ದುಡ್ಡೇನು ನಿಮ್ಮಪ್ಪ ಕೊಡ್ತಾನಾ ಅಂತ ಕಾಮೆಂಟ್ ಹಾಕಿದ್ದ; ಅದನ್ನು ನೋಡೋಕೆ ಅವ್ರಪ್ಪ ಕೊಡ್ತಾನಾ?

By Shriram Bhat  |  First Published Jul 24, 2024, 11:49 PM IST

'ಏನೋ ಒಂದು ಕಾಂಟ್ರೋವರ್ಸಿ ಆದಾಗ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡ್ತಾ ಇರ್ತಾರೆ. ಏನೋ ಒಂದು ಒಳ್ಳೇ ಕೆಲಸ ಮಾಡಿದಾಗ, ಅವ್ರೇ ಈಗ ಹೊಗಳುವಂಥ ಸಿಚ್ಯೂವೇಶನ್ ಬಂದಿದೆ. ಬನ್ನಿ, ಯಾರ್ಯಾರು ನಮ್ ಬಗ್ಗೆ ನೆಗೆಟಿವ್ ಆಗಿ ಮಾತಾಡಿದೀರ, ಕೆಟ್ಟಕೆಟ್ಟದಾಗಿ ಕಾಮೆಂಟ್..


ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಚಾರಕಾರ್ಯದಲ್ಲಿ ನಿರತರಾಗಿರುವ ಚಂದನ್ ಶೆಟ್ಟಿ (Chandan Shetty), ಇತ್ತೀಚೆಗೆ ಸೆಲೆಬ್ರೆಟಿ ಶೋ ಮುಗಿಸಿ, ಮಾಧ್ಯಮದ ಮುಂದೆ ಮಾತನಾಡುತ್ತ ಹಲವಾರು ಸಂಗತಿಗಳನ್ನು ಹಂಚಿಕೊಂಡರು. ಆ ವೇಳೆ ಕ್ಯಾಮೆರಾ ಮುಂದೆ ಸಿನಿಮಾದ ಇಡೀ ತಂಡ ಹಾಜರಾಗಿತ್ತು. ನಟ-ಸಿಂಗರ್ ಚಂದನ್ ಶೆಟ್ಟಿ ಮಾತಿನಲ್ಲಿ ಕೆಲವು ಅನಿರೀಕ್ಷಿತ ಅನಿಸಿಕೆಗಳೂ ಬಂದವು ಎನ್ನಬಹುದೇನೋ!

'ಏನೋ ಒಂದು ಕಾಂಟ್ರೋವರ್ಸಿ ಆದಾಗ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡ್ತಾ ಇರ್ತಾರೆ. ಏನೋ ಒಂದು ಒಳ್ಳೇ ಕೆಲಸ ಮಾಡಿದಾಗ, ಅವ್ರೇ ಈಗ ಹೊಗಳುವಂಥ ಸಿಚ್ಯೂವೇಶನ್ ಬಂದಿದೆ. ಬನ್ನಿ, ಯಾರ್ಯಾರು ನಮ್ ಬಗ್ಗೆ ನೆಗೆಟಿವ್ ಆಗಿ ಮಾತಾಡಿದೀರ, ಕೆಟ್ಟಕೆಟ್ಟದಾಗಿ ಕಾಮೆಂಟ್ ಮಾಡಿದೀರ, ಒಂದ್ ಸಾರಿ ಬಂದು ಸಿನಿಮಾ ನೋಡಿ. ಇಷ್ಟ ಆಗಿಲ್ಲ ಅಂದ್ರೆ ಏನಿದ್ಯೋ ನಿಮ್ ಕೆಲಸ ಮುಂದುವರೆಸಿ.. ಅಂದ್ರೆ, ನೆಗೆಟಿವ್ ಕಾಮೆಂಟ್ ಮಾಡೋ ಕೆಲ್ಸ ಮುಂದುವರೆಸಿ ಅಂತಾನೇ ಕೇಳ್ಕೋತೀನಿ.. 

Tap to resize

Latest Videos

undefined

ಮಾಲಾಶ್ರೀ-ಶ್ರುತಿ ಮತ್ತೊಬ್ಬರೊಂದಿಗೆ ಡಾನ್ಸ್, ಆ ನಟಿಗೆ ಒಬ್ಬರು ರಿಯಲ್ ಅಮ್ಮ ಇನ್ನೊಬ್ಬರು ಅಮ್ಮನ ಫ್ರೆಂಡ್!

ನಿಮ್ಗೆಇಷ್ಟ ಆದ್ರೆ ದಯವಿಟ್ಟು ಕನ್ನಡ ಸಿನಿಮಾನ ಪ್ರಮೋಟ್ ಮಾಡಿ.. ನಾವುಗಳು ಕೂಡ ಒಂದು ಹೊಸ ಟೀಮ್.. ನಿಮ್ಮೆಲ್ಲರ ಸಪೋರ್ಟ್‌ ಬೇಕಾಗಿದೆ. ನಾನ್ ಕೇಳ್ಕೊಳ್ಳೋದು ಇಷ್ಟೇನೆ.. ನೀವೆಲ್ಲರೂ ನಮ್ ಜೊತೆ ನಿಂತ್ಕೊಳಿ.. ನಮ್ ಜೊತೆ ಅಂತಲ್ಲ, ಎಲ್ಲಾ ಹೊಸಬರ ಜತೆ ನಿಂತ್ಕೊಳ್ಳಿ, ಕನ್ನಡ ಸಿನಿಮಾಗೆ ಸಪೋರ್ಟ್ ಮಾಡಿ ಅಂತ ಹೇಳ್ತಾ ಇದೀನಿ ನಾನು.. 

ಇತ್ತೀಚೆಗೆ ಒಂದು ಇಂಟರ್‌ವ್ಯೂನಲ್ಲಿ ನಾನು ಥಿಯೇಟರ್‌ಗೆ ಜನ ಬರ್ತಾ ಇಲ್ಲ ಅಂತ ಹೇಳಿದ್ದೆ.. ಅದಕ್ಕೆ ಒಬ್ನು ಕಾಮೆಂಟ್ ಹಾಕಿದ್ದ- ದುಡ್ಡೇನು ನಿಮ್ ಅಪ್ಪ ಕೊಡ್ತಾನಾ ಅಂತ? ಅದೇ ಒಬ್ಬ ವ್ಯಕ್ತಿ ತಮಿಳು ಸಿನಿಮಾನೋ ತೆಲುಗು ಸಿನಿಮಾನೋ ಅಥವಾ ಹಿಂದಿ ಸಿನಿಮಾನೋ ನೋಡಿದಾಗ, ಬಹುಶಃ ಅವ್ರಪ್ಪ ಏನಾದ್ರೂ ಆ ಸಿನಿಮಾಗಳಿಗೆ ದುಡ್ಡು ಕೊಡ್ತಾನಾ ಅಂತ ಗೊತ್ತಾಗ್ತಾ ಇಲ್ಲ.. ದಯವಿಟ್ಟು ಈ ಮೈಂಡ್‌ಸೆಟ್‌ನಿಂದ ಸ್ವಲ್ಪ ಹೊರಗಡೆ ಬರೋಣ.. 

ಅಯ್ಯೋ ಬೇಬಿ ಬಿಟ್ಟು ಹೋದ್ಳು, ನಂಗೆ ಬೇಕೇ ಬೇಕು ಎಂದು ಅಳುತ್ತಾ ಹಠ ಹಿಡಿದ ನಟ ನರೇಶ್: ಮತ್ತೆ ಬರ್ತಾಳಾ...!?

ನಾವು ಕನ್ನಡದವರೇ ಕನ್ನಡವನ್ನು ಬೆಳೆಸಬೇಕಾಗಿದೆ, ಬೇರೆ ಯಾರೂ ಬರಲ್ಲ ನಮ್ ಸಪೋರ್ಟ್ಗೆ.. ದಮವಿಟ್ಟು ಇನಾನು ಕೈ ಮುಗಿದು ಕೇಳ್ಕೊತಾ ಇದೀನಿ.. ಸಿನಿಮಾ ಚೆನ್ನಾಗಿದೆ, ಮಸ್ಟ್ ವಾಚ್ ಮೂವಿ ಅಂತ ಬರ್ತಾ ಇದೆ.. ಎಲ್ಲಾ ಸ್ಟೂಡೆಂಟ್ಸ್, ಪೇರೆಂಟ್ಸ್ ಬಂದು ಈ ಸಿನಿಮಾ ನೋಡ್ಲೇಬೇಕು ಅಮತ ಹೇಳ್ತಾ ಇದಾರೆ.. ಇದ್ನ ನಾವು, ನಮ್ ತಂಡದವ್ರು ಹೇಳ್ತಾ ಇಲ್ಲ.. ಇದು ಜೆನ್ಯೂನ್ ಆಡಿಯನ್ಸ್, ಸಿನಿಮಾ ನೋಡಿದ್ವರು ಹೇಳ್ತಾ ಇರೋದು.. ದಯವಿಟ್ಟು ಬಂದು ಸಿನಿಮಾ ನೋಡಿ, ನಾವು ಯಾಕೆ ಈ ಮಾತ್ನ ಹೇಳ್ತಾ ಇದೀವಿ ಅಂತ.. 'ಎಂದಿದ್ದಾರೆ ಸಿಂಗರ್-ನಟ ಚಂದನ್ ಶೆಟ್ಟಿ.

click me!