ಪ್ರೇಕ್ಷಕರಿಗೆ ಮೋಸ ಮಾಡ್ಬಿಟ್ಟೆ, 'ಆಫ್ರಿಕಾದಲ್ಲಿ ಶೀಲಾ'ನ ಬಂಡೀಪುರಕ್ಕೂ ತಂದ್ಬಿಟ್ಟೆ ಅಂದಿದ್ಯಾಕೆ ದ್ವಾರಕೀಶ್!

By Shriram Bhat  |  First Published Apr 20, 2024, 6:13 PM IST

ದಿವಂಗತ ನಟ ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಕೇವಲ 23ನೇ ವಯಸ್ಸಿಗೇ ಸ್ಯಾಂಡಲ್‌ವುಡ್‌ ನಿರ್ಮಾಪಕರಾಗಿ ಪ್ರವೇಶಿಸಿದ ದ್ವಾರಕೀಶ್ ಅವರು ಬರೋಬ್ಬರಿ 50 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.


ದಿವಂಗತ ನಟ ದ್ವಾರಕೀಶ್ (Dwarakish) ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಕೇವಲ 23ನೇ ವಯಸ್ಸಿಗೇ ಸ್ಯಾಂಡಲ್‌ವುಡ್‌ ನಿರ್ಮಾಪಕರಾಗಿ ಪ್ರವೇಶಿಸಿದ ದ್ವಾರಕೀಶ್ ಅವರು ಬರೋಬ್ಬರಿ 50 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 300 ಸಿನಿಮಾಗಳಲ್ಲಿ ನಟನೆ, 20 ಸಿನಿಮಾ ನಿರ್ದೇಶನ ಮಾಡಿರುವ ದ್ವಾರಕೀಶ್, ತಮ್ಮ 82ನೇ ವಯಸ್ಸಿನಲ್ಲಿ ಕಳೆದ ವಾರ, ಅಂದರೆ 16 ಏಪ್ರಿಲ್ 2024ನಲ್ಲಿ (16 April 2024) ನಿಧನರಾದರು. ಆದರೆ ಅವರ ವೃತ್ತಿಜೀವನದಲ್ಲಿ ನಡೆದ ಕೆಲವು ಘಟನೆಗಳು ಈಗ ಹೊರಜಗತ್ತಿಗೆ ಅನಾವರಣ ಆಗುತ್ತಿವೆ. 

ನಟ, ನಿರ್ಮಾಪಕ ದ್ವಾರಕೀಶ್ ಅವರು 'ಆಫ್ರಿಕಾದಲ್ಲಿ ಶೀಲಾ (Africadalli Sheela)'ಚಿತ್ರವನ್ನು ನಿರ್ಮಿಸಿ 27 ಮೇ 1986ರಲ್ಲಿ ಬಿಡುಗಡೆ ಮಾಡಿದರು. ಆ ಚಿತ್ರವನ್ನು 45 ದಿನಗಳಲ್ಲಿ ಸಂಪೂರ್ಣವಾಗಿ ಆಫ್ರಿಕಾ ಮತ್ತು ಕೀನ್ಯಾದಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಅಂದುಕೊಂಡಂತೆ ನಡೆಯಲೇ ಇಲ್ಲ. ಅಲ್ಲಿ ಬಿಟ್ಟುಹೋದ ಕೆಲವು ದೃಶ್ಯಗಳನ್ನು ಕರ್ನಾಟಕದ ಬಂಡೀಪುರ ಅರಣ್ಯ ಹಾಗೂ ತಿರುಪತಿಯ ಕೆಲವು ಬೆಟ್ಟಗಳಲ್ಲಿ ಶೂಟ್ ಮಾಡಿ ಸಿನಿಮಾ ಶೂಟಿಂಗ್ ಮುಗಿಸಲಾಗಿತ್ತು.

Tap to resize

Latest Videos

'ಉತ್ತರಕಾಂಡ' ಸೇರಿಕೊಂಡ ಚೈತ್ರ ಆಚಾರ್, ದಿಗಂತ್ & ಯೋಗರಾಜ್ ಭಟ್; ರಮ್ಯಾ ಜಾಗಕ್ಕೆ ಈ ಲಚ್ಚಿ?

ಈ ಬಗ್ಗೆ ಸ್ವತಃ ನಿರ್ಮಾಪಕರಾದ ದ್ವಾರಕೀಶ್ ಅವರಿಗೆ ತುಂಬಾ ನೋವಿತ್ತು. ಈ ಬಗ್ಗೆ ಅವರು ತಮ್ಮ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ದ್ವಾರಕೀಶ್ 'ನಾನು ನನ್ನನ್ನು ನಂಬಿ ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಮೋಸ ಮಾಡಿಬಿಟ್ಟೆ. 45 ದಿನಗಳಲ್ಲಿ ಆಫ್ರಿಕಾ (Africa) ಮತ್ತು ಕೀನ್ಯಾ (Keenya) ದೇಶಗಳಲ್ಲಿ ಮುಗಿಯಬೇಕಿದ್ದ ನನ್ನ 'ಆಫ್ರಿಕಾದಲ್ಲಿ ಶೀಲಾ' ಚಿತ್ರದ ಶೂಟಿಂಗ್ ಹಲವು ಕಾರಣಗಳಿಂದ ತಡವಾಗಿ ಮುಗಿಯಲೇ ಇಲ್ಲ.

ಪ್ರೀತಿಯ ಪತ್ನಿ ಫೋಟೋ ಶೇರ್‌ ಮಾಡಿ ಸವಿನೆನಪು ಹಂಚಿಕೊಂಡ ವಿಜಯರಾಘವೇಂದ್ರ; ನೆಟ್ಟಿಗರಿಂದ ಕಂಬನಿ

ಅಲ್ಲಿ ಮಾಡಲಾಗದ ಕೆಲವು ಸೀನ್‌ಗಳನ್ನು ಇಲ್ಲಿನ ಬಂಡೀಪುರ (Bandipura) ಹಾಗು ತಿರುಪತಿಯಲ್ಲಿ (Tirupati) ಶೂಟ್ ಮಾಡಿ ಚಿತ್ರಕ್ಕೆ ಸೇರಿಸಿದೆ. ನಾನು ಮಾಡಿದ್ದ ಆ ಮೋಸಕ್ಕೋ ಏನೋ ಎನ್ನುವಂತೆ ಆ ಚಿತ್ರ ನಾನು ಅಂದುಕೊಂಡಷ್ಟು ಯಶಸ್ಸು ದಾಖಲಿಸಲೇ ಇಲ್ಲ' ಎಂದಿದ್ದರು. ಆ ಬಗ್ಗೆ ತಮ್ಮ ಅತೀವ ಬೇಸರವನ್ನು ಹಲವಾರು ಬಾರಿ ಹೊರಹಾಕಿದ್ದರು ದ್ವಾರಕೀಶ್. 

ಕಲ್ಟ್ ಬಿಟ್ಟು 'ಪೃಥ್ವಿ ಅಂಬಾರ್' ಜತೆ ಸೇರಿ ಫ್ಯಾಮಿಲಿ ಕಥೆ ಹೇಳಲು ಸಜ್ಜಾದ ಚಂದ್ರಶೇಖರ್ ಬಂಡಿಯಪ್ಪ

ಸಿನಿಮಾ ಉದ್ಯಮದಲ್ಲಿ ಹಲವರು ಶೂಟಿಂಗ್‌ನಲ್ಲಿ ಚೀಟ್ ಮಾಡುವುದೇ ಸಾಧನೆ ಎಂದುಕೊಂಡವರೂ ಇದ್ದಾರೆ. ಆದರೆ ಅವರುಗಳ ಮಧ್ಯೆ ನಟ-ನಿರ್ಮಾಪಕ ದ್ವಾರಕೀಶ್ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಮಾತನಾಡಿದ್ದರು. ಅದನ್ನು ಅವರ ದೊಡ್ಡ ಗುಣ ಎನ್ನಬಹುದೇನೋ! ಅವರು ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ನೋಡಿದ್ದಾರೆ.

ಈಶ್ವರಿ 'ಶಾಂತಿ ಕ್ರಾಂತಿ' ಗಾಸಿಪ್‌ಗೆ ಇತಿಶ್ರೀ ಹಾಡಿದ ರವಿಚಂದ್ರನ್; ವೀರಾಸ್ವಾಮಿ ಹಾಗೆ ಹೇಳ್ಬಿಟಿದ್ರಾ?

'ಆಪ್ತಮಿತ್ರ'ದಂತ ಬಿಗ್ ಹಿಟ್ ನೋಡಿದ್ದಾರೆ, 'ನೀ ತಂದ ಕಾಣಿಕೆ'ಯಂತಹ ಅಟ್ಟರ್ ಪ್ಲಾಫ್‌ಗಳನ್ನು ಕಂಡಿದ್ದಾರೆ. ಆದರೆ, ನಿರ್ಮಾಪಕರಾಗಿ ತಮ್ಮ ಜರ್ನಿಯನ್ನು ಬಿಡದೇ ತಮ್ಮ ಕೈಲಾದಷ್ಟು ದಿನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ದ್ವಾರಕೀಶ್, ಚರಣರಾಜ್ ಹಾಗೂ ಸಹೀಲಾ ಚಡ್ಡಾ ಮುಂತಾದವರು ನಟಿಸಿದ್ದರು. 

click me!