
ತುಳುನಾಡು ದೇವರು-ದೈವಗಳಿಂದ ರಿಷಬ್ ಶೆಟ್ಟಿ ಪ್ರಪಂಚಕ್ಕೆ ಪರಿಚಯವಾದ್ರಾ? ಅಥವಾ ಅವುಗಳಿಂದ ಇವರಾ..?
ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರೋ ಹಾಟ್ ಟಾಪಿಕ್ ಅಂದ್ರೆ ಅದು ರಿಷಬ್ ಶೆಟ್ಟಿಯವರ (Rishab Shetty) 'ಕಾಂತಾರ ಚಾಪ್ಟರ್ 1' ಸಿನಿಮಾ. ಈ ಸಿನಿಮಾ 02 ಅಕ್ಟೋಬರ್ 2025ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಈಗಾಗಲೇ 717.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಈ ವರ್ಷದ (2025) ಭಾರತದ ಎರಡನೇ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ-ವಿಕ್ಕಿ ಕೌಶಲ್ ನಟನೆಯ 'ಛಾವಾ' ಇದೆ. ಆದರೆ, ಕಾಂತಾರ 1 ಸಿನಿಮಾ (Kantara Chapter 1) ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಛಾವಾ ಗಳಿಕೆಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ. ಈ ಮಧ್ಯೆ ಹೊಸದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ. ಅದೇನು ನೋಡಿ...
'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಹಲವರ ಪ್ರಕಾರ, ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಕಾಂತಾರ ಸಿನಿಮಾಗಿಂತ ಮೊದಲು ಕನ್ನಡದ ಮಟ್ಟಿಗೆ ಜನಪ್ರಿಯ ನಟರು-ನಿರ್ದೇಶಕರು ಆಗಿದ್ದವರು. 'ಬೆಲ್ ಬಾಟಮ್' ಮೂಲಕ ನಟನಾಗಿ ಹಾಗೂ 'ಕಿರಿಕ್ ಪಾರ್ಟಿ' ಹಾಗೂ 'ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು' ಮೂಲಕ ನಿರ್ದೇಶಕರಾಗಿಯೂ ಖ್ಯಾತಿ ಗಳಿಸಿದ್ದರು.
ರಿಷಬ್ ಶೆಟ್ಟಿ ನಿರ್ದೇಶನದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು" ಚಿತ್ರವು 2019 ರಲ್ಲಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ (ಸ್ವರ್ಣ ಕಮಲ) ಗೆದ್ದುಕೊಂಡಿದೆ. ಆದರೆ, ಅವರಿಗೆ ಈ ಮಟ್ಟಿಗಿನ ಜಾಗತಿಕ ಖ್ಯಾತಿ- ಸಂಪಾದನೆ ಎಲ್ಲವೂ ಬಂದಿದ್ದು ದೈವದ ಸಿನಿಮಾ 'ಕಾಂತಾರ' ಮಾಡಿದ ಬಳಿಕವೇ. ಹೀಗಾಗಿ 'ಕಾಂತಾರ' ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರು ವಿಶ್ವಪ್ರಸಿದ್ಧಿ ಪಡೆದಿದ್ದಾರೆ ಎಂಬುದು ಒಂದು ವಾದ. ಆದರೆ.. ಇಷ್ಟೇ ಅಲ್ಲ…
ಆದರೆ, ಇನ್ನೊಂದು ವಾದ- ಕಾಂತಾರಗಿಂತ ಮೊದಲು ಅವರು 'ರಾಷ್ಟ್ರೀಯ ಪ್ರಶಸ್ತಿ' ಪಡೆದಿದ್ದರೂ, ನಟರಾಗಿ ಗುರುತಿಸಿಕೊಂಡಿದ್ದರೂ ಕೂಡ ಇಂದು ಅವರು ಏರಿರುವ ಎತ್ತರ ಊಹೆಗೂ ನಿಲುಕದ್ದು. ಇಂದು ರಿಷಬ್ ಶೆಟ್ಟಿಯವರು ಭಾರತದ 'ನಂಬರ್ ಒನ್' ಸೆಲೆಬ್ರಟಿ ಎಂಬಷ್ಟು ಖ್ಯಾತಿ ಗಳಿಸಿದ್ದು 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಮಾಡಿದ ಬಳಿಕವೇ ಆಗಿದೆ. ಇದು ಅವರ ಸ್ವಪ್ರಯತ್ನದ ಜೊತೆಗೆ ದೇವರು-ದೈವದ ಸಿನಿಮಾ ಮಾಡಿರುವ ಕಾರಣಕ್ಕೇ ಎನ್ನುವುದು ಮತ್ತೊಂದು ವಾರ. ಈ ಎರಡೂ ಆಂಗಲ್‌ಗಳಲ್ಲಿ ಈಗ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಮುಂದೆ ಈ ಡಿಬೇಟ್ ಎಲ್ಲಿಗೆ ಹೋಗಿ ತಲುಪತ್ತೋ ಏನೋ!
ಆದರೆ,… ಎಲ್ಲರೂ ಗಮನಸಿಬೇಕಾದ ಸಂಗತಿ ಇದು. ನಟ ಹಾಗೂ ನಿರ್ದೇಶಕರಾಗಿ 'ಕಾಂತಾರ' ಸಿನಿಮಾಗಿಂತಲೂ ಮೊದಲು ರಿಷಬ್ ಶೆಟ್ಟಿಯವರು ಸಿನಿಮಾದ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದರು. 'ಕಿರಿಕ್ ಪಾರ್ಟಿ' ತರಹದ ಕಮಿರ್ಷಿಯಲ್ ಸಿನಿಮಾ ಹಾಗೂ 'ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು'ದಂತಹ ಕಲಾತ್ಮಕ ಸಿನಿಮಾ ಎರಡರಲ್ಲೂ ಅವರು ತೊಡಗಿಸಿಕೊಂಡು ಸಿನಿಮಾದ ಪಟ್ಟು ಅರಿತುಕೊಂಡಿದ್ದರು. ಅದಕ್ಕೂ ಮೊದಲು ಮಾಡಿರುವ ಕೆಲವು ಸಿನಿಮಾಗಳ ಮೂಲಕ ರಿಷಬ್ ಅವರು ಸಿನಿಮಾ ನಿರ್ದೇಶನ ಹಾಗೂ ನಟನೆಯ ಗ್ರಾಮರ್ ಅರಿತುಕೊಂಡಿದ್ದರು. ಆದರೆ, ಅದೆಲ್ಲವುಗಳಿಂದ ಇಂದು ಅವರು ಗಳಿಸಿರುವ ಈ ಅಪಾರ ಪ್ರಮಾಣದ ಜನಪ್ರಿಯತೆ ಹಾಗೂ ದಾಖಲೆ ಗಳಿಕೆಯ ಸಿನಿಮಾ ಮಾಡಲು ಸಾಧ್ಯವೇ? ಇಲ್ಲಿದೆ ನಿಜವಾದ ಉತ್ತರ..
ರಿಷಬ್ ಶೆಟ್ಟಿಯವರು ಹುಟ್ಟಿನಿಂದಲೇ ದೇವರು-ದೈವಗಳ ಆರಾಧನೆ ಮಾಡುವ ಕುಟುಂಬದಲ್ಲೇ ಬೆಳೆದುಬಂದವರು. ಅವರ ಸಂಸ್ಕಾರದಲ್ಲೇ ದೇವರು ದೈವಗಳ ಮೇಲಿನ ಭಕ್ತಿ, ಆರಾಧನೆಯ ಕಲೆ-ಸಂಸ್ಕೃತಿ ರಕ್ತಗತವಾಗಿದೆ. ಸಿನಿಮಾರಂಗಕ್ಕೆ ಬಂದು ಹಂತಹಂತವಾಗಿ ಬೆಳೆಯುತ್ತಾ ಅವರು ತಮ್ಮಲ್ಲಿರುವ ದೇವರು, ದೈವಗಳ ಆರಾಧನೆಗಳನ್ನೂ ಹೆಚ್ಚುಹೆಚ್ಚಾಗಿ ಮೈಗೂಡಿಸಿಕೊಂಡು ಬಂದಿದ್ದಾರೆ. ಅವರೇ ಹೇಳಿರುವಂತೆ ಅವರಿಗೆ 'ದೈವ-ದೇವರು' ಈ ವಿಷಯದ ಮೇಲೆ ಸಿನಿಮಾ ಮಾಡುವಂತೆ ಪ್ರೇರಣೆ, ಅಂದರೆ ಇಂಟ್ಯೂಶನ್ (Intution) ಆಗಿದೆ. ಹೀಗಾಗಿಯೇ ರಿಷಬ್ ಅವರು 'ಕಾಂತಾರ' ಸಿನಿಮಾವನ್ನು 2022ರಲ್ಲಿ ತೆರೆಗೆ ತಂದಿದ್ದಾರೆ.
ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿಯವರು ಇದೀಗ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ದೈವದ ಒಪ್ಪಿಗೆ ಪಡೆದು ಮಾಡಿದ್ದಾರೆ. ಈ ಸಿನಿಮಾ ಈಗ ಅವರಿಗೆ ವಿಶ್ವವ್ಯಾಪಿ ಖ್ಯಾತಿ ತಂದುಕೊಟ್ಟಿದೆ. ಇದೀಗ ತೆರೆಯಲ್ಲಿ ಮೆರೆಯುತ್ತಿರುವ 'ಕಾಂತಾರ 1' ಸಿನಿಮಾ ಮೂಲಕ ರಿಷಬ್ ಶೆಟ್ಟಿಯವರು ಟಾಕ್ ಆಫ್ ದಿ ವರ್ಲ್ಡ್' ಆಗಿದ್ದಾರೆ. ಇದು 'ದೇವರು-ದೈವದ ಮಹಿಮೆಯೇ' ಎಂದು ಸ್ವತಃ ರಿಷಬ್ ಅವರೇ ಎಷ್ಟೀ ಕಡೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾಂತಾರ ಸಿನಿಮಾಗಳ ಮೇಕಿಂಗ್ ಹಾಗೂ ಸಿಕ್ಕಿರುವ ಅ'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.ಸಾಮಾನ್ಯ ಜನಪ್ರಿಯತೆ ದೇವರು-ದೈವಗಳ ಅನುಗ್ರಹವೇ ಎಂದು ಹೇಳುತ್ತ ಭಾರತದ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಎಲ್ಲಾ ದೇವರುಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಸ್ವತಃ ರಿಷಬ್ ಶೆಟ್ಟಿಯವರು. ಇನ್ನೇಕೆ ಚರ್ಚೆ? ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಈ ಪ್ರಶ್ನೆಯೇ ಮಾಯವಾಗಬೇಕಾದ ಟೈಂ ಬಂದಾಯ್ತು ಅಲ್ಲವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.