
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಕ ಗರ್ಲ್ಸ್ ವರ್ಸಸ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಶುಭಾ ಪೂಂಜಾ ಲೇಡಿಸ್ ಗ್ಯಾಂಗ್ ಲೀಡರ್. ಎದುರಿಗೆ ಇರುವ ಹುಡುಗರಿಗೆ ಟಕ್ಕರ್ ಕೊಡುತ್ತಾ ತಮ್ಮ ಟೀಂನ ಹವಲು ಸಲ ಗೆಲ್ಲಿಸಿದ್ದಾರೆ. ಶುಭಾ ಶೂಟಿಂಗ್ ಸೆಟ್ ಮತ್ತು ಎಪಿಸೋಡ್‌ನಲ್ಲಿ ಇದ್ದರೆ ಮಾತ್ರ ನೋಡಲು ಮಜಾ ಖುಷಿ ಎಂದು ವೀಕ್ಷಕರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಈ ವಾರ ಶುಭಾ ಶೂಟಿಂಗ್‌ಗೆ ಬರಲ್ವಾ? ಸೆಟ್‌ಗೆ ಭೇಟಿ ನೀಡಲ್ವಾ? ಶುಭಾ ನೋವಿನಿಂದ ಹೊರ ಬಂದಿದ್ದಾರಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರ ಇಲ್ಲಿದೆ.
ಹೌದು! ಇತ್ತೀಚಿಗೆ ನಟಿ ಶುಭಾ ಪೂಂಜಾ ತಾಯಿ ಅಗಲಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಾಯಿ ಅಗಲಿ ನಾಲ್ಕು ದಿನ ಕಳೆದೆ ಅಷ್ಟೇ ಶುಭಾ ಚಿತ್ರೀಕರಣಕ್ಕೆ ಆಗಮಿಸಿದ್ದಾರೆ. ಇದನ್ನು ನೋಡಿ ಸೆಟ್‌ನಲ್ಲಿದ್ದ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ ಹಾಗೂ ವೀಕ್ಷಕರಿಗೂ ಬಿಗ್ ಶಾಕ್. 'ತಾಯಿ ಅಗಲಿ ನಾಲ್ಕು ದಿನ ಆಗಿದೆ ಅಷ್ಟೇ' ಎಂದು ನಿರೂಪಕಿ ಅನುಪಮಾ ಗೌಡ ಹೇಳುತ್ತಾರೆ. 'ಅಮ್ಮ ಸಾಯುವ ಹಿಂದಿನ ದಿನ ನಾನು ಅವರ ಕೈ ಬಿಟ್ಟಿಲ್ಲ. ಬಿಗಿಯಾಗಿ ಹಿಡಿದುಕೊಂಡೇ ಇದ್ದೆ. ರಾತ್ರಿ ಇಡೀ ಉಸಿರಾಡಲು ಕಷ್ಟ ಪಡುತ್ತಿದ್ದರು. ಅಮ್ಮನ ಬಿಟ್ಟು ಹೇಗಿರುವುದು ಅಂತಲೇ ಗೊತ್ತಾಗುತ್ತಿಲ್ಲ. I am not okay'ಎಂದು ಶುಭಾ ಪೂಂಜಾ ಕಣ್ಣೀರಿಟ್ಟಿದ್ದಾರೆ.
'ರಾಮಚಾರಿ' ರವಿಚಂದ್ರನ್ ರೀತಿ ಬದಲಾದ ಡ್ರೋನ್ ಪ್ರತಾಪ್; ಪೆದ್ದನಾಗಿ ನಟಿಸೋದು ಸುಲಭವಲ್ಲ ಎಂದ ನಟ
'ಪ್ರತಿಯೊಬ್ಬರ ಜೀವನದಲ್ಲಿ ತಾಯಿ ತುಂಬಾನೇ ಮುಖ್ಯ. ನೀವು ಈ ನೋವಿದ್ದರೂ ಶೂಟಿಂಗ್‌ಗೆ ಬಂದಿರುವುದು ನೋಡಿದರೆ ನಿಮ್ಮ ತಾಯಿ ಹೇಳಿಕೊಟ್ಟಿರುವ ಶ್ರದ್ಧೆ ಎದ್ದು ಕಾಣುತ್ತದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಶುಭಾ ಪೂಂಜಾ ಸಿನಿಮಾ ಜರ್ನಿ ಆರಂಭಿಸಿದ ದಿನದಿಂದ ತಾಯಿ ಬಿಗ್ ಸಪೋರ್ಟ್ ಆಗಿ ನಿಂತಿದ್ದಾರೆ. ಪ್ರತಿದಿನ ನಟಿ ಜೊತೆ ಶೂಟಿಂಗ್ ಹೋಗುವುದು, ಯಾವುದಕ್ಕೂ ಹೆದರಿಕೊಳ್ಳದೆ ಮುಂದೆ ನಡೆ ಎಂದು ಹೇಳುವುದು ಅವರೇ ಎಂದಿದ್ದಾರೆ. ಸದಾ ನಗು ನಗುತ್ತಿರುವ ಶುಭಾ ಪೂಂಜಾ ಅಳುವುದು ನೋಡಲು ನಿಷಕ್ಕೂ ಹಿಂಸೆ ಆಗುತ್ತದೆ.
ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!
'ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ' ಎಂದು ಶುಭಾ ಬರೆದುಕೊಂಡಿದ್ದರು.
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮೋಕ್ಷಿತಾ- ಐಶ್ರು- ಶಿಶಿರ್; ಫೋಟೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.