ಕೊನೆ 20 ನಿಮಿಷ ಹೊಗಳಿದ ಸೋನು. ಚಳಿ ಜ್ವರದಿಂದ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ರೀಲ್ಸ್ ಕ್ವೀನ್....
ಡಿಫರೆಂಟ್ ಡೈರೆಕ್ಟರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ತಂದುಕೊಟ್ಟಿದೆ. ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾದಾಗಲೂ ದಾಖಲೆ ಮಾಡಿದೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಅಗಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿಗೆ ಡಿವೈನ್ ಸ್ಟಾರ್ ಅನ್ನೋ ಕಿರೀಟ ಕೂಡ ಸಿಕ್ಕಿತ್ತು. ಈ ಸಿನಿಮಾವನ್ನು ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಹೇಗಿತ್ತು ಎಂದು ವಿವರಿಸಿದ್ದಾರೆ.
ಸೋನು ಮಾತು:
'ನನ್ನ ಸ್ನೇಹಿತರು ಕಾಂತಾರ ಸಿನಿಮಾ ನೋಡು ನೋಡು ಎಂದು ಹೇಳುತ್ತಿದ್ದರು. ಸಿನಿಮಾ ನೋಡುವ ಇಂಟ್ರೆಸ್ಟ್ ಕಳೆದುಕೊಂಡಿದ್ದೆ. ಬಿಗ್ ಬಾಸ್ ಓಟಿಟಿ ಮನೆಯಿಂದ ಹೊರ ಬಂದ ನಂತರ ಹೊರ ಹೋಗಲು ನನಗೆ ಮನಸ್ಸು ಇರಲಿಲ್ಲ ಅಷ್ಟು ಸುಸ್ತು ಆಗಿತ್ತು ರೆಸ್ಟ್ ಬೇಕು ಅನಿಸುತ್ತಿತ್ತು. ಎಲ್ಲರು ಹೇಳುತ್ತಿದ್ದಾರೆ ಎಂದು ರಾತ್ರಿ ಶೋಗೆ ಅಕ್ಕನನ್ನು ಕರೆದುಕೊಂಡು ಹೋದೆ. ಸಿನಿಮಾ ಪೂರ್ತಿ ಇರುವುದು ಮಂಗಳೂರು ಭಾಷೆಯಲ್ಲಿ, ಆರಂಭದಲ್ಲಿ ಸಿನಿಮಾ ಏನೂ ಅರ್ಥವಾಗುತ್ತಿರಲಿಲ್ಲ. ಇರಲಿ ಇರಲಿ ಅಂತ ಸಾಂಗ್ ನೋಡ್ಕೊಂಡು ಸುಮ್ಮನಿದ್ದೆ ಹಾಗೆ ಹೋಗ್ತಾ ಹೋಗ್ತಾ ಸಿನಿಮಾ ಸೂಪರ್ ಆಗಿದೆ. ಚಿತ್ರದ ಕೊನೆ 20 ನಿಮಿಷ ಇದ್ಯಲ್ಲ ಗುರು ವೋ....' ಎಂದು ಖಾಸಗಿ ವಾಹಿನಿ ಸಂದರ್ಶನದಲ್ಲಿ ಸೋನು ಮಾತನಾಡಿದ್ದಾರೆ.
ಕಿರುತೆರೆಯಲ್ಲಿ ಹೊಸ ದಾಖಲೆ: ಕಾಂತಾರ ಸಿನಿಮಾಗೆ 15.8 ಟಿವಿಆರ್ ರೇಟಿಂಗ್
'ಯಾರು ನಂಬುವುದಿಲ್ಲ ಕಾಂತಾರಾ ಸಿನಿಮಾ ನೋಡಿ ಕೊಂಡು ಮನೆಗೆ ಬಂದು ಮಲಗಿರುವೆ ರಾತ್ರಿ ನನಗೆ ಚಳಿ ಜ್ವರ ಬಂದಿತ್ತು. ಸ್ವಲ್ಪ ಆರೋಗ್ಯ ಕೆಟ್ಟಿತ್ತು, ಜೊತೆಗೆ ಈ ಚಳಿ ಜ್ವರ ಇದ್ದ ಕಾರಣ ಆಸ್ಪತ್ರೆಗೆ ಹೋದೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಬೆಂಗಳೂರಿನಲ್ಲಿ ಒಂದು ವಾರ ಮಂಡ್ಯದಲ್ಲಿ ಒಂದು ವಾರ ಆಸ್ಪತ್ರೆಯಲ್ಲಿದ್ದೆ. ಓಟಿಟಿಯಲ್ಲಿ ಕಾಂತಾರಾ ಸಿನಿಮಾ ರಿಲೀಸ್ ಮಾಡಿದ್ದಾರೆ ಅದಿಕ್ಕೆ ನನ್ನ ಅಕ್ಕ ಹೇಳುತ್ತಾರೆ ಹುಷಾರು ಸಿನಿಮಾ ನೋಡುವಾಗ ಮತ್ತೆ ಚಳಿ ಜ್ವರ ಬರಬಹುದು ಎಂದು. ಚಿತ್ರದ ಕೊನೆ 20 ನಿಮಿಷ ನೋಡಿ ನನಗೆ ಹೇಗೆ ಅನಿಸಿತ್ತು ಅಂದ್ರೆ ಈ ರೀತಿ ಸಿನಿಮಾಗಳನ್ನು ಮಾಡಲು ಹೇಗೆ ಸಾಧ್ಯ. ಕೆಲವೊಂದು ಸಿನಿಮಾಗಳಲ್ಲಿ ತುಂಬಾ ಗ್ರಾಫಿಕ್ಸ್ ಮಾಡಿರುತ್ತಾರೆ ಆದರೆ ಕಾಂತಾರ ತುಂಬಾ ಸಿಂಪಲ್ ಮತ್ತು ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಇಂಥ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ನಾವು ಬೆಳೆಯಬೇಕು ಇವ್ರುಗಳ ಜೊತೆ ಒಂದು ಹೆಜ್ಜೆ ಇಡ್ತೀವಿ ಅಂತ ಯೋಚನೆ ಮಾಡಿದರೆ ತುಂಬಾ ಖುಷಿಯಾಗುತ್ತದೆ.' ಎಂದು ಸೋನು ಹೇಳಿದ್ದಾರೆ.
ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್
ಕಿರುತೆರೆ ಇತಿಹಾಸ:
ಕಾಂತಾರ ಸಿನಿಮಾ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸ್ಟಾರ್ ಸುವರ್ಣ ಇತಿಹಾಸದಲ್ಲಿಯೇ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ 'ಕಾಂತಾರ'ವಾಗಿದೆ. SD ಹಾಗೂ HD ಎರಡರಿಂದಲೂ 'ಕಾಂತಾರ'ಗೆ 15.8 TVR ಗಿಟ್ಟಿಸಿಕೊಂಡಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ 10+ TVR ಪಡೆದುಕೊಂಡಿತ್ತು. ಇದೀಗ ಕಾಂತಾರ ಈ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ ಮುನ್ನುಗ್ಗಿದೆ. ಎರಡೂ ಸಿನಿಮಾಗಳಿಗಿಂತಲೂ ಹೆಚ್ಚು ಟಿಆರ್‌ಪಿ 'ಕಾಂತಾರ'ಗೆ ಸಿಕ್ಕಿದೆ. ಈ ಮೂಲಕ ರಿಷಬ್ ಶೆಟ್ಟಿ ಸಿನಿಮಾ ಕಿರುತೆರೆಯಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ.