ಕೊನೆಯುಸಿರೆಳೆದ ಡಾಲಿ ಧನಂಜಯ್ ಅಜ್ಜಿ ಮಲ್ಲಮ್ಮ, ಶತಾಯುಷಿ ಆಗಲಿ ಎಂಬ ಕನಸು ಈಡೇರಲಿಲ್ಲ!

By Shriram Bhat  |  First Published Jul 24, 2024, 1:01 PM IST

ಧನಂಜಯ ತಂದೆ ಅಡವಿಸ್ವಾಮಿ ಮಲ್ಲಮ್ಮ ಅವರ ಎರಡನೇ ಮಗನಾಗಿದ್ದರು. ಮಲ್ಲಮ್ಮ ಅವರಿಗೆ 5 ಮಕ್ಕಳಿದ್ದರು. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜೊತೆ ತೆರಳಿ ಮತದಾನ ಮಾಡುತ್ತಿದ್ದರು ಮಲ್ಲಮ್ಮ. ಇದು ಸಾಕಷ್ಟು ಸುದ್ದಿಯಾಗುತ್ತಿತ್ತು. 


ಕನ್ನಡದ ನಟ ಡಾಲಿ ಧನಂಜಯ (Dolly Dhananjay) ಅವರಿಗೆ ಅಜ್ಜಿ ವಿಯೋಗ. ಡಾಲಿ ಧನಂಜಯ್ ಅವರ ಮಲ್ಲಮ್ಮ (95) ನಿಧನರಾಗಿದ್ದಾರೆ. ಮೃತ ಮಲ್ಲಮ್ಮ ಅವರು ಲಿಂಗದೇವರಾಜೇಗೌಡ ಪತ್ನಿಯಾಗಿದ್ದರು. ಮಲ್ಲಮ್ಮ ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 

ಧನಂಜಯ ತಂದೆ ಅಡವಿಸ್ವಾಮಿ ಮಲ್ಲಮ್ಮ ಅವರ ಎರಡನೇ ಮಗನಾಗಿದ್ದರು. ಮಲ್ಲಮ್ಮ ಅವರಿಗೆ 5 ಮಕ್ಕಳಿದ್ದರು. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜೊತೆ ತೆರಳಿ ಮತದಾನ ಮಾಡುತ್ತಿದ್ದರು ಮಲ್ಲಮ್ಮ. ಇದು ಸಾಕಷ್ಟು ಸುದ್ದಿಯಾಗುತ್ತಿತ್ತು. ಕಾರಣ, ವಯಸ್ಸಾಗಿದ್ದರೂ, ಖಾಯಿಲೆ ಇದ್ದರೂ ಆಕೆ ಮತದಾನದ ಹಕ್ಕು ಮತ್ತು ಕರ್ತವ್ಯವನ್ನು ಮಾತ್ರ ಯಾವತ್ತೂ ಬಿಟ್ಟಿರಲಿಲ್ಲ, ಅಲಕ್ಷ್ಯ ಮಾಡಲೇ ಇಲ್ಲ. 

Tap to resize

Latest Videos

ನಟ ದರ್ಶನ್ ಕೇಸ್ ಬಗ್ಗೆ ಅನಿರೀಕ್ಷಿತ ಅನಿಸಿಕೆ ಶೇರ್ ಮಾಡಿದ ಚಂದನ್ ಶೆಟ್ಟಿ ; ಒಮ್ಮೆ ನೋಡ್ಬಿಡಿ..!

ನಟ ಡಾಲಿ ದನಂಜಯ್ ಅವರು ಕನ್ನಡದಲ್ಲಿ ಒಂದಾದ ಮೇಲೆ ಮತ್ತೊಂದರಂತೆ ಚಿತ್ರಗಳಲ್ಲಿ ಅವಕಾಶ ಪಡೆಯುತ್ತಿರುವದು ಗೊತ್ತೇ ಇದೆ. ಇತ್ತೀಚೆಗಷ್ಟೇ ಕೋಟಿ ಚಿತ್ರದ ಮೂಲಕ ನಟ ಧನಂಜಯ್ ತೆರೆಯ ಮೇಲೆ ಮೋಡಿ ಮಾಡಿದ್ದು ಗೊತ್ತೇ ಇದೆ. ಸದ್ಯ ನಟ ಡಾಲಿ ಕೈನಲ್ಲಿ ಹಲವಾರು ಚಿತ್ರಗಳಿದ್ದು, ಅದರಲ್ಲಿ ಕನ್ನಡವೂ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳೂ ಇವೆ. 

ನಟ ಡಾಲಿ ಧನಂಝಯ್ ಅವರು ಪೌರಾಣಿಕ ಹಿನ್ನೆಲೆಯುಳ್ಳ ಒಂದು ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಅದಿನ್ನೂ ಘೋಷಣೆ ಆಗಬೇಕಾಗಿದೆ. ಒಟ್ಟಿನಲ್ಲಿ, ನಟ ಡಾಲಿ ಧನಂಜಯ್ ಅವರು ಅಜ್ಜಿ ಶತಾಯುಷಿ ಆಗುವುದನ್ನು ನೋಡುವ ಭಾಗ್ಯ ಕಳೆದುಕೊಂಡಿದ್ದಾರೆ. ಡಾಲಿ ಧನಂಜಯ್ ಅವರ ಅಜ್ಜಿ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಅಭಿಮಾನಿಗಳು ಮೆರ್ಸಜ್ ಪೋಸ್ಟ್ ಮಾಡುತ್ತಿದ್ದಾರೆ. 

ಸೋಷಿಯಲ್ ಮೀಡಿಯಾ ಕಾಮೆಂಟ್ಸ್‌ ಬಗ್ಗೆ ಬಾಯ್ಬಿಟ್ಟ ಚಂದನ್ ಶೆಟ್ಟಿ ಹೇಳಿದ್ದೇನು, ಇದಾ ರಿಯಾಲಿಟಿ ?

click me!