ಪವರ್ ಸ್ಟಾರ್‌ನ ನೋಡಬೇಕೆಂದು ಕನವರಿಸುತ್ತಿರುವ ಮಕ್ಕಳು. ಶಿವಣ್ಣ ಹೋಗಿ ಅವರ ಕೊನೆಯಾಸೆ ಈಡೇರಿಸ್ತಾರ?
ಜಿಲ್ಲೆ: ಚಿತ್ರದುರ್ಗ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ನಟ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲಾ ಅಗಲಿ ಏಳು ತಿಂಗಳು ಕಳೆದಿವೆ. ಆದರೆ ಅವರ ಅಭಿಮಾನಿಗಳ ಮನದಲ್ಲಿನ ದುಃಖ ಮಾತ್ರ ಇನ್ನು ಕರಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಲೋಕದ ಜ್ಞಾನ ಹಾಗೂ ಕೈಕಾಲು ಸ್ವಾಧೀನವಿಲ್ಲದ ಅಣ್ಣ ತಂಗಿ ಇಬ್ಬರು, ಅಪ್ಪು ಧ್ಯಾನದಲ್ಲಿ ದಿನ ಕಳೆಯುತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.....
undefined
ನೋಡಿ ಹೀಗೆ ಬಾಯ್ತೆರೆದು ಜೋರಾಗಿ ನಗುವ ನಗು ನಗುವಲ್ಲ, ಮಾತನಾಡಿದರೂ ಅದು ಅರ್ಥವಾಗಲ್ಲ, ಓಡಾಡಲು ಕೈಕಾಲು ಸ್ವಾಧೀನವಿಲ್ಲ. ಈ ಮನಕಲುಕುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದ ನಾಗರಾಜ್ ಹಾಗು ನಾಗರತ್ನ ಅವರ ಇಬ್ಬರು ಮಕ್ಕಳು.
ಹೌದು, ಈ ದಂಪತಿಗೆ ಮದುವೆಯಾಗಿ ಮೂರು ವರ್ಷಕ್ಕೆ ರಂಗನಾಥ್ ಹಾಗು ರಂಜಿತ ಇಬ್ಬರು ಜನಿಸಿದ್ದರು. ಎಲ್ಲಾ ಮಕ್ಕಳಂತೆ ನಾಲ್ಕು ವರ್ಷದವರೆಗೂ ತುಂಬಾ ಆರೋಗ್ಯವಾಗಿದ್ದರು. ಹೀಗಾಗಿ ಇವರಿಬ್ಬರೇ ಮಕ್ಕಳು ಸಾಕೆಂದು ಹಾಯಾಗಿದ್ದ ದಂಪತಿಗೆ ವಿಧಿ ಬಿಗ್ ಶಾಕ್ ನೀಡಿದೆ. ಮಕ್ಕಳಿಬ್ಬರೂ ನಾಲ್ಕು ವರ್ಷ ದಾಟುತಿದ್ದಂತೆ ಮೆದುಳು ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸತತ 26 ವರ್ಷಗಳಿಂದ ರಂಗನಾಥ್ (26) ಮತ್ತು ರಂಜಿತ (23)ಎಂಬ ಯುವಕ, ಯುವತಿಯನ್ನು ಹೆತ್ತವರೇ ಆರೈಕೆ ಮಾಡುತ್ತಿದ್ದಾರೆ, ಅವರ ಇಷ್ಟಾರ್ಥ ನೆರೆವೆರಿಸುತ್ತಾ ಬರ್ತಿದ್ದಾರೆ. ನಾನಾ ಕಡೆ ಈ ರೋಗಕ್ಕೆ ಚಿಕಿತ್ಸೆ ಕೊಡಿಸಿ ಸುಸ್ತಾಗಿರೋ ಪೋಷಕರು, ಕೊನೆ ಪಕ್ಷ, ಆ ಮುಗ್ದ ಮಕ್ಕಳ ಕೊನೆಯಾಸೆಯಾದ್ದರೂ ಈಡೇರಿಸಿಬೇಕೆಂಬ ತವಕದಲ್ಲಿದ್ದಾರೆ. ಅದೇನೆಂದರೆ ಆ ವಿಶೇಷ ಚೇತನರಿಬ್ಬರಿಗೂ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಪಂಚ ಪ್ರಾಣ. ಅವರು ಸಾವನ್ನಪ್ಪಿದಾಗ, ಈ ಮುಗ್ದರು ಸತತ ಎರಡು ದಿನಗಳ ಕಾಲ ಊಟ ಮಾಡದೇ ಪ್ರತಿಭಟಿಸಿದ್ದರು. ಆಗ ಹೆತ್ತವರು ಅವರನ್ನು ಸಂತೈಸಿ ಸಮಾಧಾನಪಡಿಸಿದ್ದರೂ ಸಹ ಪ್ರತಿದಿನ ಅಪ್ಪು ಹಾಗು ಶಿವಣ್ಣನ ಧ್ಯಾನ ಮಾಡುತ್ತಾ ದಿನಕಳೆಯುತಿದ್ದಾರೆ ಅಂತಾರೆ ಪೋಷಕರು.
ಪುನೀತ್ ಜಾಕೆಟ್‌ಗೆ ಫ್ರೇಮ್ ಹಾಕಿಸಿಟ್ಟ ಸಚಿವರ ಪುತ್ರ; ಜಾಕೆಟ್‌ನ ವಿಶೇಷತೆ ಏನು?
ಇನ್ನು ಈ ಇಬ್ಬರು ವಿಶೇಷಚೇತನರು ಮನೆಯಲ್ಲಿರದ್ರೂ ಕೂಡ ಸ್ವಲ್ಪವೂ ಬೇಸರ ಗೊಳ್ಳದೇ ಲಾಲನೆ ಪಾಲನೆ ಮಾಡ್ತಿರುವ ಹೆತ್ತಮ್ಮ, ಅಪ್ಪು ಅವರು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಅಗಲುತ್ತಾರೆಂದು ನಾವು ಭಾವಿಸಿರಲಿಲ್ಲ. ನಮ್ಮ ಮಕ್ಕಳಿಗೆ ಅವರನ್ನು ತೋರಿಸೊ ಭಾಗ್ಯ ಸಿಗಲಿಲ್ಲ. ಹೀಗಾಗಿ ಒಮ್ಮೆಯಾದ್ರು ಅಪ್ಪು ಅವರ ಸಮಾಧಿ ದರ್ಶನ ಮಾಡಬೇಕು. ಹಾಗೂ ನಟ ಶಿವರಾಜ್ ಕುಮಾರ್ ಅವರನ್ನಾದ್ರು ಭೇಟಿ ಮಾಡಿಸಿ, ನನ್ನ ಮುಗ್ದ ಮಕ್ಕಳ ಇಷ್ಟಾರ್ಥ ನೆರೆವೇರಿಸಬೇಕು. ಹೀಗಾಗಿ ಯಾರಾದ್ರು ಸಹಾಯ ಮಾಡಬೇಕೆಂದು ಕಣ್ಣೀರಿಟ್ಟಿದ್ದಾರೆ.
ಸೆಲ್ಫಿ ಕೇಳಿದ ಫ್ಯಾನ್ ಮೇಲೆ ರೇಗಾಡಿದ ಬಾಡಿಗಾರ್ಡ್; ಸಿಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ
ಒಟ್ಟಾರೆ ಅಪ್ಪು ಜೀವಂತವಾಗಿ ನಮ್ಮಿಂದ ದೂರವಾದರು ಸಹ ಅವರ ಅಭಿಮಾನಿಗಳ ರೂಪದಲ್ಲಿ ಜೀವಂತವಾಗಿದ್ದಾರೆ. ಹೀಗಾಗಿ ಅಪ್ಪು ಧ್ಯಾನದಲ್ಲಿ ಪ್ರತಿದಿನ ಕಣ್ಣೀರಿಡ್ತಿರುವ ಈ ಮುಗ್ದ ಅಣ್ಣತಂಗಿಯ ದರ್ಶನಕ್ಕೆ ಶಿವಣ್ಣ ಹೋಗಿ ಅವರ ಕೊನೆಯಾಸೆ ಈಡೇರಿಸ್ತಾರ? ಅನ್ನೋದನ್ನ ಕಾದು ನೋಡಬೇಕಿದೆ.