ನಟಿ ಮತ್ತು ಸಿಂಗರ್ ಚೈತ್ರಾ ಆಚಾರ್ ಅವರು ಬೋಲ್ಡ್ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗಿದ್ದರು. ಅದಕ್ಕೆ ಅಷ್ಟೇ ದಿಟ್ಟತನದಿಂದ ಉತ್ತರಿಸಿ ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು.
ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡು ಕಣ್ಣೀರಾದ್ರು ನಟಿ ಹಾಗೂ ಗಾಯಕಿ ಚೈತ್ರಾ ಜೆ ಆಚಾರ್. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಚೈತ್ರಾ ಆಚಾರ್ (Chaitra J Achar)'ಅವ್ನು ಎಲ್ಲೋ ಕೂತ್ಕೊಂಡು, ಅವ್ನ ಲೈಫ್ ಬೇಜಾರ್‌ನಿಂದ, ಅವ್ಳು ಎಂತಾ ಸ್ಲಟ್ ಗೊತ್ತಾ ಅಂತಂದ್ರೆ.. ಈಗ ನನಗೆ ಅದು ನೋವು ಕೊಡುತ್ತೆ, ನಾನು ಈ ಘಟನೆ ನಡೆದ ದಿನಕ್ಕೆ ಹೋದರೆ, ಅದು ನನ್ನ ಜೀವನದಲ್ಲಿ ನಡೆದ ಮೊದಲ ದೊಡ್ಡ ಈವೆಂಟ್.
'ಹಾಡಿದ್ದು ದೇವರ ಹಾಡು, ಇದು ನಮ್ಮ ಸಂಸ್ಕೃತಿನಾ?.. ಹೀಗ್ ಹೇಳಿರೋ ನೀನು ಏನ್ ಮಾಡ್ತಾ ಇದೀಯ? ನೀನು ಹೇಳ್ತಾ ಅಲ್ಲಿನ ಭಾಷೆ ಬಳಸಿರೋದು ಅದು ನಿಮ್ಮ ಸಂಸ್ಕೃತಿನಾ? 307 ಮಿಲಿಯನ್ ಜನರು ನನ್ನ ಪ್ರೊಫೈಲ್‌ನ ವಿಸಿಟ್ ಮಾಡಿದಾರೆ. ಯಾಕೆ?, ನನ್ನ ನೋಡೋಕೆ ತಾನೆ? ಎಂಟು ಸಾವಿರ ಜನ ನನ್ನ ಇಮೇಜನ್ನ ಸೇವ್ ಮಾಡ್ಕೊಂಡಿದಾರೆ, ಜತೆಗೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರು ಅದನ್ನು ಬೇರೆಯವರಿಗೆ ಶೇರ್ ಮಾಡಿದ್ದಾರೆ.
ಶೂಟಿಂಗ್ ಸ್ಪಾಟ್‌ನಲ್ಲಿ ಸೂಪರ್ ನ್ಯಾಚುರಲ್ ಪವರ್ ಅನುಭವವಾಗಿತ್ತು; ಸಪ್ತಮಿ ಗೌಡ ಮಾತಿನ ಮರ್ಮವೇನು?
ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಅಂದಂಗೆ, ಈ ಥರದ ಜನಾನೇ ಮಾತಾಡ್ತಾ ಇರೋದು.. ಸೋ, ಇನ್ಮೇಲೆ ನಾನು ಕಾಮೆಂಟ್ ಬಗ್ಗೆ ತಲೆ ಕೆಡಿಸ್ಕೊಳಲ್ಲ ಅಂತ ಆವತ್ತು ಡಿಸೈಡ್ ಮಾಡ್ದೆ, ಇವತ್ತಿನ ತನಕ ಅದನ್ನ ಫಾಲೋ ಮಾಡ್ತಾ ಇದೀನಿ. ಹೀಗೇ ನಾನು ಕಳೆದ ಎರಡು ವರ್ಷಗಳಿಂದ ಇದೀನಿ' ಎಂದಿದ್ದಾರೆ ನಟಿ-ಗಾಯಕಿ ಚೈತ್ರಾ ಜೆ ಆಚಾರ್.
ಬೇರೆಯವರ ಜೊತೆ ಹೋಲಿಕೆ ಯಾಕೆ, ನಿಮ್ಮ ಟ್ರೂ ಕೆಪಾಸಿಟಿ ಕಂಡುಕೊಳ್ಳಿ; ವೈರಲ್ ಆಯ್ತು ನಟ ಯಶ್ ಮಾತು!
ಅಂದಹಾಗೆ, ನಟಿ ಮತ್ತು ಸಿಂಗರ್ ಚೈತ್ರಾ ಆಚಾರ್ ಅವರು ಬೋಲ್ಡ್ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗಿದ್ದರು. ಅದಕ್ಕೆ ಅಷ್ಟೇ ದಿಟ್ಟತನದಿಂದ ಉತ್ತರಿಸಿ ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. 'ಮಹಿರಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿರುವ ಚೈತ್ರಾ ಜೆ ಆಚಾರ್, ಗಾಯಕಿಯಾಗಿಯೂ ಸಾಕಷ್ಟು ಸಿನಿಮಾಗಳಿಗೆ ಹಾಗೂ ವೇದಿಕೆಗಳಲ್ಲಿ ಹಾಡಿದ್ದಾರೆ. ತಮ್ಮ ಬೋಲ್ಡ್ ಮಾತು ಹಾಗೂ ಲುಕ್‌ನಿಂದ ಆಗಾಗ ಸುದ್ದಿಯಾಗುವ ಚೈತ್ರಾ ಆಚಾರ್, ಸದ್ಯ ಗಾಯಕಿಯಾಗಿಯೂ ಸಖತ್ ಮಿಂಚುತ್ತಿದ್ದಾರೆ.
ಮೇಕಪ್ ಪಾತ್ರದಲ್ಲಿ ವಿಭಿನ್ನತೆ ತರಲಾರದು ಎಂದ್ಬಿಟ್ರು ಸಾಯಿ ಪಲ್ಲವಿ; ಎಂಥ ಮಾತು ಅಂತಿದಾರಲ್ರೀ!