ಹಾರರ್‌ ಸ್ಟೋರಿ ಸ್ಕೇರಿ ಫಾರೆಸ್ಟ್‌; ಜಯಪ್ರಭು ಸಿನಿಮಾ ಫೆ.26ರಂದು ಬಿಡುಗಡೆ!

By Kannadaprabha News  |  First Published Feb 12, 2021, 10:31 AM IST

ಜಯಪ್ರಭು ಆರ್‌ ಲಿಂಗಾಯತ ಮೂಲತಃ ತುಮಕೂರಿನವರು. ಇಂಜಿನಿಯರಿಂಗ್‌ ಕಲಿತು ಏನಾದರೂ ಸಾಧನೆ ಮಾಡಬೇಕು ಅಂತ ಮುಂಬೈ ಸೇರಿಕೊಂಡರು. 


ಅಲ್ಲಿ ಕೆಲವು ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಗಳಿಸಿ ತಮ್ಮದೇ ಅನೇಕ ಕಂಪನಿಗಳನ್ನು ಸ್ಥಾಪಿಸಿ ನೂರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಅವರ ಹೊಸ ಸಿನಿಮಾ ಸಾಹಸ ಸ್ಕೇರಿ ಫಾರೆಸ್ಟ್‌.

ನಿರ್ದೇಶಕ ಸಂಜಯ್‌ ಅಭೀರ್‌ ಬಂದು ಜಯಪ್ರಭು ಅವರಿಗೆ ‘ಸ್ಕೇರಿ ಫಾರೆಸ್ಟ್‌’ ಕತೆ ಹೇಳಿ ಹಿಂದಿ ಸಿನಿಮಾ ಮಾಡೋಣ ಎಂದರು. ಆದರೆ ಜಯಪ್ರಭು ಅವರು ಮಾತ್ರ ಇಲ್ಲ ಈ ಸಿನಿಮಾ ಕನ್ನಡದಲ್ಲೂ ಮಾಡಬೇಕು ಅಂತ ಕನ್ನಡಕ್ಕೂ ತಂದಿದ್ದಾರೆ. ಈ ಸಿನಿಮಾ ಗೆದ್ದರೆ ಕನ್ನಡದಲ್ಲಿ ಇನ್ನೂ ಅನೇಕ ಸಿನಿಮಾ ಮಾಡುವ ಆಲೋಚನೆ ಹೊಂದಿದ್ದಾರೆ.

Tap to resize

Latest Videos

ಸಿನಿಮಾ ಟೈಟಲ್‌ ಕಾರ್ಡ್‌ ಸ್ಥಳೀಯ ಭಾಷೆಯಲ್ಲೇ 

ಇದೊಂದು ಹಾರರ್‌ ಚಿತ್ರ. ಕಾಡಿಗೆ ಹೋಗುವ ವಿದ್ಯಾರ್ಥಿಗಳ ಲೈಫಿನ ಆಗುಹೋಗುಗಳೇ ಕತೆ. ಫೆ.26ರಂದು ರಿಲೀಸಾಗುವ ಈ ಚಿತ್ರದ ಹೀರೋ ಮತ್ತು ನಿರ್ಮಾಪಕ ಜಯಪ್ರಭು ಆರ್‌ ಲಿಂಗಾಯತ. ಕೊಡಗಿನ ಕುವರಿ ಟೀನಾ ಪೊನ್ನಪ್ಪ, ನಟ ಜೀತ್‌ ರಾಯ್‌ ದತ್‌, ಕಲ್ಪನಾ ಸಾಂಗ್ನಿ, ಬೇಬಿ ಪೂಜಾ, ಐಶ್ವರ್ಯಾ ನಟಿಸಿದ್ದಾರೆ. ಪ್ರಕಾಶ್‌, ದೇವರಾಜ್‌ ಸಾಹಿತ್ಯ ರಚಿಸಿದ್ದಾರೆ. ನಾಗೇಂದ್ರ ಗೆದಿಯಾ ಛಾಯಾಗ್ರಹಣ ಮಾಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಈ ಎಲ್ಲಾ ವಿಚಾರ ಹೇಳಿ ಕಷ್ಟಸುಖ ಮಾತನಾಡಿತು. ಕಾರ್ಯಕ್ರಮದಲ್ಲಿ ವಿದ್ವಾನ್‌ ಪಂಚಾಕ್ಷರಯ್ಯ ಮತ್ತು ಪರಮಶಿವಯ್ಯ ಇದ್ದರು.

click me!