್ಲಿ ಸೋಲುತ್ತಾರೆ. 

ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕ ರಾಜಾ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ರಮ್ಯಾ ಇನ್ನೂ ತುಟಿ ಎರಡು ಮಾಡಿಲ್ಲ. 

ಸದ್ಯ ರಾಜಕೀಯ ಹಾಗೂ ಸ್ಯಾಂಡಲ್‌ವುಡ್ ಎರಡರಿಂದಲೂ ದೂರ ಇದ್ದಾರೆ. ಯಾವುದೇ ಸಾಮಾಜಿಕ ಘಟನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇದರಿಂದ ಟೀಕೆಗೂ ಒಳಗಾಗಿದ್ದಿದೆ. 

ಕೊನೆಗೂ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ಸ್ಯಾಂಡಲ್‌ವುಡ್ 'ಸ್ವೀಟಿ'!

ರಮ್ಯಾ ರೀತಿಯಲ್ಲೇ ಸ್ಯಾಂಡಲ್‌ವುಡ್‌ ನಲ್ಲಿ ಹವಾ ಸೃಷ್ಟಿಸಿದವರು ರಾಧಿಕಾ ಕುಮಾರ ಸ್ವಾಮಿ. ನೀಲ ಮೇಘ ಶ್ಯಾಮ'ದಿಂದ ಸಿನಿಮಾ ರಂಗಕ್ಕೆ ಪ್ರವೇಶಿಸುತ್ತಾರೆ. ಆನಂತರ 'ನಿನಗಾಗಿ', ಮಣಿ, ತವರಿಗೆ ಬಾ ತಂಗಿ, ಹಠವಾದಿ, ಅನಾಥರು, ರುದ್ರತಾಂಡವ ಸಿನಿಮಾಗಳ ಮೂಲಕ ಸಾಕಷ್ಟು ಹೆಸರು ಮಾಡಿದರು. ನಂತರ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡರು. ಇದೀಗ ದಮಯಂತಿಯಾಗಿ ಮತ್ತೆ ಕಾಳಿ ಉಗ್ರರೂಪ ತಾಳಿದ್ದಾರೆ. ಮತ್ತೆ ಸ್ಯಾಂಡಲ್‌ವುಡ್‌ಗೆ ಹಿಂತಿರುಗಿದ್ದಾರೆ.  ರಮ್ಯಾ ಯಾವಾಗ ಹಿಂತಿರುಗುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆ. 

ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!