* ಅಗಲಿದ ನಟ ಪುನೀತ್ ರಾಜ್ ಕುಮಾರ್ ಗೆ ಅಂತಿಮ ನಮನ
* ಹರಿದು ಬರುತ್ತಲೇ ಇದೆ ಜನಸಾಗರ
* ವಿನೋದ್ ರಾಜ್ ಮತ್ತು ಲೀಲಾವತಿ ಕಣ್ಣೀರು
* ಬಾಳಿನಾಸೆ ಚಿಗುರಿನಲ್ಲಿ ಬಾಡಿಹೋಯಿತೆ.. ಸೇವೇಗಾಗಿ ಕಾದ ಹೂವು ಕಸವ ಸೇರಿತೆ..
ಬೆಂಗಳೂರು(ಅ. 30) ಬಾಳಿನಾಸೆ ಚಿಗುರಿನಲ್ಲಿ ಬಾಡಿಹೋಯಿತೆ.. ಸೇವೆಗಾಗಿ ಕಾದ ಹೂವು ಕಸವ ಸೇರಿತೆ.. ಏನು ತಪ್ಪಿದೇ ಹೇಳಬಾರದೆ... ಈ ಸಾವು ನ್ಯಾಯವೇ.. ಆಧಾರ ನೀನೆಂದು ಈ ಲೋಕ ನಂಬಿದೆ.. ಈ ದೇಹದಿಂದ ದೂರವಾದೆ ಏಕೆ ಅಪ್ಪುವೇ?
ಹಿರಿಯ ನಟಿ ಲೀಲಾವತಿ ( Leelavathi)ಮತ್ತು ನಟ ವಿನೋದ್ ರಾಜ್( Vinod Raj) ಕಣ್ಣೀರಾಗಿದ್ದಾರೆ. ನೋವಾಗುತ್ತಿದೆ.. ತುಂಬಾ ನೋವಾಗುತ್ತಿದೆ... ದೇವರು ಕ್ರೂರಿ.. ಮನಸಿಗೆ ನೆಮ್ಮದಿ ಇಲ್ಲ... ಪುನೀತ್ ರಾಜ್ ಕುಮಾರ್ ನಿಧನದ ನಂತರ ವಿನೋದ್ ರಾಜ್ ಕಣ್ಣೀರಿನಲ್ಲಿಯೇ ಮಾತನಾಡಿದರು. ಇಂಥದ್ದನ್ನು ನೋಡಲು ಸಾಧ್ಯವಿಲ್ಲ ಎಂದರು. ನಮ್ಮನ್ನು ನೆನೆಸಿಕೊಂಡರೆ ನಾವೇ ಪಾಪಿಗಳು ಎನಿಸುತ್ತಿದೆ ಎನ್ನುತ್ತ ಹೋದರು.
ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಭಾವುಕ ಪತ್ರ
ನೋವಿನಲ್ಲಿಯೇ ವಿನೋದ್ ರಾಜ್ ಅಪ್ಪುವನ್ನು ನೆನೆದಿದ್ದಾರೆ. ಶಿವಣ್ಣ ಅವರು ಈ ಕಷ್ಟವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅವರನ್ನೇ ಅವರು ಕೇಳಿಕೊಂಡಿದ್ದಾರೆ. ಇಲ್ಲಿ ಮಾತಿಲ್ಲ ಎಲ್ಲವೂ ಬರಿಯ ಮೌನ. ಡಾ. ರಾಜ್ ಬಿಟ್ಟರೆ ನಂತ್ರೆ ನನಗೆ ಪುನೀತ್ ಅವರಲ್ಲೇ ಆ ಪ್ರೀತಿ ಕಾಣಿಸ್ತು ಎಂದು ಕಣ್ಣೀರು ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ (Puneeth Rajkumar) ನಂತರ ದೊಡ್ಡದೊಂದು ಶೂನ್ಯ ಆವರಿಸಿದೆ. ಸ್ಯಾಂಡಲ್ ವುಡ್ ನಟರು, ಟಾಲಿವುಡ್ ಮತ್ತು ಬಾಲಿವುಡ್ ಸ್ನೇಹಿತರು ಪುನೀತ್ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರ ಭಾನುವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಕೆ ಮಾಡಲಾಗುವುದು. ಜೂ. ಎನ್ ಟಿಆರ್, ಬಾಲಯ್ಯ, ಪ್ರಿಯಾಂಕಾ ಉಪೇಂದ್ರ, ರಮ್ಯಾ ಸೇರಿದಂತೆ ಪುನೀತ್ ಆಪ್ತರೆಲ್ಲರೂ ಅಂತಿಮ ನಮನ ಸಲ್ಲಿಸಿದರು. ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.