Gajanana and Gang: ಡಿಸೆಂಬರ್ 22ರಂದು ಅದಿತಿ ಪ್ರಭುದೇವ-ಶ್ರೀ ಮಹದೇವ್ ಚಿತ್ರದ ಟ್ರೇಲರ್ ರಿಲೀಸ್

By Suvarna News  |  First Published Dec 13, 2021, 2:11 PM IST

ಶ್ರೀ ಮಹದೇವ್ ಹಾಗೂ ಅದಿತಿ ಪ್ರಭುದೇವ ಅಭಿನಯದ 'ಗಜಾನನ ಅಂಡ್ ಗ್ಯಾಂಗ್' ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಮಾಹಿತಿಯೊಂದನ್ನು ಹಂಚಿಕೊಂಡಿದೆ.


ಶ್ರೀ ಮಹದೇವ್ (Shri Mahadev) ಅದಿತಿ ಪ್ರಭುದೇವ (Aditi Prabhudeva) ಅಭಿನಯದ 'ಗಜಾನನ ಅಂಡ್ ಗ್ಯಾಂಗ್' (Gajanana and Gang) ಚಿತ್ರದ ಫಸ್ಟ್‌ಲುಕ್ (First Look) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. 'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ (Abhishek Shetty) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಹೌದು! 'ಗಜಾನನ ಅಂಡ್ ಗ್ಯಾಂಗ್' ಚಿತ್ರದಲ್ಲಿ  'ಇರುವುದೆಲ್ಲ ಬಿಟ್ಟು' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡ ಶ್ರೀ ಮಹದೇವ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟ್ರೇಲರ್ ಇದೇ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ 'ಗಜಾನನ ಅಂಡ್ ಗ್ಯಾಂಗ್' ಚಿತ್ರದಲ್ಲಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tap to resize

Latest Videos

Lets Break Up: ರಚನಾ, ಶ್ರೀ ಮಹದೇವ್‌ ನಟನೆಯ ಫಸ್ಟ್‌ಲುಕ್ ರಿಲೀಸ್

ಈ ಚಿತ್ರ ಒಂದು ಕಲರ್​ಫುಲ್​ ಕಾಲೇಜ್ ಕಥೆ ಒಳಗೊಂಡಿದೆ. ಇದು ಮಧ್ಯಮ ವರ್ಗದ ಕಾಲೇಜು ಪ್ರೀತಿಯಿಂದದ ಶುರುವಾಗಿ ಫ್ಲ್ಯಾಶ್ ಬ್ಯಾಕ್ ಹೋಗುವ ನಿರೂಪಣೆ ಇದೆ ಎಂದು ಅದಿತಿ ಪ್ರಭುದೇವ ತಿಳಿಸಿದರು. ಶ್ರೀ ಮಹದೇವ್ ಅವರು ಈ ಚಿತ್ರದಲ್ಲಿ ರಗಡ್ ಆಗಿ ಮಾತನಾಡುವ, ಟಫ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಅವರು ಮಾಸ್ ಪ್ರೇಕ್ಷಕರನ್ನೂ ಕೂಡ ತಲುಪುವ ಆಲೋಚನೆಯಲ್ಲಿದ್ದಾರೆ. 'ಪ್ರತಿಯೊಬ್ಬ ಹೀರೋಗೆ ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಈ ಆಸೆಯು 'ಗಜಾನನ ಅಂಡ್ ಗ್ಯಾಂಗ್' ಸಿನಿಮಾ ಮೂಲಕ ಈಡೇರಲಿದೆ. 'ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ಪಾತ್ರದ ಗುಣಗಳು ನನ್ನಲ್ಲಿವೆ. ಹೀಗಾಗಿ ಇದು ನನಗೆ ತುಂಬ ಸುಲಭವಾಗಿತ್ತು. ಈ ಸಿನಿಮಾ ತಂಡದವರೆಲ್ಲರೂ ನಮ್ಮ ವಯಸ್ಸಿನವರೇ ಆಗಿದ್ದಾರೆ ಎಂದು ಶ್ರೀ ಮಹದೇವ್ ತಿಳಿಸಿದ್ದಾರೆ.

ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಮಿಡಲ್ ​ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರದ್ದು ಒಂದು ರೀತಿ ಎಮೋಷನಲ್ ಆಗಿರುವ ಪಾತ್ರ. ಕಥೆಯ ಒಂದೆಳೆ ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡರು. ಟೈಟಲ್ ನೋಡಿದಾಕ್ಷಣ ಕಾಮಿಡಿ ಶೈಲಿಯ ಸಿನಿಮಾ ಅನಿಸಿದರೂ, ಯಾವುದೇ ಶೈಲಿಗೆ ಸೀಮಿತವಾಗದ ಸಿನಿಮಾ ಇದು. ಎಲ್ಲ ಅಂಶಗಳನ್ನೂ ಸೇರಿಸಿ, ಎಲ್ಲ ವರ್ಗದವರಿಗೂ ಕನೆಕ್ಟ್ ಆಗುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದರು. ಇಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. 

Gajanana and Gang: ಶ್ರೀ ಮಹದೇವ್-ಅದಿತಿ ಪ್ರಭುದೇವ ಚಿತ್ರದ ಫಸ್ಟ್‌ಲುಕ್ ರಿಲೀಸ್

ಕ್ಯೂಟ್, ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರವಿದು. ನಾನಲ್ಲದಿರುವ ಪಾತ್ರವಿದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು ಎಂದು ಶ್ರೀ ಮಹದೇವ್ ಈ ಹಿಂದೆ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರದ್ಯುತನ್ (Praddyottan) ಸಂಗೀತ ಸಂಯೋಜಿಸುತ್ತಿದ್ದು, ಉದಯ ಲೀಲ ಕ್ಯಾಮರಾ ಕೈಚಳಕ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ (Nagesh Kumar U S) ನಿರ್ಮಾಪಕರಾಗಿ 'ಗಜಾನನ ಅಂಡ್ ಗ್ಯಾಂಗ್' ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.

click me!