ಕಿಚ್ಚ ಸುದೀಪ್ ಈ ಮಾತಿಗೆ 'ಡಿ ಬಾಸ್' ಫ್ಯಾನ್ಸ್ ಫಿದಾ ಆಗ್ಬಿಟ್ರಾ? ಸ್ವಲ್ಪ ಈ ಕಡೆ ಕಣ್ಣು ಹಾಯಿಸಿ..!

By Shriram BhatFirst Published Sep 5, 2024, 12:27 PM IST
Highlights

ನಾನೊಂದು ಮಾತು ಹೇಳಿದೆ, ಸೂರ್ಯ ಬೆಳಿಗ್ಗೆ ಬಂದ್ರೆನೇ ಬೆಟರ್, ಚಂದ್ರ ರಾತ್ರಿ ಬಂದ್ರೇನೇ ಬೆಟರ್. ಎರಡೂ ಒಟ್ಟಿಗೇ ಸೇರಿದ್ದ ದಿನ ಪ್ರಾಬ್ಲಂ ಆಗುತ್ತೆ, ಅದು ಬೇಡ. ಹಾಗಂತ ವ್ಯಕ್ತಿತ್ವದಲ್ಲಿ ಸಮಸ್ಯೆ ಇದೆ ಅಂತ ನಾನು ಹೇಳ್ತಾ ಇಲ್ಲ...

ಕಿಚ್ಚ ಸುದೀಪ್ (Kichcha Sudeep) ನಟ ದರ್ಶನ್ ಬಗ್ಗೆ ಆಡಿರುವ ಈ ಮಾತುಗಳು ಬಹಳಷ್ಟು ವೈರಲ್ ಆಗ್ತಿವೆ. ಡಿ ಬಾಸ್ (Darshan) ಫ್ಯಾನ್ಸ್ ಕೂಡ ಇದನ್ನು ಇಷ್ಟಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ನಟ ದರ್ಶನ್ ಪರ ಬ್ಯಾಟ್ ಬೀಸುವ ಬಹಳಷ್ಟು ಅಭಿಮಾನಿಗಳೂ ಕೂಡ ನಟ ಸುದೀಪ್ ಆಡಿರುವ ಈ ಮಾತುಗಳು ಸತ್ಯಕ್ಕೆ ಹತ್ತಿರ ಎಂದಿದ್ದಾರೆ. ಸುದೀಪ್ ಮೆಚ್ಯೂರಿಟಿಗೆ ತಲೆದೂಗಿದ್ದಾರೆ. ಹಾಗಿದ್ರೆ ನಟ ಸುದೀಪ್ ಹೇಳಿದ ಯಾವ ಮಾತುಗಳು ಅವು? ಇಲ್ಲಿದೆ ಡೀಟೇಲ್ಸ್! 

ಕೆಲವು ತಿಂಗಳುಗಳ ಹಿಂದಿನಿಂದಲೋ ವರ್ಷಗಳ ಹಿಂದಿನಿಂದಲೋ ನಾವಿಬ್ರೂ ಮಾತಾಡ್ಕೊಂಡಿದಿದ್ರೆ ನಾನು ಹೋಗ್ತಾ ಇದ್ದೆ. ನಮಗೆ ಏನ್ ಅನ್ಸುತ್ತೆ ಬಿಡುತ್ತೆ ಅನ್ನೋದಕ್ಕಿಂತ ಒಂದಂತೂ ಸತ್ಯ. ನಾವು ಒಳ್ಳೇದನ್ನ ಬಯಸಿದೀವಿ ಅನ್ನೋ ಕಾರಣಕ್ಕೆ ಪ್ರತಿಯೊಂದೂ ನಮ್ಮದಾಗಬೇಕಾಗಿಲ್ಲ. ಕೆಲವೊಂದು ಡಿಸ್ಟನ್ಸಸ್‌ಗಳನ್ನು ನಾವೆಲ್ಲ ಏನಕ್ಕೆ ಮೆಂಟೇನ್ ಮಾಡ್ತೀವಿ ಅಂದ್ರೆ, ನಾವು ಸರಿಯಿಲ್ಲ ಅಥವಾ ಅವ್ರು ಸರಿಯಿಲ್ಲ ಅನ್ನೋದಲ್ಲ, ನಾವಿಬ್ರೂ ಒಟ್ಟಿಗೆ ಸರಿಯಲ್ಲ. 

Latest Videos

ಸಹಾಯಹಸ್ತ ಮರೆಯದಿರಲು ಸ್ವಂತ ಮನೆಗೆ 'ಅಂಬರೀಷ ನಿಲಯ' ಹೆಸರಿಟ್ಟ ನಟ ಸುಧೀರ್!

ನಾನೊಂದು ಮಾತು ಹೇಳಿದೆ, ಸೂರ್ಯ ಬೆಳಿಗ್ಗೆ ಬಂದ್ರೆನೇ ಬೆಟರ್, ಚಂದ್ರ ರಾತ್ರಿ ಬಂದ್ರೇನೇ ಬೆಟರ್. ಎರಡೂ ಒಟ್ಟಿಗೇ ಸೇರಿದ್ದ ದಿನ ಪ್ರಾಬ್ಲಂ ಆಗುತ್ತೆ, ಅದು ಬೇಡ. ಹಾಗಂತ ವ್ಯಕ್ತಿತ್ವದಲ್ಲಿ ಸಮಸ್ಯೆ ಇದೆ ಅಂತ ನಾನು ಹೇಳ್ತಾ ಇಲ್ಲ. ನಾನು ಡಿಫ್ರಂಟ್ ಪರ್ಸನ್, ಅವ್ನು ಡಿಫ್ರಂಟ್ ಪರ್ಸನ್ ವಿತ್ ಡಿಫ್ರಂಟ್ ಟೇಸ್ಟ್. ಹಾಗಂತ ನಾವಿಬ್ರೂ ಈ ಜಗತ್ತಿನಲ್ಲಿ ಒಂದೇ ಟೈಮಲ್ಲಿ ಬದುಕಬಾರ್ದಾ? ನಾಟಕೀಯವಾಗಿ ಇರೋದಕ್ಕೆ ನನಗೆ ಬರಲ್ಲ. 

ಸಮಾಜ ಏನೋ ಹೇಳುತ್ತೆ ಅಂತ ನಾನು ಮಾಡೋದಕ್ಕೆ ಇಷ್ಟ ಪಡೋದಿಲ್ಲ. ಅದು ನನ್ನ ಹೃದಯದಿಂದ ಬಂದ್ರೆ ಯಾರೋ ಏನೋ ಹೇಳ್ತಾರೆ ಅಂತ ನಾನು ನೋಡೋಕೆ ಹೋಗಲ್ಲ, ಹೋಗೇ ಹೋಗ್ತೀನಿ.. ನಾನು ಆ ಥರ ಇರೋನು, ಹಾಗೇ ಬಾಳಿಕೊಂಡು ಬದುಕಿಕೊಂಡು ಬಂದೋವ್ನು. ಈ ಪ್ರಶ್ನೆಗಳು ನನಗೆ ಬರ್ಬೇಕು ಮೈಂಡ್‌ಗೆ. ಬಂದ ದಿನ ಅದಕ್ಕೆ ಉತ್ತರ ಕೊಡ್ತೀನಿ ನಾನು. 

ಹುಟ್ಟುಕಿವುಡರಾಗಿದ್ದ ನಟ ಬಾಲಣ್ಣ ಬದುಕಿನಲ್ಲಿ ನಡೆದ ಘನಘೋರ ದುರಂತವೇನು?

ನಮ್ಮ ಮಧ್ಯೆ ಸರಿಯಿಲ್ಲ ಅಂದಾಗ್ಲೂನೂ, ಪಬ್ಲಿಕ್‌ನಲ್ಲಿ ಒಂದ್ ಕಡೆ ಅವ್ರಿಗೆ ಅವಮಾನ ಆದಾಗ ಬೇರೆಯವ್ರು ಟ್ವೀಟ್ ಮಾಡಿರೀ ಕಡೆ ನಾನು ಉದ್ದ ಲೆಟರ್ ಬರೆದಿದೀನಿ. ಅದು ಅಗತ್ಯ ಇರಲಿಲ್ಲ ಆ ಸಮಯದಲ್ಲಿ. ಆದ್ರೆ ನನಗೆ ಬರಿಬೇಕು ಅನ್ನಿಸ್ತು, ನಾನು ಬರೆದೆ. ಯಾರನ್ನೂ ಮೆಚ್ಚಸೋದಕ್ಕೆ ನಾನು ಬರೆದಿರಲಿಲ್ಲ, ಯಾರೂ ಬರೀರಿ ಅಂತ ಹೇಳಿರ್ಲಿಲ್ಲ. ನನ್ನ ಪ್ರಕಾರ ಅದು ಯಾವುದೇ ಕಲಾವಿದರಿಗೆ ಆಗಬಾರದು. ಯಾರೂ ಸಾರ್ವಜನಿಕ ವೇದಿಕೆಯಲ್ಲಿ ಹೋಗಿ ನಿಲ್ಲೋದಕ್ಕೆ ಭಯಪಡೋ ತರ ಇರ್ಬಾದು. 

ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದಾನೆ ಅಂದ್ರೆ ಅವೊಂದೂ ಒಂದು ಸ್ವಂತಿಕೆ ಇರುತ್ತೆ.. ನಾವು ಇರೋದ್ರಿಂದ ಅವ್ರನ್ನ ತಿದ್ದತಾ ಇದೀವಿ ಅಂತ ಹೇಳೋದಕ್ಕೆ ಆಗಲ್ಲ. ಇನ್ನೊಬ್ರನ್ನ ತಿದ್ದೋ ಶಕ್ತಿ ನನಗೆ ಎಲ್ಲಿಂದ ಬರ್ಬೇಕು ಹೇಳಿ..ಅವ್ರೇನಾದ್ರೂ ನನ್ ಮಾತಿಗೆ ಗೌರವ ಕೊಟ್ಟು ಕೇಳ್ತಾರೆ ಅಂದ್ರೆ ನಾನು ಹೇಳ್ಬಹುದೇನೋ! ತಿದ್ದುವಷ್ಟು ದೊಡ್ಡ ಸಂತ ನಾನಲ್ಲ. ಒಂದು ಹಂತದಲ್ಲಿ, ಸ್ನೇಹಿತರಾಗಿದ್ದಾಗ ತಪ್ಪು-ಸರಿ ಬಗ್ಗೆ ಮಾತಾಡ್ತಾ ಇದ್ವಿ.

ಎಣ್ಣೆ-ಸೀಗೆಕಾಯಿಯಂತಿದ್ದ ಹೀರೋಗಳು ಈಗ ಕುಚಿಕುಗಳಾದ್ರಾ? ಟಾಲಿವುಡ್ ಸ್ಟಾರ್ಸ್‌ ಮಧ್ಯೆ ಏನ್ ನಡಿತಿದೆ?

ಈಗ ಆ ಬೌಂಡರಿ ದಾಟಿ ಆಗಿದೆ. ಸೋ, ಆ ಬಗ್ಗೆ ಈಗ ಮಾತಾಡೋದು ಸರಿ ಅಲ್ಲ. ನಾನು ಈಗ ಅವ್ರ ಜೊತೆ ಇದ್ದಿದ್ರೆ, ಅದೆಲ್ಲಾ ಮಾತು ಈಗ ಆಗಲ್ಲ, ಅವ್ರ ಜೀವನ ಅವ್ರದ್ದು.. ನೋವು ಯಾರಿಗೇ ಆದ್ರೂ ನೋವೇ. ಅವರವರ ಕುಟುಂಬದ ನೋವು ಅವರವರಿಗೇ ಗೊತ್ತು. ನಮಗೆ ಆಗೋದು ನಮಗೇ ಗೊತ್ತಿರುತ್ತೆ.. ಈಗ ಅದೆಲ್ಲಾ ಚರ್ಚೆ ಮಾಡೋದ್ರಿಂದ ಪ್ರಯೋಜನ ಇಲ್ಲ' ಎಂದಿದ್ದಾರೆ ನಟ ಸುದೀಪ್. ಸುದೀಪ್ ಆಡಿರುವ ಮಾತುಗಳನ್ನು ನಟ ದರ್ಶನ್ ಅವರ ಬಹಳಷ್ಟು ಅಭಿಮಾನಿಗಳೂ ಕೂಡ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. 

click me!