ನಿರ್ಮಾಪಕರ ಮನೆಗೆ ನಟ ಪ್ರೇಮ್ ಭೇಟಿ ನೀಡುತ್ತಿದ್ದಂತೆ ಕಾಣಿಸಿಕೊಂಡ 6 ಅಡಿ ನಾಗರಹಾವು?

Published : Feb 04, 2023, 03:39 PM ISTUpdated : Feb 04, 2023, 03:41 PM IST
ನಿರ್ಮಾಪಕರ ಮನೆಗೆ ನಟ ಪ್ರೇಮ್ ಭೇಟಿ ನೀಡುತ್ತಿದ್ದಂತೆ ಕಾಣಿಸಿಕೊಂಡ 6 ಅಡಿ ನಾಗರಹಾವು?

ಸಾರಾಂಶ

 ನಿರ್ಮಾಪಕ ವೆಂಕರೆಡ್ಡಿ ಮನೆ ಬಳಿ ಕಾಣಿಸಿಕೊಂಡ 6 ಅಡಿ ನಾಗರಹಾವು. ಹಾವುಗಳ ಬಗ್ಗೆ ಪ್ರಶ್ನೆ ಕೇಳಿದ ಪ್ರೇಮ್....   

ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಪ್ರೇಮ್ ಕೆಲವು ದಿನಗಳ ಹಿಂದೆ ನಿರ್ಮಾಪಕ ವೆಂಕರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಮನೆ ಹತ್ತಿರ 6 ಅಡಿ ನಾಗರಹಾವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಾವು ನೋಡುತ್ತಿದ್ದಂತೆ ಅವುಗಳ ಬಗ್ಗೆ ತಿಳಿದುಕೊಳ್ಳಲು ಪ್ರೇಮ್ ಪ್ರಶ್ನೆ ಕೇಳಿದ್ದಾರೆ.  ಉರಗತಜ್ಞ ಸಂಗಮೇಶ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಮನೆಯವರು ಅಲ್ಲಿಗೆ ಬಂದು ತಮ್ಮ ಫೋನುಗಳಲ್ಲಿ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ. 

ನಿರ್ಮಾಪಕ ವೆಂಕರೆಡ್ಡಿ ಮನೆ ಹಿಂದಿ ಲಕ್ಷ್ಮಿ ದೇವಸ್ಥಾನವಿದೆ ಅದರ ಬಳಿ ಅಂದಾಜು 6 ಅಡಿಯ ನಾಗರಹಾವು ಕಾಣಿಸಿಕೊಂಡಿದೆ. ಹಾವು ಹೆಡೆ ಎತ್ತಿ ಬುಸುಗುತ್ತಿತ್ತು ಅದಕ್ಕೆ ಹೆದರಿಕೊಂಡು ದೇವ್ಥಾನಕ್ಕೆ ಬಂದ ಭಕ್ತರು ಹಾಗೂ ಸ್ಥಳೀಯರು ಭಯಗೊಂಡಿದ್ದಾರೆ. ತಕ್ಷಣವೇ ಉರಗತಜ್ಞ ಸಂಗಮೇಶ್‌ ಅವರನ್ನು ಸಂಪರ್ಕಿಸಿದ್ದಾರೆ. ಹಾವು ಹಿಡಿದ ಸಂಗಮೇಶ್‌ ಹಾವುಗಳ ಗುಣದ ಬಗ್ಗೆ ಅಲ್ಲಿದ್ದ ಜನರಿಗೆ ತಿಳಿಸಿದ್ದಾರೆ. 

7 ಲಕ್ಷ ಬೆಲೆಯ ಹಾವು ವೈಷ್ಣವಿ ಮೈ ಮೇಲೆ; ವಿಚಿತ್ರ ಪ್ರಾಣಿಗಳನ್ನು ನೋಡಿ, ವಿಡಿಯೋ ವೈರಲ್

ಹಾವುಗಳು ಸಾಮಾನ್ಯವಾಗಿ ಜನರಿಗೆ ಏನೂ ಮಾಡುವುದಿಲ್ಲ ಎಂದು ಸಂಗಮೇಶ್ ಹೇಳುವಾಗ ಹಾವುಗಳು ಏನು ತಿನ್ನುತ್ತದೆ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ. ಹಾವುಗಳು ಮೊಟ್ಟೆ ಇಲ್ಲಿ ತಿನ್ನುತ್ತದೆ. ಹಾವುಗಳು ಹಾಲು ಕುಡಿಯುವುದಿಲ್ಲ ಒಂದೆ ವೇಳೆ ಹಾಲು ಕುಡಿದರೆ ಎರಡು ಮೂರು ದಿನಗಳಲ್ಲಿ ಸತ್ತು ಹೋಗುತ್ತದೆ ಎಂದು ಸಂಗಮೇಶ್ ಹೇಳಿದ್ದಾರೆ. 

ಹಾವುಗಳಲ್ಲಿ ಅತ್ಯಂತ ವಿಷಕಾರಿ ಅಂದ್ರೆ ನಾಗರಹಾವು ಆದರೆ ಯಾವ ಜೀವಿ ಮೇಲೂ ಪೂರ್ಣ ವಿಷ ಪ್ರಯೋಗಿಸುವುದಿಲ್ಲ. 

ಪ್ರೇಮ್‌ ಮತ್ತು ನಿರ್ದೇಶಕ ವೆಂಕರೆಡ್ಡಿ ಯಾವ ಕಾರಣಕ್ಕೆ ಭೇಟಿ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ ಆದರೆ ಬಿಗ್ ಬಜೆಟ್ ಸಿನಿಮಾ ಚರ್ಚೆ ಎನ್ನುಬಹುದು. 

ಪ್ರೇಮ್ ಸಿನಿಮಾ:

ಪ್ರೇಮಂ ಪೂಜ್ಯಂ ರೊಮ್ಯಾಂಟಿಕ್ ಸಿನಿಮಾ ನಂತರ ಪ್ರೇಮ್ ಎರಡು ಮೂರು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಶೀಘ್ರದಲ್ಲಿ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಇದೇ ಸಮಯಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿರುವ ಗುರು ಶಿಷ್ಯರು ಸಿನಿಮಾದಲ್ಲಿ ಪ್ರೇಮ್ ಪುತ್ರ ಅಭಿನಯಿಸಿದ್ದಾರೆ. ಪ್ರೇಮ್‌ ಮಗನ ನಟನೆ ಮೆಚ್ಚುತ್ತಿದ್ದಂತೆ ಪ್ರೇಮ್ ಪುತ್ರಿ ಅಮೃತಾ ಕೂಡ ವಿದ್ಯಾಭ್ಯಾಸ ಮುಗಿಸಿ ಟಗರು ಪಲ್ಯ ಸಿನಿಮಾ ಸಹಿ ಮಾಡುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನಾಗಭೂಷಣ್‌ಗೆ ಜೋಡಿಯಾಗಿರುವ ಅಮೃತಾ ಪಕ್ಕಾ ಹಳ್ಳಿ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದ್ದರು ಶೀಘ್ರದಲ್ಲಿ ಸಾಂಗ್ ರಿಲೀಸ್ ಮಾಡಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!