ಈ ಲಿಸ್ಟ್‌ನಲ್ಲಿ ನಿಮಗೆ ಯಾರೆಲ್ಲ ನೆನಪಾಗುತ್ತಾರೆ. ಅವರೆಲ್ಲರೂ ಸ್ಟಾರ್ ನಟಿಯರು, ಅದರಲ್ಲೂ ಒಬ್ಬರು ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಜೊತೆ ಕೂಡ ನಟಿಸಿರುವ ಸೀನಿಯರ್ ನಟಿ! ನಿಮ್ಮಲ್ಲಿ ಈಗ ಮತ್ಯಾಕೆ ತಡ, ನೋಡಿ ಯಾರವರು ಅಂತ..!
ಸೌತ್ ಇಂಡಿಯನ್ ಸಿನಿಮಾಗಳಲ್ಲಿ, ಕೆಲವರು ಬಾಲಿವುಡ್‌ನಲ್ಲಿಯೂ ನಟಿಸಿ, ಕನ್ನಡ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ, ಆದರೆ ಈಗ ನಟನೆಯನ್ನೇ ಬಿಟ್ಟಿರುವ ನಟಿಯರು ಇವರು! ಈ ಲಿಸ್ಟ್‌ನಲ್ಲಿ ನಿಮಗೆ ಯಾರೆಲ್ಲ ನೆನಪಾಗುತ್ತಾರೆ. ಅವರೆಲ್ಲರೂ ಸ್ಟಾರ್ ನಟಿಯರು, ಅದರಲ್ಲೂ ಒಬ್ಬರು ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಜೊತೆ ಕೂಡ ನಟಿಸಿರುವ ಸೀನಿಯರ್ ನಟಿ! ನಿಮ್ಮಲ್ಲಿ ಈಗ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ ಗೊತ್ತು, ಮತ್ಯಾಕೆ ತಡ, ನೋಡಿ ಯಾರವರು ಅಂತ..!
ನಟಿ ರಂಭಾ (Rambha) ಬಹುತೇಕರಿಗೆ ಗೊತ್ತು. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ರಂಭಾ, ದಕ್ಷಿಣ ಭಾರತದ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ತಮಿಳಿನಲ್ಲಿ ವಿಜಯ್, ಸೂರ್ಯ ಸೇರಿದಂತೆ, ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೊತೆ ನಟಿಸಿದ್ದಾರೆ ರಂಭಾ. ಬಾಲಿವುಡ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದ ರಂಭಾ ತಮ್ಮ ಮಾದಕ ಚೆಲುವು ಹಾಗೂ ಆಕರ್ಷಕ ಮೈ ಮಾಟದ ಮೂಲಕ ತುಂಬಾ ಫೇಮಸ್ ಆಗಿದ್ದವರು. ಅವರೀಗ ಮದುವೆಯಾಗಿ ವಿದೇಶದಲ್ಲಿ ಸಂಸಾರ ಮಾಡಿಕೊಂಡು ಹಾಯಾಗಿದ್ದಾರೆ.
undefined
ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ದರ್ಶನ್ 'ಕರಿಯ' ಸಿನಿಮಾ ನಟಿ!
ಇನ್ನೊಬ್ಬರು ಸಿಂಧು ಮೆನನ್. ಮಲಯಾಳಂ ಮೂಲದ ನಟಿ ಸಿಂಧು ಮೆನನ್ (Sindhu Menon) ಸಹ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಸುದೀಪ್ ನಟನೆಯ ನಂದಿ, ವಿಜಯ ರಾಘವೇಂದ್ರ ನಟನೆಯ ಖುಷಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ತಮಿಳು, ತೆಲುಗು,ಮಲಯಾಳಂನಲ್ಲಿ ಸಾಕಷ್ಟು ಮಿಂಚಿದ್ದ ಸಿಂಧು ಮೆನನ್ ಈಗ ಅಪ್ಪಟ ಗೃಹಿಣಿಯಾಗಿ ಫಾರಿನ್‌ನಲ್ಲಿ ಸೆಟ್ಲ್ ಆಗಿದ್ದಾರೆ.
ಇನ್ನು ಹಿರಿಯ ನಟಿ ಮಾಧವಿ. ಕನ್ನಡದಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ಅಂಬರೀಷ್ ಜೊತೆ ನಟಿಸಿದ್ದ ಮಾಧವಿ (Madhavi) ಅವರು ಕೂಡ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್. ದಕ್ಷಿಣ ಭಾರತದ ಘಟಾನುಘಟಿ ನಾಯಕರೊಂದಿಗೆ ನಟಿಸಿದ್ದ ಮಾಧವಿ ಇಂದು ಸಿನಿಮಾ ನಟನೆಯಿಂದ ದೂರವಾಗಿ ವಿದೇಶವಾಸಿ ಆಗಿದ್ದಾರೆ. ತುಂಬಾ ಶ್ರೀಮಂತೆ ಆಗಿರುವ ಮಾಧವಿ, ಈಗಲೂ ಸರಳ ಸುಂದರಿಯಾಗಿಯೇ ಗಮನ ಸೆಳೆಯುತ್ತಿರುವುದು ವಿಶೇಷ.
ಗುರುಪ್ರಸಾದ್ ಮೀ ಟೂ ಹೇಳಿಕೆ ಬಗ್ಗೆ ತಿರುಗೇಟು ನೀಡಿದ್ದರು ಹಲವರು; ಏನೆಲ್ಲಾ ಆಗಿತ್ತು ಆಗ?
ದರ್ಶನ್ ನಟನೆಯ ಚಿಂಗಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು ನಟಿ ದೀಪಿಕಾ ಕಾಮಯ್ಯ. ಬಳಿಕ ಅವರು ಕೆಲವೊಂದು ಕನ್ನಡ ಸಿನಿಮಾದಲ್ಲಿ ನಟಿಸಿ (Deepika Kamayya), ಬಳಿಕ ಬಿಗ್ ಬಾಸ್ ಕನ್ನಡದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ, ಅವರಿಗೆ ಚಿಂಗಾರಿ ಬಳಿಕ ಭಾರೀ ಬೇಡಿಕೆಯಾಗಲೀ ಸಕ್ಸಸ್ ಆಗಲೀ ಸಿಗಲೇ ಇಲ್ಲ. ಈಗ ಸಿನಿಮಾದಿಂದ ದೂರವಾಗಿ ವಿದೇಶದಲ್ಲಿ ನೆಲೆಗೊಂಡಿದ್ದಾರೆ.
ಇನ್ನು ನಟಿ ಮಾನ್ಯ (Manya) ಅವರು ಸಹ ಕನ್ನಡ ಸಿನಿಪ್ರೇಕ್ಷಕರಿಗೆ ಮರೆಯಲಾಗದ ಹೆಸರು. ಕನ್ನಡದ ಸ್ಟಾರ್ ನಟರಾದ ವಿಷ್ಣುವರ್ಧನ್, ದರ್ಶನ್ ಜೊತೆಗೂ ನಟಿಸಿರುವ ನಟಿ ಮಾನ್ಯ ಅವರು, ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಮದುವೆಯಾದ ಬಳಿಕ ಚಿತ್ರರಂಗದ ಕಡೆ ಕಣ್ಣೆತ್ತಿಯೂ ನೋಡದ ಮಾನ್ಯ, ಸದ್ಯ ಫಾರಿನ್‌ನಲ್ಲೇ ಗಂಡ-ಮಕ್ಕಳ ಜೊತೆ ಹಾಯಾಗಿದ್ದಾರೆ.
ಜಗ್ಗೇಶ್ 'ರಂಗನಾಯಕ' ರಿಲೀಸ್ ವೇಳೆ ಆಡಿದ್ದ ಗುರುಪ್ರಸಾದ್ ಮಾತು ನಿಜವಾಗಿದ್ದು ದುರಾದೃಷ್ಟ!