ಅಂದು ಸೌಂದರ್ಯ, ಇಂದು ದ್ವಾರಕೀಶ್: ಸಾವಿನಲ್ಲಿದೆ ಸಾಮ್ಯತೆ. ಮತ್ತೆ ಸದ್ದು ಮಾಡ್ತಿದೆ ಆಪ್ತಮಿತ್ರ!
ಸೌಂದರ್ಯ ಎಂದಾಕ್ಷಣ ನೆನಪಾಗುವುದು ಆಪ್ತಮಿತ್ರ ಚಿತ್ರ. ವಿಭಜಿತ ವ್ಯಕ್ತಿತ್ವ (split personality) ನಟನೆಯಿಂದ ಮೋಡಿ ಮಾಡಿದ ಸೌಂದರ್ಯ 27ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಕಲಾವಿದೆ. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಈಕೆಯ ಮರಣದ ನಂತರ ಬಹಿರಂಗಗೊಂಡಿತ್ತು. ಅಂಥ ವ್ಯಕ್ತಿತ್ವ ಈಕೆಯದ್ದು. ನಟಿ ಸೌಂದರ್ಯ ಅವರದ್ದು ದುರಂತ ಸಾವು. 2004 ಏಪ್ರಿಲ್ 17 ಚಿತ್ರರಂಗದ ಪಾಲಿಗೆ ಕರಾಳ ದಿನ. ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್ ನಟಿ ಸೌಂದರ್ಯ ದುರಂತ ಸಾವು ಕಂಡ ದಿನವಿದು. ತೆಲಂಗಾಣದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ (Air Crash) ಸಂಭವಿಸಿ ಮೃತಪಟ್ಟರು. ಆ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದರು ಈಕೆ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋದರು. ಹೆಸರಿಗೆ ತಕ್ಕಂತೆ ಸೌಂದರ್ಯದ ಘನಿಯಾಗಿದ್ದ ನಟಿ, ಅದ್ಭುತ ನಟನೆಗೆ ಹೆಸರುವಾಸಿಯಾದವರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ.
ಇದೀಗ ನಟ ದ್ವಾರಕೀಟ್ ಅವರ ನಿಧನದ ಬೆನ್ನಲ್ಲೇ ನಟಿ ಸೌಂದರ್ಯ ಅವರ ಸಾವು ಮತ್ತೆ ಮುನ್ನೆಲೆಗೆ ಬಂದಿದೆ. ಅಂದ ಮಾತ್ರಕ್ಕೆ ಇವರ ಸಾವಿನ ರೀತಿಯಲ್ಲೇನೂ ಸಾಮ್ಯತೆ ಇಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸೌಂದರ್ಯ ವಿಧಿವಶರಾದರೆ, 81ರ ಹರೆಯದಲ್ಲಿ ದ್ವಾರಕೀಶ್ ನಿಧನರಾದರು. ಸೌಂದರ್ಯ ಅವರದ್ದು ಅಪಘಾತದಲ್ಲಿನ ನಿಧನ, ದ್ವಾರಕೀಶ್ ಅವರದ್ದು ಹೃದಯಾಘಾತ. ಇದರ ಹೊರತಾಗಿಯೂ ಇವರಿಬ್ಬರ ಸಾವಿಗೆ ಇರುವ ಸಾಮ್ಯತೆ ಒಂದೇ ಅದು ಏಪ್ರಿಲ್ 16 ಮತ್ತು 17. ಏಪ್ರಿಲ್ 17ರಂದು ಸೌಂದರ್ಯ ನಿಧನರಾದರೆ, ಅದಕ್ಕಿಂತ ಒಂದು ದಿನ ಮುಂಚೆ ದ್ವಾರಕೀಶ್ ನಿಧನರಾದರು, ಅವರ ಅಂತ್ಯಕ್ರಿಯೆ 17ರಂದು ನಡೆಯಿತು. ಈ ಬಗ್ಗೆ ಈಗ ಸಾಕಷ್ಟು ಚರ್ಚೆಯಾಗುತ್ತಿರುವುದಕ್ಕೆ ಕಾರಣವೂ ಇದೆ. ಅದಕ್ಕೆ ಕಾರಣ, ಆಪ್ತಮಿತ್ರ ಚಿತ್ರ.
undefined
ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸು... ಯಾರೂ ನಗೋ ಹಾಗೇ ಇಲ್ಲ... ಏನಿದು ಹೊಸ ಷೋ?
ಹೌದು. ಸೋಲು ಮತ್ತು ಸಾಲದ ಸುಳಿಗೆ ಸಿಲುಕಿದ್ದ ದ್ವಾರಕೀಶ್‌ಗೆ ಪುನರ್ಜನ್ಮ ನೀಡಿದ್ದು ಆಪ್ತಮಿತ್ರ ಚಿತ್ರ. ಈ ಚಿತ್ರದಿಂದ ದ್ವಾರಕೀಶ್ ಅವರ ಸಾಲಗಳಿಂದ ಮುಕ್ತಿಯೂ ಸಿಕ್ಕಿತು. ಮಾತ್ರವಲ್ಲದೇ ವಿಷ್ಣುವರ್ಧನ್ ಜತೆಗಿನ ಹಳೇ ಸ್ನೇಹವೂ ಮುಂದುವರೆಯಿತು, ಹೀಗೆ ಆಪ್ತಮಿತ್ರ ಚಿತ್ರದ ಮೂಲಕವೇ ಮರುಜೀವ ಪಡೆದಿದ್ದರು ದ್ವಾರಕೀಶ್. ಇದೀಗ ಇವರಿಬ್ಬರ ಸಾವಿನ ದಿನದಲ್ಲಿ ಒಂದೇ ರೀತಿ ಇರುವುದರಿಂದ ಇದರ ಬಗ್ಗೆ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ನಟಿ ಸೌಂದರ್ಯ ಸತ್ತಾಗಲೂ ಆಪ್ತಮಿತ್ರ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದ ಶೂಟಿಂಗ್ ಮುಗಿಸಿದ ಬಳಿಕ ಸೌಂದರ್ಯ ವಿಮಾನ ದುರಂತದಲ್ಲಿ ಮೃತಪಟ್ಟರು. ಈ ಚಿತ್ರವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು, ಸೌಂದರ್ಯ ಅನುಪಸ್ಥಿತಿಯಲ್ಲಿಯೇ 2004ರ ಆಗಸ್ಟ್ 27ರಂದು ಆಪ್ತಮಿತ್ರ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಪಟ್ಟವನ್ನೂ ಪಡೆಯಿತು. ಸೌಂದರ್ಯ ಇಲ್ಲದ ಬಗ್ಗೆ ಆಗ ದ್ವಾರಕೀಶ್ ತುಂಬಾ ನೊಂದುಕೊಂಡಿದ್ದರು. ಅದಾಗಿ ಬರೋಬ್ಬರಿ 20 ವರ್ಷದ ಬಳಿಕ ದ್ವಾರಕೀಶ್ ಅವರ ಮೃತಪಟ್ಟಿದ್ದು ಕಾಕತಾಳೀಯವೆಂದುಕೊಂಡರೂ, ಇವರಿಬ್ಬರ ಸಾವಿನ ಬಗ್ಗೆ ಸಾಮ್ಯತೆ ಇದೆ ಎನ್ನುತ್ತಿದ್ದಾರೆ ಹಲವು ಸಿನಿ ಪ್ರಿಯರು.
ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...