ಸೌಂದರ್ಯ ಸಾವಿನ ಬಳಿಕ 'ಆಪ್ತಮಿತ್ರ' ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಭಯಾನಕ ಘಟನೆ ವಿವರಿಸಿದ ಗುರುಕಿರಣ್​!

ಆಪ್ತಮಿತ್ರ ಚಿತ್ರದ ಶೂಟಿಂಗ್​ ಮುಗಿಸಿ ಹೊರಟಿದ್ದ ನಟಿ  ಸೌಂದರ್ಯ ಸಾವಿನ ಬಳಿಕ ಚಿತ್ರದ  ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಆ ಘಟನೆ ವಿವರಿಸಿದ ಗುರುಕಿರಣ್​!
 

Gurukiran about the horrible experiece during editing of Apthamitra at Soundaryas death suc

ಸೌಂದರ್ಯದ ಘನಿ, ನಟನೆಯಲ್ಲಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದ ನಟಿ ಸೌಂದರ್ಯ ಅವರ ಸಾವು ಇನ್ನೂ ನಿಗೂಢವಾಗಿಯೇ ಉಳಿದುಬಿಟ್ಟಿದೆ. 2004ರ ಏಪ್ರಿಲ್​ 17ರಂದು  ರಾಜಕೀಯ ಪ್ರಚಾರದ ನಿಮಿತ್ತ ತಮ್ಮ ಸಹೋದರ ಅಮರನಾಥ್ ಜೊತೆಗೆ ನಟಿ ಸೌಂದರ್ಯ ಬೆಂಗಳೂರಿನಿಂದ ಕರೀಂನಗರ್‌ಗೆ ಹೊರಟಿದ್ದರು. ಅಲ್ಲಿ ಬಿಜೆಪಿ  ಪರವಾಗಿ ಸೌಂದರ್ಯ ಚುನಾವಣಾ ಪ್ರಚಾರ ಮಾಡಬೇಕಿತ್ತು. ಜಕ್ಕೂರು ಏರ್‌ಫೀಲ್ಡ್‌ನಲ್ಲಿ ಏರ್‌ಕ್ರಾಫ್ಟ್‌ ಟೇಕಾಫ್ ಆಗುತ್ತಿದ್ದ ಹಾಗೆ ಕ್ರ್ಯಾಶ್ ಆಯ್ತು. ವಿಮಾನ ಅಪಘಾತದಲ್ಲಿ ಸೌಂದರ್ಯ ಮೃತಪಟ್ಟರು. ಗರ್ಭಿಣಿಯಾಗಿದ್ದ ನಟಿ ಸೌಂದರ್ಯ ಅವರಿಗೆ ಆಗ  31 ವರ್ಷ ವಯಸ್ಸು. ಅದಾಗಲೇ  ‘ಆಪ್ತಮಿತ್ರ’ ಚಿತ್ರೀಕರಣವನ್ನ ಮುಗಿಸಿಕೊಟ್ಟಿದ್ದರು.  ಇವರು ನಿಧನರಾಗಿ ಎರಡು ದಶಕ ಕಳೆದ ಮೇಲೆ ಇದೀಗ ಇವರ ಸಾವು ಸಾವಲ್ಲ, ಕೊಲೆ ಎಂದು ಈಗ ಮತ್ತೆ ಕೇಸ್​​ ರೀ ಓಪನ್​ ಆಗಿದೆ.  ತೆಲುಗು ನಟ ಮೋಹನ್ ಬಾಬು ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ನಟಿಯ ಅಕಾಲಿಕ ಸಾವು ಆಕಸ್ಮಿಕವಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಡಿರುವ ಕೊಲೆ ಎಂದು ಆರೋಪಿಸಲಾಗಿದೆ.

ಆಪ್ತಮಿತ್ರದ ಸಿನಿಮಾದಿಂದಲೇ ನಟಿಯ ಸಾವು ಸಂಭವಿಸಿದೆ ಎಂದು ಆಗ ಹೇಳಲಾಗಿತ್ತು. ಆಪ್ತ ರಕ್ಷಕ ಸಿನಿಮಾ ಬಳಿಕ ವಿಷ್ಣುವರ್ಧನ್​ ಅವರ ಸಾವಿನ ಬಳಿಕವಂತೂ ಆಪ್ತ ಮಿತ್ರದ ನಾಗವಲ್ಲಿ ಪಾತ್ರದಿಂದಲೇ ಸೌಂದರ್ಯ ಸತ್ತಿರುವುದಾಗಿ ಹೇಳಲಾಗುತ್ತಿದೆ. ಮೊದಲೇ ಹೇಳಿದಂತೆ ಆಗಷ್ಟೇ ನಟಿ ಆಪ್ತಮಿತ್ರ ಸಿನಿಮಾ ಮುಗಿಸಿಕೊಟ್ಟು ಹೋಗಿದ್ದರು. ಅದು ಎಡಿಟಿಂಗ್​ ಎಲ್ಲವೂ ಆಗಬೇಕಿತ್ತು. ಚಿತ್ರದ ಮುಂದಿನ ಎಲ್ಲಾ ಕಾರ್ಯಗಳೂ ನಡೆಯಬೇಕಿತ್ತು. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಇದರ ಎಡಿಟಿಂಗ್​ ಕಾರ್ಯ ನಡೆಸುತ್ತಿದ್ದಾಗ ರಾತ್ರಿಯ ವೇಳೆ ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಸೌಂದರ್ಯ ಸಾವಿನ ಬಳಿಕ, ರಾತ್ರಿ ಎಡಿಟಿಂಗ್​ ಕಾರ್ಯವೆಲ್ಲಾ ಮಾಡುವುದು ತುಂಬಾ ಕಷ್ಟವಾಯಿತು. ಏನೋ ಭಯ ಕಾಡಲು ಶುರುವಾಗಿತ್ತು. ಸಿಕ್ಕಾಪಟ್ಟೆ ತೊಂದರೆ ಎನ್ನಿಸುತ್ತಿತ್ತು ಎಂದಿದ್ದಾರೆ.

Latest Videos

ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸೆಟ್​ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ ಭೂಮಿಕಾ

ಸೌಂದರ್ಯ ಅವರು ನಿಧನರಾದರೂ, ಚಿತ್ರದ ಎಡಿಟಿಂಗ್​ ವೇಳೆ ಅವರ ನಾಗವಲ್ಲಿಯ ನೋಟ ಎಲ್ಲವನ್ನೂ ನೋಡುವಾಗ ಭಯ ಕಾಡುತ್ತಿತ್ತು. ರಾತ್ರಿಯ ಸಮಯದಲ್ಲಿ ಅದೇನೋ ಫೀಲ್​ ಆಗುತ್ತಿತ್ತು. ತುಂಬಾ ಭಯಗೊಂಡಿದ್ದೆ. ಆದ್ದರಿಂದ ರಾತ್ರಿ ಈ ಸಿನಿಮಾದ ಕಾರ್ಯ  ಮಾಡಲೇ ಇಲ್ಲ ಎಂದಿದ್ದಾರೆ. ಇದೇ ವೇಳೆ ಇನ್ನೊಂದು ಸಿನಿಮಾ ಪ್ರಾಜೆಕ್ಟ್​ ಇತ್ತು. ಆದರೆ, ಈ ಘಟನೆಯ ಬಳಿಕ ಅದು ಕೂಡ ಮುಂದಕ್ಕೆ ಹೋಯಿತು. ಆದ್ದರಿಂದ ಆಪ್ತಮಿತ್ರ ಬೇಗ ಮುಗಿಸೋಣ ಎಂದುಕೊಂಡರೆ, ಆ ಭಯದ ವಾತಾವರಣದಿಂದ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ. 

 ಸೌಂದರ್ಯ ಸಾವನ್ನಪ್ಪಿದ ಬಳಿಕ ‘ಆಪ್ತಮಿತ್ರ’ ಸಿನಿಮಾ ಬಿಡುಗಡೆಯಾಗಿತ್ತು. ನಿರೀಕ್ಷೆಗೂ ಮೀರಿ ಈ ಚಿತ್ರ ಯಶಸ್ಸು ಗಳಿಸಿತ್ತು. ದಿನಕ್ಕೆ 4 ಆಟಗಳಂತೆ ಒಂದು ವರ್ಷ 2 ಥಿಯೇಟರ್‌ಗಳಲ್ಲಿ ಸತತ ಪ್ರದರ್ಶನಕಂಡ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಬರೆಯಿತು. ಆದರೆ ಅದನ್ನು ಅನುಭವಿಸಲು ಸೌಂದರ್ಯ ಅವರು ಇರಲೇ ಇಲ್ಲ. ಇವರದ್ದು ಸಹಜ ಸಾವೋ, ಕೊಲೆಯೋ ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇವರದ್ದು ಕೊಲೆಯೇ ಆಗಿದ್ದರೆ, ಪಾತಕಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎನ್ನುವುದು ಸೌಂದರ್ಯ ಅಭಿಮಾನಿಗಳ ಮಾತು. 

ಕಾಲೇಜಲ್ಲಿ ಇರುವಾಗ್ಲೇ ನನಗೆ ಮಗು ಆಯ್ತೆಂದು ಸ್ನೇಹಿತ್ರು ಕಂಗ್ರಾಟ್ಸ್​ ಹೇಳಿದ್ರು: ಆ ದಿನಗಳ ನೆನೆದ ಸೃಜನ್​ ಲೋಕೇಶ್​

vuukle one pixel image
click me!