
ಕಿರಣ್ ಎಸ್ ವಿಪ್ರ
ಬದಲಾವಣೆ. ಇದು ಕಾಲದ ನಿಯಮ. ಈ ಕಾಲ ಅನ್ನೋದಕ್ಕಿಂತಲೂ ದೊಡ್ದ ಮಾಯಾಜಾಲ ಮತ್ತೊಂದು ಇರಲಾರದು. ಏಕೆಂದರೆ ಎಂತೆಂಥವರನ್ನಾಗಲೀ ಇದು ಮಾಯ ಮಾಡಿಸಿಬಿಡುತ್ತೆ. ಸದ್ಯಕ್ಕೆ ಈ ಉಲ್ಲೇಖವನ್ನು ನಮ್ಮದೇ ಆದ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ನೋಡೋಣ. ಸಿನಿಮಾ ಅಂದ್ರೆ ಒಂದು ಸಿನಿಮಾ ಟೈಟಲ್ ಕೆಳಗೆ ದುಡಿಯಬೇಕಾದ್ದು ಎಲ್ಲ ರೀತಿಯ ಕ್ರಿಯೇಟರ್ ಗಳಿಗೆ ಅನಿವಾರ್ಯವಾಗಿಬಿಡುತ್ತೆ. ತಮ್ಮ ಪ್ರತಿಭೆಯಿಂದಾಗಿ ಆ ಸಿನಿಮಾಗೆ ಮನ್ನಣೆ ಸಿಕ್ಕರೂ ಅದರ ಬಹುಪಾಲನ್ನ ನಿರ್ದೇಶಕ, ನಾಯಕ ನಾಯಕಿಯರೇ ಹರಿದು ತಿಂದುಬಿಡ್ತಾರೆ.
ಹೀಗ್ಯಾಕೆ ಬರೆದಿದ್ದಾರೆ ಅಂದ್ಕೋತಿದ್ದೀರಾ? ಇವತ್ತಿನ ಎಂಟ್ರಟೈನ್ನ್ಮೆಂಟ್ ಪೋಡಿಯಂನಲ್ಲಿರೋ ಮನಃಸ್ಥಿತೀನೇ ಇಂಥದ್ದು! ಕಾರಣ? ಪ್ರೇಕ್ಷಕ ಅಪ್ ಗ್ರೇಡ್ ಆಗ್ಬಿಟ್ಟಿದ್ದಾನೆ. ಮನರಂಜನೆ ಅಂದ್ರೆ ಸಿನಿಮಾ ಅನ್ನೋದು ಪ್ರೇಕ್ಷಕನ ತಲೆಯಿಂದ ಬಹುಭಾಗ ಖಾಲಿ ಆದಂತಿದೆ. ಹಾಗಗಿ ಮೂರ್ನಾಲ್ಕು ದಶಕದ ದಿಗ್ಗಜರಿಂದ ಹಿಡಿದು ಇಂದಿನ ಖ್ಯಾತನಾಮರ ಪಾಲಿಗೆ ಲೈಮ್ ಲೈಟ್ ಆಫ್ ಆಗ್ಬಿಟ್ಟಿದೆ! ಸಿನಿಮಾಗಳಿಗಾಗಿ ಎಲ್ಲೆಡೆ ಮಲ್ಟಿಪ್ಲೆಕ್ಸ್ ಗಳನ್ನ ಕಟ್ಟಿ ಕೂತಿದ್ದವರಿಗೆ ಈಗ ಆಕಾಶ ಆಲ್ ಮೋಸ್ಟ್ ತಲೆ ಮೇಲೆ ಬಿದ್ದಹಾಗಾಗಿದೆ.
ಸೇತುಪತಿ ಮುಂದೆ ಭೀಮನ ಹವಾ: ಪರಭಾಷೆಗಳಲ್ಲಿ ದುನಿಯಾ ವಿಜಯ್‌ಗೆ ಬೇಡಿಕೆ
ಹಾಗಾದ್ರೆ ಇವರೆಲ್ಲರ ಪಾಲಿನ ಪ್ರೇಕ್ಷಕ ಎಲ್ಲಿಗೆ ಹೋದ?: ವೈಜ್ಞಾನಿಕ ಜಗತ್ತು ಎಲ್ಲ ಆಯಾಮಗಳಿಗೆ ವಿಸ್ತಾರಗೊಳ್ಳುತ್ತಿದ್ದಂತೆ, ಕ್ರಿಯೇಟೀವ್ ವರ್ಲ್ಡ್ ಮೇಲೆ ಅದರ ಪ್ರಭಾವ ಅಗಾಧವಾಗಿ ಆಗಿದೆ. ಸಿನಿಮಾದ ಸಿನಿನೀರಿನ ನದಿಯೊಳಗೆ ಒಂದಿಡೀ ಸಮುದ್ರದಷ್ಟು ಪ್ರವಾಹ ಹರಿದುಬಂದಂತಾಗಿದೆ! ಮನರಂಜನೆಯ ಹೊಸ ಹೊಸ ಆಯಾಮಗಳಿಗೆ ಪ್ರೇಕ್ಷಕ ತನ್ನನ್ನು ತಾನು ತೆರೆದುಕೊಳ್ಳುತ್ತಾ ಹೋಗುತ್ತಿದ್ದಂತೆ, ಸಿನಿಮಾ ಹಾಲ್ ಗಳು ಬರಿದಾಗುತ್ತಿವೆ. ಗ್ಲೋಬಲ್ ಅನಿಮೇಷನ್ ಇಂಡಸ್ಟ್ರೀ, ಗೇಮಿಂಗ್, ಡಿಜಿಟಲ್ ಕಂಟೆಂಟ್, ಓಟಿಟಿ, ಪಾಡ್‍ಕ್ಯಾಸ್ಟ್, ಸ್ಟೋರೀ ಟೆಲ್ಲಿಂಗ್ ನಂಥಾ ಹಲವು ಮನರಂಜನಾ ವೇದಿಕೆಗಳು, ಇದೆಲ್ಲದರ ಮೇಲೆ ವೈಯಕ್ತಿಕ ಕಂಟೆಂಟ್ ಕ್ರಿಯೇಟರ್ಸ್. ಇವು ಹೆಸರಿಸಲು ಕೆಲವು ಮಾತ್ರ.
ಮಕ್ಕಳಿಗೆ, ವಯಸ್ಕರಿಗೆ, ಅವರವರ ಇಷ್ಟದ ವಿಷಯಗಳಿಗೆ ಬದ್ಧವಾದ ಅಸಂಖ್ಯಾತ ಮನರಂಜನಾ ವೇದಿಕೆಗಳಿವೆ. ಸಿನಿಮಾಗೆ ಒಬ್ಬ ಅಥವಾ ಇಬ್ಬರು ನಿರ್ದೇಶಕರು ಇದ್ರು. ಅವರ ಪರಿಶ್ರಮ, ಅದೃಷ್ಟ, ಅವರ ಚಿತ್ರಕ್ಕೆ ಸಿಕ್ಕ ಮನ್ನಣೆ, ಇದೆಲ್ಲದರ ಬಗ್ಗೆ ಚರ್ಚೆಗಳಾಗ್ತಿದ್ವು. ಆದರೆ ಈ ದಿನ, ಪ್ರತಿಯೊಬ್ಬ ವ್ಯಕ್ತಿಯ ಕೈಯ್ಯಲ್ಲಿ ತನ್ನದೇ ಮಾಯಾಲೋಕ ಸೃಷ್ಟಿಸುವ ಶಕ್ತಿಯನ್ನ ತಂತ್ರಜ್ಞಾನ ಕೊಟ್ಟುಬಿಟ್ಟಿದೆ. ಪರಿಶ್ರಮ ಹಾಕಿದರೆ ಜನಸಾಮಾನ್ಯನೂ ವಾರದಲ್ಲಿ 1 ಮಿಲಿಯನ್ ವ್ಯೂ ಗಳ ಗುರಿ ಮುಟ್ಟಿ, ಕಂಟೆಂಟ್ ಕ್ರಿಯೇಟರ್ ಎಂಬ ಗರಿಯನ್ನು ಮುಡಿಗೇರಿಸಿಕೊಳ್ಳಬಲ್ಲ. ಈ ದಿನದ ಒಳ್ಳೆಯ ಕಂಟೆಂಟ್ ಕ್ರಿಯೇಟರ್, ಜನರ ದೃಷ್ಟೀಲಿ ಒಬ್ಬ ಸಿನಿಮಾ ನಿರ್ದೇಶಕನಿಗಿಂತಲೂ ಕಡಿಮೆಯೇನಿಲ್ಲ.
ಇನ್ನು ವಿಶೇಷವಾಗಿ ಕನ್ನಡ ಸಿನಿಮಾ ಬಗ್ಗೆ ಹೇಳಬೇಕೆಂದರೆ, ಕಳೆದ ಎರಡು ದಶಕಗಳು ಕನ್ನಡ ಸಿನಿಮಾಗೆ ಒಂದು ರೋಲರ್ ಕೋಸ್ಟರ್ ರೈಡ್ ಆಗಿತ್ತು. ಬೆರಳೆಣಿಕೆಯಷ್ಟು ಒಳ್ಳೆಯ ಸಿನಿಮಾ ಬಂದಿವೆ. ಆದರೆ ಹೆಚ್ಚಿನ ಸಿನಿಮಾಗಳ ಉದ್ದೇಶ ಅಷ್ಟಕ್ಕಷ್ಟೇ. ಲಾಂಗು, ಮಚ್ಚು, ಸೊಂಟದ ಕೆಳಗಿನ ಭಾಷೆ, ಕೀಳು ಅಭಿರುಚಿ, ರಾಜಕೀಯ ಉದ್ದೇಶದಿಂದ ಮಾಡೋ ಸಿನಿಮಾ, ಕೊನೆಗೆ ನಷ್ಟ ಆಯ್ತು ಅಂತ ತೋರಿಸೋ ಉದ್ದೇಶದೊಂದಿಗೆ ಸಿನಿಮಾ ಮಾಡಿದವ್ರೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ನೋಡೋದಕ್ಕೆ ಥಿಯೇಟರ್ ವರೆಗೆ ಜನರನ್ನ ಸೆಳೆದು ತರೋದಕ್ಕೆ ಸಾಧ್ಯ ಆಗ್ತಿದ್ಯಾ? ಆತ್ಮವಿಮರ್ಶೆ ಮಾಡ್ಕೋಬೇಕು. ಕನ್ನಡ ಚಿತ್ರರಂಗಕ್ಕೆ ಇದು ಉಳಿವಿನ ಪ್ರಶ್ನೆ.
ಈ ವರ್ಷ ಇದುವರೆಗೆ ಚಂದನವನದಲ್ಲಿ ಯಾವುದೇ ದೊಡ್ಡ ಹಿಟ್ ಸಿನಿಮಾ ಬಂದಿಲ್ಲ. ದೊಡ್ದ ದೊಡ್ದ ಸ್ಟಾರ್ ಗಳು ಮನೇಲಿ ಕೂತಿದ್ದಾರೆ ಇಲ್ಲವೇ ಉಳುಮೆ ಮುಂತಾದ ಚೆಟುವಟಿಕೆಗಳಲ್ಲಿ ತೊಡಗಿದ್ದಾರೆ. ಒಟ್ಟಾರೆ ಸಿನಿಮಾ ನಿರ್ಮಾಪಕರು ಮತ್ತು ಮಾರ್ಕೆಟಿಂಗ್ ನವರ ಅಲ್ಪತೃಪ್ತಿಯಿಂದಾಗಿ ಸಿನಿಮಾ ಭವುಷ್ಯ ತೂಗುಗತ್ತಿಯ ಕೆಳಗಿದೆ. ದೊಡ್ದ ಅವಕಾಶವನ್ನು ಕೈಗೆತ್ತಿಕೊಳ್ಳುವ ಸಾಮರ್ಥ್ಯ ಇಲ್ಲವೋ ಅಥವಾ ಇವರ ಕ್ರಿಯಾಶೀಲತೆಯೇ ಬತ್ತಿಹೋಗಿದೆಯೋ ಎಂಬ ಅನುಮಾನ ಬಂದರೆ ಆಶ್ಚರ್ಯವೇನೂ ಇಲ್ಲ.ಮೂವಾತ್ತೈದು ಸಾವಿರ ಕೋಟಿ ಆದಾಯ ಹೊಂದಿರುವ ಯೂಟ್ಯೂಬ್, ಮೆಟಾ, ಜೀ5, ಜಿಯೋ ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್, ಸೋನೀ ಲೈವ್, ಅಮೆಜಾನ್ ಎಮ್.ಎಕ್ಸ್ ಪ್ಲೇಯರ್, ಅಮೆಜಾನ್ ಪ್ರೈಮ್ ವಿಡಿಯೋ, ಈ ಎಲ್ಲ ಓಟಿಟಿ ಪ್ಲಾಟ್‍ಫಾರ್ಮ್ ಗಳಲ್ಲಿ ಕನ್ನಡದ ಪಾಲು ಚಿಕ್ಕದೇ ಇದ್ದರೂ, ಚಲನಚಿತ್ರಗಳನ್ನ ಜನ ಸಿನಿಮಾ ಹಾಲ್ ಬದಲಿಗೆ ಇಲ್ಲೇ ನೋಡೋ ಮನಃಸ್ಥಿತಿಗೆ ಬಂದಿದ್ದಾಗಿದೆ.
ಈ 10 ಕಾರಣಗಳಿಗಾಗಿ ಸೂರ್ಯರ ರೆಟ್ರೋ ಸಿನಿಮಾ ಥಿಯೇಟರ್‌ನಲ್ಲೇ ನೋಡಬೇಕು!
ಚಿತ್ರರಂಗ ಕೈಕಟ್ಟಿ ಕೂತಿರೋದು ನೋಡ್ತಿದ್ರೆ, "ಎಣ್ಣೆ ಬಂದಾಗ ಕಣ್ ಮುಚ್ಚಿದ್ರಂತೆ" ಅನ್ನೋ ಗಾದೆ ನೆನಪಾಗುತ್ತೆ. ಆದರೆ ಕಣ್ಣಿಗೆ ರಾಚುವ ಸತ್ಯ ಒಂದಿದೆ. ಎಂಥಾ ಮಾಡ್ರನ್ ಪ್ರೇಕ್ಷಕನೂ ಕೂಡ ತನ್ನ ನೆಚ್ಚಿನ ಹಿಂದಿನ ಕಾಲದ ರಿಯಲ್ ಕಂಟೆಂಟ್ ನ ಇಂದಿಗೂ ಮರೆತಿಲ್ಲ, ಮರೆಯುವಂತೆ ಕಾಣ್ತಿಲ್ಲ. ನೆಲದ ಜೊತೆ ಸಂಬಂಧವಿರುವ ಕಂಟೆಂಟ್ ಎಲ್ಲವನ್ನೂ ಭಾರತೀಯ ಪ್ರೇಕ್ಷಕ ಸ್ವೀಕಾರ ಮಾಡಿದ್ದಾನೆ. ಒಟ್ಟಾರೆ, ಈಗಿನ ಸುದ್ದಿ ಇಷ್ಟೇ. ಪ್ರೇಕ್ಷಕನ ಈಗ ಸಿನಿಮಾ ಹಾಲ್ ಇಂದ ‘ಗಾಯಬ್’ ಆಗಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.