ಪುನೀತ್ ನಿಧನಕ್ಕೆ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಿಂದ ವಿಶೇಷ ಹಾಡು

By Suvarna News  |  First Published Oct 30, 2021, 6:16 PM IST

ಪುನೀತ್ ಅಕಾಲಿಕ ನಿಧನಕ್ಕೆ, ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ರವರು 'ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ವಿ ಮಿಸ್ ಯೂ' ಎಂದು ವಿಶೇಷವಾದ ಹಾಡನ್ನು ಬಿಡುಗಡೆ ಮಾಡಿದ್ದಾರೆ.


ಚಿತ್ರರಂಗದ ನಟಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹೃದಯಾಘಾತದಿಂದ ( Heart attack) ನಿನ್ನೆ ನಿಧನರಾಗಿದ್ದಾರೆ. ನಟ ಪುನೀತ್ ರಾಜ್ ಕುಮಾರ್‌ಗೆ ಹೃದಯಾಘಾತ ಸಂಭವಿಸಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದರು. ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 

ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುನೀತ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ ಮಾಡುತ್ತಿದ್ದಾರೆ. ನಾನಾ ಊರುಗಳಿಂದ ಬಂದು ಪ್ರೀತಿಯ ನಟ ಅಪ್ಪು ಅಗಲಿಕೆಯನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ. 

Tap to resize

Latest Videos

ಪುನೀತ್‌ ರಾಜ್‌ಕುಮಾರ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ್!

ಪುನೀತ್ ಅಕಾಲಿಕ ನಿಧನಕ್ಕೆ, ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ರವರು (Ananad YouTube Channel) 'ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ವಿ ಮಿಸ್ ಯೂ (We Miss You) ಎಂದು  'ಬೊಂಬೆ ಆಡ್ಸೋನು.. ಮೇಲೆ ಕುಂತೋನು.. ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..' ಹಾಡನ್ನು ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ನಗುಮುಖದ ಪೋಟೋಗಳಿದ್ದು, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ (V.Harikrishna) ದನಿಯಲ್ಲಿ ಹಾಡು ಕೇಳಿ ಬರುತ್ತದೆ. ಹಾಗೂ ಪುನೀತ್ ರಾಜ್‌ಕುಮಾರ್ ಪರಿಚಯ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ.


ಪುನೀತ್ ಜನಿಸಿದ್ದು, 17 ಮಾರ್ಚ್ 1975. ಎಲ್ಲರೂ ಅಪ್ಪು ಎಂದು ಕರೆಯುತ್ತಾರೆ. ಅವರು ಭಾರತೀಯ ನಟ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಮತ್ತು ನಿರ್ಮಾಪಕರು. ಇವರು ಸಣ್ಣ ವಯಸ್ಸಿನಿಂದಲೆ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದರು. ಅವರು 29 ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಪುನೀತ್ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಸಂತ ಗೀತ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ಅವರ ಅಭಿನಯವು ಪ್ರಶಂಸೆಗೆ ಪಾತ್ರವಾಯಿತು. ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಇನ್ನು ಪುನೀತ್ 2002 ರಲ್ಲಿ ಬಿಡುಗಡೆಯಾದ ಅಪ್ಪು ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕ ನಟರಾದರು.

ಅತಿಯಾದ ಜಿಮ್‌ ವರ್ಕೌಟ್ ಅಪ್ಪುಗೆ ಮುಳುವಾಯಿತಾ?

ಪುನೀತ್​ ರಾಜ್​ಕುಮಾರ್ ಅವರ ಅಂತ್ಯಸಂಸ್ಕಾರ ಭಾನುವಾರಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಪುನೀತ್ ಅಣ್ಣ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಹಾಗೂ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ (Basavaraj Bommai) ಅವರು ಖಚಿತ ಪಡಿಸಿದ್ದಾರೆ. ಒಂದು ಕಡೆ ಪುನೀತ್​ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿರುವ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿಗಳು ಪುನೀತ್​ ರಾಜ್​ಕುಮಾರ್ ಅವರ ಕುಟುಂಬದವರ ಬಳಿ ಮಾತನಾಡಿ, ಅಂತ್ಯಕ್ರಿಯೆಯನ್ನು ಮುಂದೂಡಿದ್ದಾರೆ. ಹಾಗೂ ನಾಳೆ ಬೆಳಗಿನ ಜಾವದವರೆಗೂ ಪುನೀತ್ ದರ್ಶನ ಮಾಡಲು ಅನುಕೂಲ ಮಾಡಲಾಗುವುದು. 

"

click me!