
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್ಎಸ್ಎಸ್ ಗೀತೆ "ನಮಸ್ತೆ ಸದಾ ವತ್ಸಲೆ" ಹೇಳಿದ್ದ ಕೆಲವೇ ದಿನಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ವಿರುದ್ಧ ಸಮರ ಸಾರಿರುವ ವಿಷಯ ಈಗ ಬಹು ಚರ್ಚಿತ. ಇದರ ಬಗ್ಗೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಲೇ ಇದೆ. ಆರ್ಎಸ್ಎಸ್ ಕಾರ್ಯಕ್ರಮದ ಈ ಗಲಾಟೆ ನಮಾಜ್ ವರೆಗೂ ಹೋಗಿ ಸದ್ಯ ರಾಜಕೀಯ ಪಕ್ಷಗಳ ನಡುವೆ ಕೆಸರು ಎರೆಚಾಟ ನಡೆಯುತ್ತಲೇ ಇದೆ. ಖರ್ಗೆ ಅವರ ಮಾತನ್ನು ಸಮರ್ಥಿಸುವ ಗುಂಪು ಒಂದೆಡೆಯಾದರೆ, ಆರ್ಎಸ್ಎಸ್ನ ಗುಣಗಾನ ಮಾಡುತ್ತಾ, ತಾವೂ ಆರ್ಎಸ್ಎಸ್ ಎಂದು ಹೆಮ್ಮೆಯಿಂದ ಹೇಳಿಕೊಂಡು ಪೋಸ್ಟ್ ಹಾಕುತ್ತಿರುವ ಗುಂಪು ಮತ್ತೊಂದೆಡೆ. ಅದೇ ಮತ್ತೊಂದೆಡೆ, RSS ಎಂದರೆ ಏನು ಎಂದು ತಿಳಿಯದ ಒಂದಷ್ಟು ವರ್ಗ ಗೂಗಲ್ನಲ್ಲಿ ಅದರ ಬಗ್ಗೆ, ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ.
ಇದೀಗ ನಟ ಜಗ್ಗೇಶ್ ಅವರು ತಾವು ಆರ್ಎಸ್ಎಸ್ ಪಥಸಂಚಲನಲ್ಲಿ ಭಾಗಿಯಾಗಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪಥಸಂಚಲನದಲ್ಲಿ ಹೆಜ್ಜೆಹಾಕಿದ ಹೆಮ್ಮೆಯ ಕ್ಷಣ. ಭಾಗಿಯಾದ ಎಲ್ಲಾ ಸ್ವಯಂಸೇವಕರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಶ್ರಮವಹಿಸಿದ ಆತ್ಮೀಯ ಮಾಜಿ ಶಾಸಕ ಮಸಾಲೆ ಜಯರಾಮ ರವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದರಲ್ಲಿ ಆರ್ಎಸ್ಎಸ್ ಗೀತೆ "ನಮಸ್ತೆ ಸದಾ ವತ್ಸಲೆ" ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ಪಥಸಂಚಲನದಲ್ಲಿ ಭಾಗಿಯಾಗಿರುವುದನ್ನು ನೋಡಬಹುದಾಗಿದೆ.
ಅದೇ ಇನ್ನೊಂದೆಡೆ, ತಾವು ಹುಟ್ಟಿಬೆಳೆದ ಮನೆಯ ಫೋಟೋ ಶೇರ್ ಮಾಡಿಕೊಂಡಿರುವ ನಟ ಜಗ್ಗೇಶ್ (Jaggesh) ಕೆಲವೊಮ್ಮ ಜಾಲತಾಣದಲ್ಲಿ "ಬಡವರ ಮಕ್ಕಳು ಬೆಳಿಬೇಕು" ಅವಕಾಶ ಸಿಗುತ್ತಿಲ್ಲಾ ಎಂಬ ಕೂಗು ನೋಡಿ ದುಃಖವಾಗುತ್ತೆ ಜೊತೆಗೆ ಸಣ್ಣ ಸಿಟ್ಟು ಬರುತ್ತದೆ ಕಾರಣ ಕೆಲವರು ನೀವೇನು ಬಿಡಿ ಸಾರ್ ನಿಮ್ಮತ್ರ ಇದೆ ಸಂತೋಷವಾಗಿ ಇದ್ದೀರ ನಾವು ಏನು ಮಾಡೋದು ಬಡವರು ಸಾರ್ ಎಂದು ಕಾಮೆಟ್ ಹಾಕುತ್ತಾರೆ. ಮಹನೀಯರೆ ಚನ್ನಾಗಿ ನೋಡಿ ಇದೆ ಮನೆಯಲ್ಲೆ ನಮ್ಮ ವಂಶ ಬೆಳೆದು ಬಂದದ್ದು ಎಂದು ಗುಡಿಸಲನ್ನು ತೋರಿಸಿದ್ದಾರೆ.
ಇದೇ ಜಗಲಿ ನನ್ನ ಆಟದ ಮೈದಾನ, ಇದೇ ಜಗಲಿ ತಾತನ ತೊಡೆಯ ಮೇಲೆ ನಿದಿರೆ, ಇದೇ ಜಗಲಿಯ ಮೇಲೆ ರಾಗಿ ರೊಟ್ಟಿ ಉಚ್ಚೆಳ್ಳು ಚಟ್ನಿ ಬೆಣ್ಣೆ ತಿಂದು ಜಟ್ಟಿಯಂತೆ ಬೆಳೆದದ್ದು, ಇದೇ ಜಗಲಿಯ ಮುಂದೆ ಅಜ್ಜಿ ಸೀಗೆಕಾಯಿ ಅರೆದು ಸ್ನಾನ ಮಾಡಿಸಿದ್ದು, ಇದೇ ಜಗಲಿಯ ಮುಂದೆ ಈಚಲು ಚಾಪೆ ಮೇಲೆ ಮಲಗಿ ಚಂದಿರ ನಕ್ಷತ್ರ ನೋಡುತ್ತ ಧ್ರುವ ನಕ್ಷತ್ರದಂತೆ ಅಜರಾಮರ ಬೆಳೆಯಬೇಕು ಕಂದ ಎಂದು ತಾತ ಕಥೆ ಹೇಳಿ ಹರಸಿದ್ದು, ಇದೇ ಮನೆಯ ಮುಂದೆ ಅಪ್ಪನ ತಮ್ಮ ತಂಗಿಯರ ಮದುವೆ ಕಂಡಿದ್ದು, ಇದೇ ರಸ್ತೆಯ ಹನುಮಂತನ ಮುಂದೆ ಊರು ಮಂದಿಯ ನಾಟಕ ನೋಡಿದ್ದು oh my god ಇದೇ ಪರಿಸರದ ಹುಡುಗ ನವರಸನಾಯಕ ಆಗಿದ್ದು... ಎಂದಿದ್ದಾರೆ.
ನಾನು ಬಡವರ ಮಗ ಎಂದು ಕೊರಗಿದ್ದರೆ ಇದೇ ರಸ್ತೆಯಲ್ಲೆ ಮುದಿಯ ವಯಸ್ಸು ಕಳೆಯಬೇಕಿತ್ತು ಅಲ್ಲವೆ? So ನನ್ನ advice ಸಿಕ್ಕ ಕೆಲಸ ಶ್ರದ್ಧೆಯಿಂದ ಮಾಡಿ ಪೈಸ ಪೈಸ ಕೂಡಿಸಿ ಇಡಿ,ಯಾವ ದುರಭ್ಯಾಸ ಕಲಿಯದಿರೆ, ತಂದೆತಾಯಿ ದೇವರಂತೆ ಕಾಣಿರಿ ಒಂದುದಿನ ಜಗಗೆದ್ದು ನನ್ನಂತೆ ಮುಂದಿನವರಿಗೆ ಗೆಲುವಿನ ಕಥೆ ಹಂಚಿಕೊಳ್ಳಿ. Love you all ಬಡವರ ಮಗ ಗೆದ್ದ ಕಥೆ ಇಷ್ಟವಾಯಿತ ಮನಸಿದ್ದರೆ ಮಾರ್ಗ ಎಂದು ಹೇಳಿದ್ದಾರೆ. ಈ ಮೂಲಕ ಒಂದು ಉನ್ನತ ಸ್ಥಾನಕ್ಕೆ ಬರಬೇಕಾದರೆ ಅದೆಷ್ಟೋ ಮಂದಿ ಯಾವ ಮಟ್ಟಿಗಿನ ಪರಿಶ್ರಮ ಪಟ್ಟಿರುತ್ತಾರೆ, ಆಮೇಲೆ ಜನ ಏನು ಮಾತನಾಡಿಕೊಳ್ತಾರೆ ಎನ್ನುವ ಕಹಿ ಸತ್ಯವನ್ನು ನಟ ಅನಾವರಣಗೊಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.