
'ಜೋಗಿ' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರೇಮ್ (Director Prem) ಬಗ್ಗೆ ಶಾಕಿಂಗ್ ಸಂಗತಿಯೊಂದನ್ನು ನಟಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಅದು ಅಂತಿಂಥ ಸುದ್ದಿಯಲ್ಲ, ಪ್ರೇಮ್ ಬಗ್ಗೆ ಯಾರಿಗೂ ಗೊತ್ತಿರದ ಸಂಗತಿಯೇ ಸರಿ! ಬಹುಶಃ ಈ ಸುದ್ದಿ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ (Rakshitha Prem) ಅವರಿಗೂ ಗೊತ್ತಿರೋದು ಡೌಟ್! ಹಾಗಿದ್ದರೆ, ಪ್ರೇಮ್ ಬಗ್ಗೆ ಏನೋ ಸೀಕ್ರೆಟ್ ಹೇಳಿರೋ ನಟಿ ಯಾರು? ಅವರು ಹೇಳಿದ್ದಾದರೂ ಏನು?
'ನಿರ್ದೇಶಕರಾದ ಪ್ರೇಮ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಗೊತ್ತಾದಾಗ ನನಗೆ ನಿಜವಾಗಿಯೂ ಶಾಕ್ ಆಗಿತ್ತು. ಅವರು ಪ್ರೀತ್ಸೋದಾ? ಅದು ಹೇಗೆ ಸಾಧ್ಯ ಎನಿಸಿತ್ತು. ಏಕೆಂದರೆ, ಅವರು ಹೆಣ್ಣುಮಕ್ಕಳನ್ನು ಜಾಸ್ತಿ ಮಾತನಾಡಿಸುವವರಲ್ಲ, ಶೂಟಿಂಗ್ ಸ್ಪಾಟ್‌ನಲ್ಲಿ ಕೂಡ ಮುಟ್ಟುವವರಲ್ಲ. ದೂರದಿಂದಲೇ ನಟಿಸಿ ತೋರಿಸುತ್ತಿದ್ದರು. ಅವರೊಬ್ಬ ಮಹಾ ಜಂಟಲ್‌ಮ್ಯಾನ್. ಆದರೆ ಕೊನೆಗೆ ನೋಡಿದರೆ, ಅವರು ಖ್ಯಾತ ನಟಿಯನ್ನೇ ಮದುವೆಯಾಗಿದ್ದಾರೆ. ನನಗೆ ನಿಜವಾಗಿಯೂ ಅಚ್ಚರಿಯಾಯ್ತು..! ಎಂದಿದ್ದಾರೆ ಅಭಿನಯಶ್ರೀ!
ಗುರುಪ್ರಸಾದ್ ಮೀ ಟೂ ಹೇಳಿಕೆ ಬಗ್ಗೆ ತಿರುಗೇಟು ನೀಡಿದ್ದರು ಹಲವರು; ಏನೆಲ್ಲಾ ಆಗಿತ್ತು ಆಗ?
ಈ ಅಭಿನಯಶ್ರೀ (Abhinayashree) ಯಾರು ಎಂಬುದು ಬಹುತೇಕರಿಗೆ ಗೊತ್ತು. ಕನ್ನಡದ ಸ್ಟಾರ್ ನಟ, ಹಾಗೂ ಸದ್ಯ ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ ಅಭಿನಯದ 'ಕರಿಯ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ದರ್ಶನ್-ಅಭಿನಯಶ್ರೀ ಜೋಡಿಯ ಕರಿಯ ಸಿನಿಮಾವನ್ನು ಇದೇ ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಅಂದು ಸೂಪರ್ ಹಿಟ್ ಆಗಿತ್ತು. ಆ ಮೂಲಕ ಕರಿಯ ಚಿತ್ರವು ದರ್ಶನ್ ಹಾಗು ಪ್ರೇಮ್ ಇಬ್ಬರಿಗೂ ಖ್ಯಾತಿ ತಂದುಕೊಟ್ಟಿತ್ತು.
ಕರಿಯ ಬಳಿಕ ಪ್ರೇಮ್ ಅವರು ಶಿವರಾಜ್‌ಕುಮಾರ್ ನಟನೆಯ 'ಜೋಗಿ' ಚಿತ್ರದ ಮೂಲಕ ಮತ್ತಷ್ಟು ಪ್ರಸಿದ್ಧಿಗೆ ಬಂದರು. ಈ ಚಿತ್ರದಲ್ಲಿ ಅವರು ಗಾಯಕರಾಗಿಯೂ ಪ್ರಸಿದ್ಧರಾದರು. 'ಬೇಡುವನು ವರವನ್ನು ಕೊಡೆ ತಾಯೆ ಜನ್ಮವನು.. 'ಹಾಡನ್ನು ಹಾಡಿರುವ ಪ್ರೇಮ್, ಕರುನಾಡಿನಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದರು. ಜೋಗಿ ಚಿತ್ರವು ಆ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲೆ ಮಾಡಿತ್ತು. ಈಗಲೂ ಕೂಡ ನಿರ್ದೇಶಕ ಪ್ರೇಮ್ ಅವರನ್ನು 'ಜೋಗಿ ಪ್ರೇಮ್' ಹೆಸರಿನಿಂದಲೇ ಕರೆಯುತ್ತಾರೆ.
ಜಗ್ಗೇಶ್ 'ರಂಗನಾಯಕ' ರಿಲೀಸ್ ವೇಳೆ ಆಡಿದ್ದ ಗುರುಪ್ರಸಾದ್ ಮಾತು ನಿಜವಾಗಿದ್ದು ದುರಾದೃಷ್ಟ!
ಒಟ್ಟಿನಲ್ಲಿ, ಶೂಟಿಂಗ್ ಸಮಯದಲ್ಲಿ ನಟಿಯರೊಂದಿಗೆ ಸಾಕಷ್ಟು ಅಂತರ ಇಟ್ಟುಕೊಳ್ಳುತ್ತಿದ್ದರು, ನಟಿಯರ ಮೈ ಮುಟ್ಟದೇ ನಟನೆ ಹೇಳಿಕೊಡುತ್ತಿದ್ದರು ನಿರ್ದೇಶಕ ಪ್ರೇಮ್. ಆದರೆ, ಕೊನೆಗೂ ಸಿನಿಮಾ ನಟಿಯನ್ನೇ ಮದುವೆಯಾದರಲ್ಲ ಎಂಬುದು ಅಭಿನಯಶ್ರೀ ಸೇರಿದಂತೆ ಹಲವರಿಗೆ ಅಚ್ಚರಿ ತಂದಿರಬಹುದು. ಆದರೆ ಅದರಲ್ಲೇನಿದೆ ಅಂತ ಕೆಲವರಿಗೆ ಅನ್ನಿಸಬಹುದು. ಏಕೆಂದರೆ, ಮೈ ಮುಟ್ಟದೇ ಲವ್ ಮಾಡಬಹುದಲ್ಲ, ಲವ್ ಮಾಡಿದ ಮೇಲೆಯೇ ಮೈ ಮುಟ್ಟಿದರೆ ಸಾಕಲ್ಲ..' ಎಂಬ ಸಂಗತಿ ಹಲವರಿಗೆ ಗೊತ್ತು! ಏನಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.