ರೇಖಾ ಜಗದೀಶ್ ಮಾಡಿದ ಅರೋಪಗಳನ್ನು ಸುಳ್ಳು ಎಂದು ಸಾಭೀತು ಮಾಡಲು ಮುಂದಾದ ಗೆಳೆಯ ಸುರೇಶ್.....
ಕನ್ನಡ ಚಿತ್ರರಂಗ ಖ್ಯಾತ ನಿರ್ಮಾಪಕ, ವಿತರಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಕೆಲವು ತಿಂಗಳುಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡ ಸುದ್ದಿಯಾಗಿತ್ತು. ಜಗದೀಶ್ ಸಾವಿಗೆ ಅವರ ಬ್ಯುಸಿನೆಸ್ ಪಾರ್ಟನರ್‌ಗಳು ಕಾರಣ ಎಂದು ಪತ್ನಿ ರೇಖಾ ದೂರು ನೀಡಿದ್ದರು. ರೇಖಾ ಮಾಡಿದ ಆರೋಪ ಸುಳ್ಳು ಎಂದು ಸ್ನೇಹಿತರು ಕೋರ್ಟ್ ಮೆಟ್ಟಿಲು ಏರಿದ್ದರು. ಆತ್ಮಹತ್ಯೆ ಪ್ರಚೋದನೆ ಅರ್ಜಿಯನ್ನು ಕೋರ್ಟ್ ವಜಾಗೊಳ್ಳಿಸಿದೆ. ತೀರ್ಪು ಬರುತ್ತಿದ್ದಂತೆ ಸ್ನೇಹಿತರ ಪ್ರೆಸ್‌ಮೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
'ನನ್ನ ಜೊತೆ ಜಗದೀಶ್ ಇದ್ದರೆ ಅವರ ಅಸಿಸ್ಟೆಂಟ್ ಮೊಬೈಲ್ ಫೋನ್‌ನಲ್ಲಿ ಸ್ಪೀಕರ್ ಆನ್ ಮಾಡಿ ಅವರ ಮನೆಯವರ (ರೇಖಾ ಜಗದೀಶ್) ಜೊತೆ ಮಾತನಾಡಿಸುತ್ತಿದ್ದರು. ಸ್ನೇಹಿತರಾದ ನಾವು ಏನು ಮಾತನಾಡುತ್ತೀವಿ ಎಂದು ಕೇಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದರು. ಜಗದೀಶ್ ಅವರನ್ನು ಮನೆಯಿಂದ ಹೊರಗೆ ಬಿಡುತ್ತಲೇ ಇರಲಿಲ್ಲ. ಅವರ ಮನೆಯಲ್ಲಿ ಏನು ಸಮಸ್ಯೆ ಇದೆ ಎಂದು ಭಗವಂತನಿಗೆ ಗೊತ್ತಿದೆ..ಒಟ್ನಲ್ಲಿ ಜಗದೀಶ್ ತುಂಬಾ ಕೆಳಗೆ ಬಂದಿದ್ದ ಅವನ ಬಾಡಿ ತುಂಬಾ ಶೇಕ್ ಆಗುತ್ತಿತ್ತು...ಚಿನ್ನದಂತ ವ್ಯಕ್ತಿಯನ್ನು ಕಳೆದುಕೊಂಡ್ವಿ. ಈಗಲೂ ಆಫೀಸ್‌ಗೆ ಹೋಗಲು ಆಗುತ್ತಿಲ್ಲ. ಒಂದೇ ಟೇಬಲ್‌ಗೆ ಮೂರು ಖುರ್ಚಿ....ಅದನ್ನು ಹಾಳು ಮಾಡಿ ಬಿಟ್ಟರು ರೇಖಾ. ಇವತ್ತಿಗೂ ಆ ಚೇರ್ ಮೇಲೆ ಕುಳಿತುಕೊಳ್ಳಲು ಆಗಿಲ್ಲ ಆ ಘಟನೆ ನಡೆದ ದಿನದಿಂದ ನಾವು ಆಫೀಸ್‌ಗೆ ಹೋಗಿಲ್ಲ. ಪೊಲೀಸರು ಬಂದು ಆಫೀಸ್ ಸೀಜ್ ಮಾಡಲು ಬಂದು ನಾನು ಹೋಗಿಲ್ಲ...ನನಗೆ ಆಫೀಸ್ ಬೇಡ ನಾನು ಓಪನ್ ಮಾಡಲ್ಲ ಅಂತ ಹೇಳಿದ್ದೀನಿ. ಜಗದೀಶ್ ತಂದೆ ಎಚ್‌ಜಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದರು, ನನ್ನ ತಂದೆ ಪ್ರೆಸ್ ಕರ್ಸಪಾಂಡೆಂಟ್....ಏನೂ ಇಲ್ಲದೆ ನಾವು ಮೂರು ಜನರ ಸ್ನೇಹಿತರು ಸೇರಿಕೊಂಡು ಮಾಡಿರುವುದು. ಒಂದೇ ಬಿಲ್ಡಿಂಗ್‌ನ 60 ಕೋಟಿಗೆ ಮಾರಾಟ ಮಾಡಿದ್ದೀವಿ' ಎಂದು ಸೌಂದರ್ಯ ಸುರೇಶ್ ಸ್ಪಷ್ಟನೆ ಮಾತನಾಡಿದ್ದಾರೆ.
'ಸೌಂದರ್ಯ ಕಂಸ್ಟ್ರಕ್ಷನ್ ಲಾಸ್‌ನಲ್ಲಿ ನಡೆಯುತ್ತಿತ್ತು ನಾವೇ ಸ್ನೇಹಿತರು ಇದ್ದ ಕಾರಣ ನಮ್ಮ ಮೇಲೆ ಆರೋಪ ಬಂದಿದೆ. 37 ವರ್ಷಗಳಿಂದ ನಾವು ಜೊತೆಗಿದ್ದ ಕಾರಣ ಸುಲಭವಾಗಿ ನಮಗೆ ಟಾರ್ಗೆಟ್ ಮಾಡಿದ್ದಾರೆ. ಸಿನಿಮಾ ಮತ್ತು ಪರ್ಸನಲ್ ವಿಚಾರವಾಗಿ ನಾವು ತಲೆ ಹಾಕುತ್ತಿರಲಿಲ್ಲ, ಫ್ಯಾಮಿಲಿ ಜೊತೆ ಬರುತ್ತಿದ್ವಿ ಹೋಗುತ್ತಿದ್ವಿ. ಸೌಂದರ್ಯ ಕಂಸ್ಟ್ರಕ್ಷನ್ ವ್ಯಪಾರಕ್ಕೆ ಮೂರು ಜನ ಒಟ್ಟಿಗೆ ಹೋಗುತ್ತಿದ್ವಿ. ನಾವು ಇಷ್ಟು ದಿನ ಸಂಪಾದನೆ ಮಾಡಿದ ಪ್ರತಿಯೊಂದನ್ನು ರೇಖಾ ಹಾಳು ಮಾಡಿಬಿಟ್ಟರು. ಹೈಕೋರ್ಟ್ ಕೇಸ್‌ನ ಸ್ವಾಷ್ ಮಾಡಿದ ಮೇಲೆ ನಮಗೆ ನೆಮ್ಮದಿ ಸಿಕ್ಕಿದೆ. ನಾಲ್ಕು ತಿಂಗಳು ಕಷ್ಟ ಪಟ್ಟಿದ್ದೀವಿ 22 ದಿನ ಊಟ ಇಲ್ಲ ನಿದ್ರೆ ಇಲ್ಲ..ಊರು ಬಿಟ್ಟು ಹೋಗಿದ್ದಾರೆ ಅಂತ ಸುಳ್ಳು ಹೇಳಿದ್ದಾರೆ...ನಾಲ್ಕು ತಿಂಗಳು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ. 306 ಸೆಕ್ಷನ್ ಹಾಕಿದ ಮೇಲೆ ಹೇಗೆ ತಲೆ ಎತ್ತಿಕೊಂಡು ಜೀವನ ಮಾಡುವುದು. ಪೊಲೀಸರು ಮನೆಗೆ ಬಂದು ನನ್ನ ಮಗನನ್ನು ನಾಲ್ಕು ಗಂಟೆಗಳ ಕಾಲ ಡ್ರಿಲ್ ಮಾಡಿದ್ದಾರೆ, ನನ್ನ ಪತ್ನಿಯನ್ನು ಪ್ರಶ್ನಿಸಿದ್ದಾರೆ. ನಾವು ಇದುವರೆಗೂ ಏನು ಮಾಡಿದ್ದೀವಿ ನಮಗೆ ಗೊತ್ತಿಲ್ಲ ಆದರೆ ನ್ಯಾಯ ನಮ್ಮ ಪರವಾಗಿ ನಿಂತಿದೆ' ಎಂದು ಸುರೇಶ್ ಹೇಳಿದ್ದಾರೆ.