ನಾಲ್ವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಕನ್ನಡದ ನಟಿ ಈಕೆ! ಇವ್ರ ಸ್ಟೋರಿಯೇ ಕುತೂಹಲ...

Published : May 01, 2025, 07:42 PM ISTUpdated : May 02, 2025, 10:22 AM IST
 ನಾಲ್ವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಕನ್ನಡದ ನಟಿ ಈಕೆ! ಇವ್ರ ಸ್ಟೋರಿಯೇ ಕುತೂಹಲ...

ಸಾರಾಂಶ

ನಾಲ್ವರು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿರುವ ಕನ್ನಡದ ನಟಿಯೊಬ್ಬರ ಕುರಿತು ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಒಬ್ಬರಲ್ಲ, ಇಬ್ಬರಲ್ಲ ನಾಲ್ಕು ನಟರನ್ನು ಮುಖ್ಯಮಂತ್ರಿ ಪಟ್ಟಕಕ್ಕೆ ಏರಿಸಿರುವ ಕೀರ್ತಿ ಈ ನಟಿಗೆ ಸಲ್ಲುತ್ತದೆ. ತಮ್ಮ 74 ವರ್ಷಗಳ ಸಿನಿ ಪಯಣದಲ್ಲಿ, ಈ ನಟಿ ನಾಲ್ಕು ಮುಖ್ಯಮಂತ್ರಿ ಜೊತೆ, ಕೆಲಸ ಮಾಡಿದ್ದಾರೆ. ಅವರ ಹೆಸರೇ ಸಾಹುಕಾರ್ ಜಾನಕಿ. ಬ್ಲ್ಯಾಕ್​ ಆ್ಯಂಡ್​ ಯುಗದಿಂದ ಹಿಡಿದು ತೀರಾ ಇತ್ತೀಚಿನವರೆಗೂ ಕೆಲಸ ಮಾಡಿದ್ದಾರೆ ಇವರು. ಒಂದು ಕಾಲದ ಬ್ಯೂಟಿ ಕ್ವೀನ್​ ಎಂದೇ ಫೇಮಸ್​ ಆದವರು ಕೂಡ. ಅವರು ಹೆಚ್ಚಾಗಿ ತೆಲಗುವಿನಲ್ಲಿ ನಟಿಸಿದರೂ ಸ್ಯಾಂಡಲ್​ವುಡ್​ನಲ್ಲಿಯೂ ಮಿಂಚಿದವರು. ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ `ದೇವಕನ್ನಿಕಾ`. `ಸಾಹುಕಾರ್` ಚಿತ್ರದಲ್ಲಿನ ಅವಿಸ್ಮರಣೀಯ ಅಭಿನಯದಿಂದಾಗಿ ಸಾಹುಕಾರ್ ಎಂಬ ನಾಮಧೇಯ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಉಳಿದುಕೊಂಡಿತು. ಭಾಷೆಗಳ ಗಡಿ ಮೀರಿ ಪ್ರಮುಖ ನಟಿಯಾಗಿ ಹೆಸರು ಗಳಿಸಿದ ಸಾಹುಕಾರ್ ಜಾನಕಿ ಅವರು ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುಂಚೆ ಆಕಾಶವಾಣಿ ಕಲಾವಿದೆಯಾಗಿದ್ದರು.

ಗೌರಿ, ಭಾಗ್ಯ ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿದ್ದ ಸಾಹುಕಾರ್ ಜಾನಕಿ ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ   400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ದವೇದಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಅಭಿನಯಿಸಿ ಮನೆಮಾತಾಗಿದ್ದಾರೆ. ಇವರ ಸಿನಿಮಾ ಕೃಷಿಯಲ್ಲಿನ ಸಾಧನೆಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ, ಕಲೈಮಾಮಣಿ, ಎಂ.ಜಿ.ಆರ್ ಪ್ರಶಸ್ತಿಗಳು ಸಂದಿವೆ. ದಕ್ಷಿಣ ಭಾರತದ ಮತ್ತೋರ್ವ ಜನಪ್ರಿಯ ತಾರೆ ಕೃಷ್ಣ ಕುಮಾರಿ ಇವರ ತಂಗಿಯಾಗಿದ್ದು, ಆಕೆ ಕೂಡ ಒಂದು ಕಾಲದಲ್ಲಿ ಸಿನಿರಂಗವನ್ನು ಆಳಿದವರೇ. 

ವಿಷ ಹಾಕಿದೋರಿಗೆ ಶಿಕ್ಷೆ ಆಗ್ಲೇ ಇಲ್ಲ... ಆ ಘಟನೆ ವಿವರಿಸಿದ ಮಾಸ್ಟರ್​ ಆನಂದ್​!

 1931 ರಲ್ಲಿ ಜನಿಸಿದ ಇವರು  14 ನೇ ವಯಸ್ಸಿನಲ್ಲಿ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುವಾಗ ಹಲವಾರು ನಾಟಕಗಳಲ್ಲಿ ನಟಿಸಿದರು. ಇವರ ಮದುವೆ ಕೂಡ ಚಿಕ್ಕ ವಯಸ್ಸಿನಲ್ಲಿಯೇ  ನೆರವೇರಿದೆ.  ಮೊದಲೇ ಹೇಳಿದಂತೆ, ಸಾಹುಕಾರ್ ಚಿತ್ರದಲ್ಲಿ ಸುಬ್ಬುಲು ಪಾತ್ರದಲ್ಲಿ ಎನ್‌ಟಿಆರ್‌ ಎದುರು ನಟಿಸಿದ್ದರು. ಈ ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರದ ಮೂಲಕ ಆಕೆಯನ್ನು ಸಾಹುಕಾರ್ ಜಾನಕಿ ಎಂದು ಕರೆಯಲಾಯಿತು. ಅದರ ನಂತರ, ಅವರು ಅನೇಕ ಚಿತ್ರಗಳಲ್ಲಿ ನಾಯಕಿ ಮತ್ತು ಸೈಡ್ ಆರ್ಟಿಸ್ಟ್ ಆಗಿ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಳಿಕ ಯಶಸ್ಸೇ ಅವರನ್ನು ಬೆನ್ನಟ್ಟಿತು.
 
ಅಂದಹಾಗೆ ಇವರು ನಾಲ್ವರು ಸಿಎಂ ಜೊತೆ ನಟಿಸಿದ್ದಾರೆ. ಅವರೆಂದರೆ, ಎನ್‌ಟಿಆರ್, ಎಂಜಿಆರ್, ಜಯಲಲಿತಾ ಮತ್ತು ಕರುಣಾನಿಧಿ.  ಹೀಗಾಗಿಯೇ ಅವರಿಗೆ ನಾಲ್ವರು ಸಿಎಂಗಳ ಜತೆ ನಟಿಸಿದ ಮನ್ನಣೆ ಸಿಕ್ಕಿದೆ.

ಅರೆಂಜ್ಡ್​ ಮ್ಯಾರೇಜ್​ನಲ್ಲಿ ಚಪಾತಿ ಊದತ್ತೆ, ಲವ್​ ಮ್ಯಾರೇಜ್​ನಲ್ಲಿ.... ಯೋಗರಾಜ ಭಟ್ರ ತರ್ಲೆ ಉತ್ರ ಕೇಳಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ