ಪುನೀತ್‌ ವಾಯ್ಸನಲ್ಲೇ ಜೇಮ್ಸ್‌ ಚಿತ್ರ; ಪವರ್‌ ಧ್ವನಿಯನ್ನು ಮರು ಸೃಷ್ಟಿಸಿರುವ ಸೌಂಡ್‌ ಇಂಜಿನಿಯರ್‌!

By Suvarna News  |  First Published Apr 18, 2022, 10:16 AM IST

ಪವರ್ ಹೆಸರಿನಲ್ಲಿ ಮತ್ತೆ ಬರ್ತಿದೆ ಜೇಮ್ಸ್ ಸಿನಿಮಾ. ಸೌಂಡ್ ಇಂಜಿನಿಯರ್‌ಗೆ ಸಲಾಂ ಎಂದ ಅಭಿಮಾನಿಗಳು.


ಇದು ಪವರ್‌ ಸ್ಟಾರ್‌ ಅಭಿಮಾನಿಗಳಿಗೆ ಸಹಿ ಸುದ್ದಿ. ‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರ ಧ್ವನಿ ಕೇಳುವ ಭಾಗ್ಯ ದೊರೆಯುತ್ತಿದೆ. ನಟ ಪುನೀತ್‌ರಾಜ್‌ಕುಮಾರ್‌ ಅವರು ಅಗಲಿದ ನಂತರ ತೆರೆಗೆ ಬಂದ ಚೇತನ್‌ಕುಮಾರ್‌ ನಿರ್ದೇಶನದ ‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರ ಪಾತ್ರಕ್ಕೆ ನಟ ಶಿವರಾಜ್‌ಕುಮಾರ್‌ ಅವರೇ ಧ್ವನಿ ಕೊಟ್ಟಿದ್ದರು. ಅಪ್ಪು ಅವರ ಕೊನೆಯ ಚಿತ್ರದಲ್ಲಿ ಅವರ ಧ್ವನಿ ಮಿಸ್‌ ಮಾಡಿಕೊಂಡಿದ್ದರ ಬಗ್ಗೆ ಅವರ ಅಭಿಮಾನಿಗಳು ಸಿನಿಮಾ ನೋಡಿದ ನಂತರ ಭಾವುಕರಾಗಿ ಹೇಳಿಕೊಂಡಿದ್ದು ಉಂಟು. ಈಗ ‘ಜೇಮ್ಸ್‌’ ಚಿತ್ರದಲ್ಲಿನ ಪುನೀತ್‌ ಅವರ ಪಾತ್ರಕ್ಕೆ ಅವರದ್ದೇ ವಾಯ್‌್ಸ ಸಿಕ್ಕಿದೆ. ಇದು ಹೈದರಾಬಾದ್‌ನ ಖ್ಯಾತ ಸೌಂಡ್‌ ಇಂಜಿನಿಯರ್‌ ಶ್ರೀನಿವಾಸ ರಾವ್‌ ಅವರ ತಂಡದ ಸಾಹಸದ ಫಲ.

ನಟರ ಧ್ವನಿಗಳನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್‌ ಇಂಜಿನಿಯರ್‌ ಶ್ರೀನಿವಾಸ್‌ ರಾವ್‌ ಅವರು ಕೊನೆಗೂ ‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ‘ನಾವು ಈ ಹಿಂದೆಯೇ ಅಪ್ಪು ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವುದಕ್ಕೆ ಸಾಕಷ್ಟುಪ್ರಯತ್ನ ಮಾಡಿದ್ವಿ. ಕೊನೆಗೂ ಆಗದೆ ಶಿವಣ್ಣ ಅವರಿಂದ ಡಬ್‌ ಮಾಡಿಸಲಾಯಿತು. ನಟ ಶ್ರೀಕಾಂತ್‌ ಅವರ ಮೂಲಕ ಸೌಂಡ್‌ ಇಂಜಿನಿಯರ್‌ ಶ್ರೀನಿವಾಸ್‌ ರಾವ್‌ ಪರಿಚಯ ಆದರು. ಶ್ರೀನಿವಾಸ್‌ ರಾವ್‌ ಅವರು ನಟರ ಧ್ವನಿಗಳನ್ನು ಮರು ಸೃಷ್ಟಿಸುವ ಕೆಲಸದ ಭಾಗವಾಗಿ ಪುನೀತ್‌ ಅವರ ಧ್ವನಿಯನ್ನು ಸೃಷ್ಟಿಸಿದ್ದಾರೆ. 15 ಗಂಟೆಗಳ ಕಾಲ ಒಬ್ಬ ನಟನ ಧ್ವನಿ ಸಿಕ್ಕಿದರೆ ಅದನ್ನು ಇಟ್ಟುಕೊಂಡು ಇಡೀ ಚಿತ್ರದ ಅವರ ಪಾತ್ರಕ್ಕೆ ಆ ಧ್ವನಿಯನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಅಪ್ಪು ಅವರ ಹಿಂದಿನ ಚಿತ್ರಗಳ ಹಾಗೂ ಕನ್ನಡದ ಕೋಟ್ಯಾಧಿಪತಿಯಲ್ಲಿ ಅವರ ಮಾತನಾಡಿದ್ದು ಸೇರಿಸಿ 15 ಗಂಟೆ ಅವಧಿಯ ಧ್ವನಿಯನ್ನು ಕಳುಹಿಸಿದ್ದೆ. ಮೂರುವರೆ ತಿಂಗಳು ಕಾಲ ಶ್ರೀನಿವಾಸ್‌ ರಾವ್‌ ಅವರ 16 ಮಂದಿ ತಂಡ ಸೇರಿ ಕೆಲಸ ಮಾಡಿ ಯಶಸ್ವಿ ಆಗಿದೆ. ಏ.22ರಿಂದ ಅಪ್ಪು ಅವರ ಧ್ವನಿಯಲ್ಲೇ ‘ಜೇಮ್ಸ್‌’ ಚಿತ್ರವನ್ನು ನೋಡಬಹುದು’ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್‌.

ಏ.14ಕ್ಕೆ ಸೋನಿ ಲೈವ್‌ ಓಟಿಟಿಯಲ್ಲಿ ಜೇಮ್ಸ್‌!

Tap to resize

Latest Videos

ಸದ್ಯಕ್ಕೆ ‘ಜೇಮ್ಸ್‌’ ಸಿನಿಮಾ 61 ಸಿಂಗಲ್‌ ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. ಜತೆಗೆ ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿ ದಿನ 2 ರಿಂದ 3 ಶೋಗಳು ಪ್ರದರ್ಶನವಾಗುತ್ತಿವೆ. ಪುನೀತ್‌ ಅವರ ಧ್ವನಿ ಅಪ್‌ಡೇಟ್‌ ಆದ ಮೇಲೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ವಾರದಿಂದ ಹೆಚ್ಚಿನ ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್‌ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರಿಗೆ ಇದೆಯಂತೆ.

ಕನ್ನಡ ಸಿನಿಮಾಗಳು ರು.100 ಕೋಟಿ ಕ್ಲಬ್‌ ಸೇರುವುದು ಅಪರೂಪ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಅಪ್ಪು ಅದನ್ನು ಸುಳ್ಳು ಮಾಡಿದ್ದಾರೆ. ಅವರು ನಟಿಸಿದ ಕೊನೆಯ ಸಿನಿಮಾ ದಾಖಲೆ ವೇಗದಲ್ಲಿ ರು.100 ಕೋಟಿ ಕ್ಲಬ್‌ ಸೇರಿದೆ. ಈ ವೇಗ ಇನ್ನೂ ನಿಂತಿಲ್ಲ. ಪ್ರೇಕ್ಷಕರು ಮುಗಿಬಿದ್ದು ಜೇಮ್ಸ್‌ ಸಿನಿಮಾ ನೋಡುತ್ತಿದ್ದಾರೆ. ಅಪ್ಪು ಅವರ ಮೇಲಿನ ಪ್ರೀತಿಯಿಂದ ಆರಂಭದ ದಿನವೇ ಪ್ರೇಕ್ಷಕರು ದಾಖಲೆ ಸಂಖ್ಯೆಯಲ್ಲಿ ಜೇಮ್ಸ್‌ ಸಿನಿಮಾ ನೋಡಿದ್ದರು. ರಾಜ್ಯವಷ್ಟೇ ಅಲ್ಲದೆ ಹೊರದೇಶಗಳಲ್ಲೂ ಜೇಮ್ಸ್‌ ಬಿಡುಗಡೆ ಸಂಭ್ರಮ ನಡೆದಿತ್ತು. ಅದೆಲ್ಲಕ್ಕೂ ಪುರಾವೆ ಎಂಬಂತೆ ದಾಖಲೆ ಗಳಿಕೆಯ ಲೆಕ್ಕಾಚಾರ ಬಂದಿದೆ.

"

click me!