
ಕೆಜಿಎಫ್ ಸರಣಿ ಸಿನಿಮಾದಲ್ಲಿ ದೃಷ್ಟಿಹೀನಾ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ( Krishna G Rao) ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕೆಜಿಎಫ್ (KGF) ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ಕೆಮಿಸ್ಟ್ರೀ ಆಫ್ ಕರಿಯಪ್ಪ (Chemistry of Kariyappa) ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ (Nano narayanappa) ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
'ನಿಮಗೊಂದು ಸಲಹೇ ಕೊಡ್ತೀನಿ. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗಬೇಡು ಸರ್.. ' ಕೆಜಿಎಫ್ ಸಿನಿಮಾ ನೋಡಿದವರಿಗೆ ಈ ಡೈಲಾಗ್ ಗೊತ್ತಿರುತ್ತದೆ. ತಾತ ಹೇಳಿರುವ ಈ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಜಿಎಫ್ ಪಾರ್ಟ್-1 ಮತ್ತು ಪಾರ್ಟ್-2ನ್ಲೂ ಕಾಣಿಸಿಕೊಂಡಿರುವ ನಟ ಕೃಷ್ಣ ಜಿ ರಾವ್ ಅವರು ಕೆಜಿಎಫ್ ತಾತ ಅಂತನೆ ಫೇಮಸ್ ಆಗಿದ್ದಾರೆ. ಇದೀಗ ಕೆಜಿಎಫ್ ತಾತ ಹೀರೋ ಆಗಿ ಕನ್ನಡ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕೃಷ್ಣ ಜಿ ರಾವ್ ನಟನೆಯ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದ್ದು ಫಸ್ಟ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೇಟ್ ಆಗಿದ್ದು, ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸ್ತಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಯಶ್‌ಗೆ 100 ಕೋಟಿ ರೂ. ಆಫರ್ ಮಾಡಿದ್ರಾ ತೆಲುಗು ಸ್ಟಾರ್ ನಿರ್ಮಾಪಕ?
ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಬೆಟ್ಟಿಂಗ್ ದಂಧೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದೀಗ ನ್ಯಾನೋ ನಾರಾಯಣಪ್ಪ (Nano Narayanappa) ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರಪ್ರೇಮಿಗಳನ್ನು ಎಂಟರ್‌ಟೈನ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಇದೊಂದು ಕಾಮಿಡಿ ಎಮೋಷನಲ್ ಸಿನಿಮಾವಾಗಿದ್ದು, ತುಂಬ ಕಾಡುವ ಕಥೆ, ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಅಂತಾರೇ ಕುಮಾರ್.
KGF 2 ತರದ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ರೆ ವಿರೋಧಿಸುತ್ತಿದ್ರು; ಕರಣ್ ಜೋಹರ್
ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಆಗಸ್ಟ್ ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಕುಮಾರ್ ನಿರ್ಮಾಣದ ನ್ಯಾನೋ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.