
ಯಶ್ & ರಿಷಬ್ ಶೆಟ್ಟಿ ಈ ಇಬ್ಬರಲ್ಲಿ ಯಾರು ಗ್ರೇಟ್?
ಯಶ್ (Yash) ಹಾಗೂ ರಿಷಬ್ ಶೆಟ್ಟಿ (Rishab Shetty) ಈ ಇಬ್ಬರೂ ಸದ್ಯಕ್ಕೆ ಕನ್ನಡದ ಟಾಪ್ ಸ್ಟಾರ್‌ಗಳು ಎಂಬ ಮಾತಿದೆ. ದರ್ಶನ್ ಜೈಲು ಸೇರಿದ್ದಾರೆ, ಕಿಚ್ಚ ಸುದೀಪ್ ಬಿಗ್ ಬಾಸ್‌ನಲ್ಲಿ ಬ್ಯುಸಿ ಇದ್ದಾರೆ. ಮಿಕ್ಕವರ ಸಿನಿಮಾಗಳು, ಸ್ಟಾರ್‌ಗಿರಿಯ ಬಗ್ಗೆ ಏನ್ ಹೇಳೋದು? ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಯಶ್ ಹಾಗೂ ಕಾಂತಾರ ಸರಣಿ ಸಿನಿಮಾಗಳ ಮೂಲಕ ರಿಷಬ್ ಶೆಟ್ಟಿ ಈ ಇಬ್ಬರೇ ಸದ್ಯಕ್ಕೆ ಕನ್ನಡದ ಮಟ್ಟಿಗೆ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ತಾರೆಗಳು. ಆದರೆ, ಈ ಇಬ್ಬರೂ ಒಂದೇ ಅಲ್ಲ, ಅವರಿಬ್ಬರ ನಡುವೆ ಹೋಲಿಕೆ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಶುರುವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅದೊಂದು ವಿಡಿಯೋ ವೈರಲ್ ಆಗುತ್ತಿದೆ. ಟಾಲಿವುಡ್ ಅಂಗಳದಲ್ಲಿ ತಮ್ಮ 'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರಚಾರಕ್ಕಾಗಿ ಹೋಗಿರುವ ವೇಳೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ತಮ್ಮ ಮಾತನ್ನು ತೆಲುಗಿನಲ್ಲಿ ಶುರು ಮಾಡಿದ್ದಾರೆ. ಆದರೆ, ತಕ್ಷಣವೇ, ಮನಸ್ಸಿನ ಮಾತುಗಳನ್ನು ಹೇಳಬೇಕು ಎಂದರೆ ನನಗೆ ಕನ್ನಡವೇ ಸರಿ. ನನ್ನ ಕನ್ನಡವನ್ನು ತೆಲುಗಿಗೆ ಟ್ರಾನ್ಸ್‌ಲೇಟ್ ಮಾಡಿ ನಿಮಗೆ ಹೇಳಲು ಹೇಗೂ ಇಲ್ಲಿ ನನ್ನ ಸ್ನೇಹಿತ ಜೂನಿಯರ್ ಎನ್‌ಟಿಆರ್ ಇದ್ದಾರೆ ಎಂದು ಹೇಳಿ ಅಲ್ಲೇ ಪಕ್ಕದಲ್ಲಿರುವ ಜೂ. ಎನ್‌ಟಿಆರ್ ನೋಡಿ, ಬಳಿಕ, ಕನ್ನಡದಲ್ಲಿಯೇ ಮಾತು ಮುಂದುವರಿಸಿದ್ದಾರೆ.
ಅದೇ ರೀತಿ, ಅದಕ್ಕೂ ಮೊದಲು ತಮ್ಮ 'ಕೆಜಿಎಫ್' ಸಿನಿಮಾ ಪ್ರಚಾರಕ್ಕೆ ಹೋಗಿದ್ದ ನಟ ಯಶ್ ಅವರು ತೆಲುಗಿನಲ್ಲೇ ಮಾತನ್ನಾಡುತ್ತ 'ನಾವು ಎಲ್ಲಿರುತ್ತೇವೆಯೋ ಅಲ್ಲಿನ ಭಾಷೆಯಲ್ಲಿ ಮಾತನಾಡುವುದು ಒಳ್ಳೆಯದು' ಎನ್ನುತ್ತಾ ತಮಗೆ ಬಂದ ತೆಲುಗಿನಲ್ಲಿ ಮಾತನ್ನಾಡಿದ್ದಾರೆ. ಅವೆರಡೂ ವಿಡಿಯೋಗಳನ್ನು ಕೊಲಾಜ್ ಮಾಡಿರುವ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅವರಿಬ್ಬರನ್ನೂ ಕನ್ನಡದ ಸೂಪರ್ ಸ್ಟಾರ್‌ಗಳು ಎಂಬಂತೆ ಬಿಂಬಿಸಿ, ಇಬ್ಬರ ನಡುವೆ ಹೋಲಿಕ ಮಾಡಿ ಅಸಂಖ್ಯಾತ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದುಬರುತ್ತಿವೆ. ಆದರೆ ಅಚ್ಚರಿ ಎಂಬಂತೆ, ಈ ಇಬ್ಬರಲ್ಲಿ ಯಾರನ್ನೂ ಕೂಡ ಸಿನಿಪ್ರೇಮಿಗಳು ಕಂಡಮ್ ಮಾಡುತ್ತಿಲ್ಲ, ಅವರವರ ದೃಷ್ಟಿಯಲ್ಲಿ ಇಬ್ಬರ ಮಾತೂ ಸರಿಯಾಗಿದೆ ಎನ್ನುತ್ತಿದ್ದಾರೆ. ಇಬ್ಬರ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಬಂದಿಲ್ಲ.
ನಿಜ ಹೇಳಬೇಕು ಎಂದರೆ, ಯಶ್ ಹಾಗೂ ರಿಷಬ್ ಶೆಟ್ಟಿ ಮಧ್ಯೆ ಹೋಲಿಕೆಯೇ ಅಸಾಧ್ಯ. ಯಶ್ ನಟ-ನಿರ್ಮಾಪಕರು, ರಿಷಬ್ ಶೆಟ್ಟಿ ನಟ-ನಿರ್ದೇಶಕರು. ಯಶ್ ಬೆಳೆದು ಬಂದ ಹಾದಿ ಹಾಗೂ ರಿಷಬ್ ಹಾದಿ ಎರಡೂ ತುಂಬಾ ವಿಭಿನ್ನವಾಗಿದೆ. ಈ ಇಬ್ಬರೂ ಜೀರೋದಿಂದ ಬೆಳದು ಒಬ್ಬರು ರಾಕಿಂಗ್ ಸ್ಟಾರ್ (ಯಶ್) ಎನ್ನಿಸಿಕೊಂಡಿದ್ದರೆ ಮತ್ತೊಬ್ಬರು ಡಿವೈನ್ ಸ್ಟಾರ್ (ರಿಷಬ್ ಶೆಟ್ಟಿ) ಎನ್ನಿಸಿಕೊಂಡಿದ್ದಾರೆ. ಕೆಜಿಎಫ್ ಮೂಲಕ ಯಶ್ ಕಮಾಲ್ ಮಾಡಿದ್ದರೆ ಕಾಂತಾರ ಮೂಲಕ ರಿಷಬ್ ಅವರು ಭಾರೀ ಕಮಾಲ್ ಮಾಡುತ್ತಿದ್ದಾರೆ. ಯಶ್ ಅವರು ಸದ್ಯ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಹಾಗೂ ಬಾಲವುಡ್ ಸಿನಿಮಾ 'ರಾಮಾಯಣ' ಶೂಟಿಂಗ್‌ನಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಯ ಮೇಲೆ ತಮ್ಮ ದರ್ಶನ ನೀಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.