ಕೃಷ್ಣಂ ಪ್ರಣಯ ಸಖಿಯ ದ್ವಾಪರ ಹಾಡಿಗೆ ಇದಾಗಲೇ ಹಲವಾರು ಚಿತ್ರತಾರೆಯರು ರೀಲ್ಸ್ ಮಾಡಿದ್ದಾರೆ. ಇದೀಗ ನಟ ಸಿಹಿ ಕಹಿ ಚಂದ್ರು ಅವರು ಮಗಳು ಹಿತಾ ಚಂದ್ರಶೇಖರ್ ಜೊತೆ ಸ್ಟೆಪ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕಾ ನಾಯರ್ ಅಭಿನಯದ ಶ್ರೀನಿವಾಸ್ ರಾಜು ನಿರ್ದೇಶನದ ಕನ್ನಡ ರೋಮ್ಯಾಂಟಿಕ್ ಚಿತ್ರದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಸಕತ್ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಈ ಚಿತ್ರದ ದ್ವಾಪರ ಹಾಡಿನ ಜೇನ ದನಿಯೋಳೆ, ಮೀನ ಕಣ್ಣೋಳೆ ಎನ್ನುವ ಚರಣ ಸೋಷಿಯಲ್ ಮೀಡಿಯಾದಲ್ಲಿ ಇದಾಗಲೇ ಹಂಗಾಮ ಸೃಷ್ಟಿಸಿದೆ. ಈ ಹಾಡಿಗೆ ವಿವಿಧ ಕ್ಷೇತ್ರಗಳ ಸೆಲೆಬ್ರೆಟಿಗಳಿಂದ ಹಿಡಿದು ಬಹುತೇಕ ಮಂದಿ ರೀಲ್ಸ್ ಮಾಡಿದ್ದಾರೆ. ಇದರ ಲಿರಿಕ್ಸ್ ಸೇರಿದಂತೆ ಹಿನ್ನೆಲೆ ಗಾಯನ, ಗಾಯಕನ ದನಿ ಎಲ್ಲವೂ ಮೋಡಿ ಮಾಡುತ್ತಿದೆ. ಇಷ್ಟು ಸುಂದರವಾಗಿ ಹಾಡಿದ ಗಾಯಕ ಕನ್ನಡವೇ ಬರದ ಪಂಜಾಬ್ ಮೂಲದ ಜಸ್ಕರಣ್ ಸಿಂಗ್. ಆದರೆ ಈ ಹಾಡು ಎಲ್ಲರನ್ನೂ ಮೋಡಿ ಮಾಡಿದೆ. ಈ ಹಾಡಿನ ಪ್ರಮೋಷನ್ ಸಿಕ್ಕಾಪಟ್ಟೆ ಮಾಡಿರುವ ಕಾರಣದಿಂದಾಗಿ ಎಲ್ಲರ ಬಾಯಲ್ಲೂ ಹಾಡು ನಲಿದಾಡುತ್ತಿದೆ. ಈ ಸಿನಿಮಾದ ಪ್ರಚಾರಕ್ಕೆ ಯಾವುದೇ ಟೀಸರ್, ಟ್ರೇಲರ್ ಬಿಡುಗಡೆ ಮಾಡಿಲ್ಲ ಎನ್ನುವುದು ವಿಶೇಷ. ದ್ವಾಪರ ದಾಟುತ ಸೇರಿದಂತೆ ಸಿನಿಮಾದ ಹಾಡುಗಳೇ ಪ್ರೇಕ್ಷಕರಿಗೆ ಆಹ್ವಾನ ಪತ್ರಿಕೆಯ ಹಾಗಿದೆ. ಅಷ್ಟು ಫೇಮಸ್ ಆಗಿದೆ ಈ ಹಾಡು.
ಇದೀಗ ಇದೇ ಹಾಡಿಗೆ ನಟ ಸಿಹಿಕಹಿ ಚಂದ್ರು ಅವರು ತಮ್ಮ ಪುತ್ರಿ, ನಟಿ ಹಿತಾ ಚಂದ್ರಶೇಖರ್ ಜೊತೆ ರೀಲ್ಸ್ ಮಾಡಿದ್ದಾರೆ. ಸಿಹಿ ಕಹಿ ಚಂದ್ರು ಅವರ ಬಗ್ಗೆ ಬಹುಶಃ ತಿಳಿಯದ ಕನ್ನಡಿಗರೇ ಇಲ್ಲ. ಇವರು, ನಟ, ನಿದೇರ್ಶಕ ಮತ್ತು ನಿರ್ಮಾಪಕ ಕೂಡ. ಸದ್ಯ ಇವರು ಗೃಹಿಣಿಯರ ಪ್ರೀತಿಯ ಶೆಫ್ ಕೂಡ. ಹಲವು ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ನಟನೆಯಲ್ಲಿ ಹೇಗೆ ನಿಪುಣರೋ ಹಾಗೇ ಅಡುಗೆ ಮಾಡುವುದರಲ್ಲಿ ನಿಪುಣರು. ಇದೇ ಕಾರಣಕ್ಕೆ, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸೋ ಇವರು, ಆಧುನಿಕ ನಳ ಮಹಾರಾಜ ಎಂದೇ ಹೇಳಲಾಗುತ್ತದೆ. ನಿರೂಪಣೆಯಲ್ಲೂ ಇವರದ್ದು ಎತ್ತಿದ ಕೈ. 63 ವರ್ಷದ ಚಂದ್ರು ಅವರಿಗೆ ಸಿಹಿಕಹಿ ಎಂಬ ಬಿರುದು ಕೊಟ್ಟಿದ್ದು, ಒಂದು ಸೀರಿಯಲ್. 1986 ರಿಂದ 87ರವರೆಗೆ ಪ್ರಸಾರ ಆಗಿದ್ದ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ಇವರು ನಟಿಸಿದ್ದರು. ಅಲ್ಲಿಂದ ಅವರ ಹೆಸರಿನ ಹಿಂದೆ ಸಿಹಿಕಹಿ ಸೇರಿತು. 1990ರಲ್ಲಿ ಗಣೇಶನ ಮದುವೆ ಸಿನಿಮಾ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದಾರೆ.
ಜೇನ ದನಿಯೋಳೆ, ಮೀನ ಕಣ್ಣೋಳೆ... 'ದ್ವಾಪರ' ಹಾಡಿನ ಮ್ಯಾಜಿಕ್ ಮಾಡಿದ್ದು ಕನ್ನಡವೇ ಬಾರದ ಈ ಗಾಯಕ!
ಇನ್ನು ಹಿತಾ ಚಂದ್ರಶೇಖರ್ ಅವರು ನಟಿಯಾಗಿ ಕೆಲವು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮಾಡಲಿಂಗ್‌ನಿಂದ ಜರ್ನಿ ಆರಂಭಿಸಿದ ಹಿತಾ ಜಾಹೀರಾತು, ವೆಬ್ಸೀರಿಸ್ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಈಚೆಗೆ ತುಂಬಾ ಸದ್ದು ಮಾಡಿದ್ದು, ಮಕ್ಕಳ ವಿಚಾರದಲ್ಲಿ. ನಟ ಕಿರಣ್ ಶ್ರೀನಿವಾಸ್ ಜೊತೆ ಮದುವೆಯಾಗಿ ನಾಲ್ಕು ವರ್ಷವಾಗಿರುವ ಬೆನ್ನಲ್ಲೇ ಮಕ್ಕಳ ಕುರಿತು ಮಾತನಾಡಿದ್ದ ನಟಿ, 'ನಾನು ಮಕ್ಕಳನ್ನು ಹೊಂದಲು ಬಯಸುವುದಿಲ್ಲ. ಪೇರೆಂಟಿಂಗ್‌ನ ಎಂಜಾಯ್ ಮಾಡುವುದಕ್ಕೆ ನಮ್ಮದೇ ಮಗು ಆಗಿರಬೇಕು ಅಂತೇನೂ ಇಲ್ಲ...ಅದರಲ್ಲೂ ಮಗುನೇ ಆಗಬೇಕು ಅಂತ ಇಲ್ಲವಲ್ಲ. . ನಾಯಿ ಸಾಕಿ ಕೂಡ ನಾವು ಆ ಪ್ರೀತಿ ಕೊಡಬಹುದು' ಎನ್ನುವ ಮೂಲಕ ಚರ್ಚೆ ಹುಟ್ಟುಹಾಕಿದ್ದರು. ವಯಸ್ಸಾದ ಮೇಲೆ ನೋಡಿಕೊಳ್ಳಲು ಯಾರಾದರೂ ಬೇಕು ಅಂತಾರೆ. ಆದರೆ ನಿಜಕ್ಕೂ ವಯಸ್ಸಾದವರನ್ನು ಮಕ್ಕಳು ನೋಡಿಕೊಳ್ತಾ ಇದ್ದಾರಾ ಎಂದು ಪ್ರಶ್ನೆ ಮಾಡಿದ್ದರು. ಈಗ ಸೊಸೈಟಿಯಲ್ಲಿ ಏನಾಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಮಕ್ಕಳು ಯಾವುದೋ ದೇಶದಲ್ಲಿ ಇರ್ತಾರೆ, ಅಪ್ಪ ಅಮ್ಮ ಮನೆಯಲ್ಲಿ ಒಬ್ಬರೆ ಇರುತ್ತಾರೆ ಅಥವಾ ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾರೆ. ಇವೆಲ್ಲಾ ಸುಮ್ಮನೇ ಆಡುವ ಮಾತುಗಳು ಎನ್ನುವ ಮೂಲಕ ತಮಗೆ ಮಕ್ಕಳು ಮಾಡಿಕೊಳ್ಳುವ ಇಷ್ಟವಿಲ್ಲ ಎಂದಿದ್ದರು.
ಇನ್ನು ಜೇನ ದನಿಯೋಳೆ, ಮೀನ ಕಣ್ಣೋಳೆ ಹಾಡಿದ ಜಸ್ಕರಣ್ ಸಿಂಗ್ ಕುರಿತು ಹೇಳುವುದಾದರೆ, ಇವರು ಇದಾಗಲೇ ಸರಿಗಮಪ ರಿಯಾಲಿಟಿ ಷೋನಲ್ಲಿ ಮೋಡಿ ಮಾಡಿದವರು. 'ನೀ ಸಿಗೋವರೆಗೂ..', 'ಸರಿಯಾಗಿ ನೆನಪಿದೆ..' ಮುಂತಾದ ಹಾಡುಗಳನ್ನು 'ಸರಿಗಮಪ' ವೇದಿಕೆ ಮೇಲೆ ಅವರು ಹಾಡಿದ್ದರು. ಇವರ ಗಾಯನಕ್ಕೆ ಈ ಷೋನಲ್ಲಿ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಹಂಸಲೇಖ ಅವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಷೋನಿಂದಲೇ ಪ್ರೇರೇಪಿತರಾಗಿದ್ದ ಅರ್ಜುನ್ ಜನ್ಯ ಈಗ ಇವರಿಗೆ ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರು ಈ ಹಾಡನ್ನು ಬರೆದಿದ್ದಾರೆ.
ಸದಾ ಕಿತ್ತಾಡುತ್ತಿರೋ ಶ್ರೀರಸ್ತು ಶುಭಮಸ್ತು ವಾರೆಗಿತ್ತಿಯರಿಂದ ಜೇನ ದನಿಯೋಳೆ...ಗೆ ಭರ್ಜರಿ ಸ್ಟೆಪ್