1989ರಲ್ಲಿ ಮಾಲಾಶ್ರೀ-ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ನಂಜುಂಡಿ ಕಲ್ಯಾಣ' ಚಿತ್ರವು ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ದಾಖಲಿಸಿತ್ತು. ನಟಿಸಿದ ಮೊಟ್ಟಮೊದಲ ಚಿತ್ರವೇ ಸೂಪರ್ ಹಿಟ್ ಆಗುವ ಮೂಲಕ ನಟಿ ಮಾಲಾಶ್ರೀಅವರು ಕನ್ನಡದಲ್ಲಿ ಹೊಸ ಸೂಪರ್ ಸ್ಟಾರ್ ಆಗಿ ಉದಯಿಸಿದರು.
ಮೂವತ್ನಾಲ್ಕು-ಮೂವತ್ತೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದು ಸ್ಟಾರ್ ನಟಿಯರಾಗಿ ಮಿಂಚಿದ್ದ ಮಾಲಾಶ್ರೀ (Malashri) ಹಾಗು ಶ್ರುತಿ (Shruti) ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಫಂಕ್ಷನ್ ಒಂದರಲ್ಲಿ ಒಟ್ಟಿಗೇ ಸೇರಿದ್ದ ನಟಿಯರಾದ ಮಾಲಾಶ್ರೀ-ಶ್ರುತಿ ಹಾಗು ಮಾಲಾಶ್ರೀ ಮಗಳು ಆರಾಧನಾ 'ಪಸಂದ್ ಆಗವ್ಳೆ.. ಹಾಡಿಗೆ ಹೆಜ್ಜೆ ಹಾಕಿ ನಲಿದಿದ್ದಾರೆ. ಕನ್ನಡದ ಸ್ಟಾರ್ ನಟ ದರ್ಶನ್ ಹಾಗೂ ಮಾಲಾಶ್ರೀ ಮಗಳು ಆರಾಧನಾ ನಟಿಸಿರುವ 'ಕಾಟೇರ' ಚಿತ್ರ ಹಾಗು ಈ ಹಾಡು ಎರಡೂ ಸೂಪರ್ ಹಿಟ್ ಆಗಿತ್ತು.
1989ರಲ್ಲಿ ಮಾಲಾಶ್ರೀ-ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ನಂಜುಂಡಿ ಕಲ್ಯಾಣ' ಚಿತ್ರವು ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ದಾಖಲಿಸಿತ್ತು. ನಟಿಸಿದ ಮೊಟ್ಟಮೊದಲ ಚಿತ್ರವೇ ಸೂಪರ್ ಹಿಟ್ ಆಗುವ ಮೂಲಕ ನಟಿ ಮಾಲಾಶ್ರೀಅವರು ಕನ್ನಡದಲ್ಲಿ ಹೊಸ ಸೂಪರ್ ಸ್ಟಾರ್ ಆಗಿ ಉದಯಿಸಿದರು. ಅದನ್ನು ಒಂದು ದಶಕದ ಕಾಲ ಉಳಿಸಿಕೊಂಡರು ಕೂಡ. ಈಗ ಅದೇ ಮಾಲಾಶ್ರೀ ಮಗಳು ಆರಾಧನಾ ರಾಮ್ ಕಾಟೇರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.
ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?
ಇನ್ನು ಒಂದು ಕಾಲದ ಜನಪ್ರಿಯ ಸ್ಟಾರ್ ನಟಿ ಶ್ರುತಿ ಅವರು 'ಶ್ರುತಿ' ಚಿತ್ರದ ಮೂಲಕ 1990ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶ್ರುತಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಆ ಬಳಿಕ ನಟಿ ಶ್ರುತಿ ಕೂಡ ಹಿಂತಿರುಗಿ ನೋಡಲೇ ಇಲ್ಲ. ಒಂದಾದಮೇಲೆ ಮತ್ತೊಂದರಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶ್ರುತಿ. 'ಬಿಗ್ ಬಾಸ್ ಕನ್ನಡ ಸೀಸನ್ -3'ರ ವಿನ್ನರ್ ಕೂಡ ಆಗಿರುವ ನಟಿ ಶ್ರತಿ 'ಕಾಟೇರ' ಸಿನಿಮಾದಲ್ಲಿ ಆರಾಧನಾ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ.
ಹೀಗಾಗಿ ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ಪ್ರತಿಸ್ಪರ್ಧಿಗಳಂತಿದ್ದ ಮಾಲಾಶ್ರೀ ಹಾಗೂ ಶ್ರುತಿ ಈಗ ಸ್ನೇಹಿತೆಯರಾಗಿದ್ದಾರೆ. ಮಾಲಾಶ್ರೀ ಮಗಳು ಆರಾಧನಾಗೆ ಅಮ್ಮನಾಗಿ ಕಾಟೇರ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ, ಮಾಲಾಶ್ರೀ ಹಾಗು ಶ್ರುತಿಯ ನಡುವಿನ ಸ್ನೇಹ ಬಹಳಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೂಡ ಮಾಲಾಶ್ರೀ-ಶ್ರುತಿ ಕೈಕೈ ಹಿಡಿದುಕೊಂಡು, ಏನನ್ನೋ ಮಾತನಾಡಿಕೊಳ್ಳುತ್ತ ಹೋಗುತ್ತಿದ್ದಾರೆ.
ಫಂಕ್ಷನ್‌ಗೆ ಹೋಗುತ್ತಿರುವವರು, ಒಂದು ಸ್ಥಳದಲ್ಲಿ ನಿಂತು, ಆರಾಧನಾ, ಶ್ರುತಿ ಹಾಗೂ ಮಾಲಾಶ್ರೀ ಕಾಟೇರ ಚಿತ್ರದ 'ಪಸಂದ್ ಆಗವ್ಳೆ, ಶಾನೆ ಪಸಂದ್ ಆಗವ್ಳೆ..' ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಅದನ್ನು ನೋಡಿ ಅವರ ಹಲವಾರು ಅಭಿಮಾನಿಗಳು ಖುಷಿಯಾಗಿದ್ದಾರೆ, ಬಗೆಬಗೆಯಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಒಬ್ಬರು 'ಮಾಲಾಶ್ರೀ ಮಗಳು ಆರಾಧನಾ ಭಾಗ್ಯ ನೋಡಿ, ಒಬ್ಬರು ರಿಯಲ್ ಅಮ್ಮ, ಇನ್ನೊಬ್ಬರು ರೀಲ್ ಅಮ್ಮ ಜೊತೆಯಲ್ಲೇ ಇದ್ದು ರಕ್ಷಿಸುತ್ತಿದ್ದಾರೆ' ಎಂದಿದ್ದಾರೆ.
ಕೊನೆಯುಸಿರೆಳೆದ ಡಾಲಿ ಧನಂಜಯ್ ಅಜ್ಜಿ ಮಲ್ಲಮ್ಮ, ಶತಾಯುಷಿ ಆಗಲಿ ಎಂಬ ಕನಸು ಈಡೇರಲಿಲ್ಲ!
ಒಟ್ಟಿನಲ್ಲಿ, ಒಂದು ಕಾಲದ ಸೂಪರ್ ಸ್ಟಾರ್‌ಗಳು ಒಟ್ಟಿಗೇ ಕಾಣಿಸಿಕೊಂಡಿದ್ದೂ ಅಲ್ಲದೇ ಹೊಸ ಹಾಡಿಗೆ ಖುಷಿಯಿಂದ ಕುಣಿದು ಸಂತಸಗೊಂಡಿದ್ದಾರೆ, ತಮ್ಮ ಫ್ಯಾನ್ಸ್‌ಗಳನ್ನು ರಂಜಿಸಿದ್ದಾರೆ. ಈ ಮೂಲಕ, ಒಂದು ಕಾಲದಲ್ಲಿ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಆಗಿದ್ದರೂ ಪ್ರವೃತ್ತಿಯಲ್ಲಿ ಸಹವರ್ತಿಗಳೇ ಎಂದು ಈ ಮೂಲಕ ನಿರೂಪಿಸಿದ್ದಾರೆ ಎನ್ನಬಹುದು ಮಾಲಾಶ್ರೀ ಹಾಗೂ ಶ್ರುತಿ!