ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಡಿಸೆಂಬರ್ 31ರಂದು ತೆರೆಮೇಲೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಚಿತ್ರ ವಿಳಂಬವಾಗಲಿದೆ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ '777 ಚಾರ್ಲಿ' (777 Charlie) ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದ ಮೇಲೆ ಸಿನಿರಸಿಕರು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಲಾಕ್‌ಡೌನ್ (Lockdown) ಕಾರಣದಿಂದ ಚಿತ್ರದ ಕೆಲಸಗಳು ಉಳಿದುಕೊಂಡಿದ್ದು, ಇತ್ತೀಚೆಗೆ ಚಿತ್ರತಂಡ ಅದನ್ನು ಪೂರ್ಣಗೊಳಿಸಿತ್ತು. ಅಲ್ಲದೇ ಡಿಸೆಂಬರ್ 31ರಂದು ಸಿನಿಮಾ ತೆರೆಮೇಲೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ಚಿತ್ರ ವಿಳಂಬವಾಗಲಿದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಹೌದು! ರಕ್ಷಿತ್ ಶೆಟ್ಟಿ '777 ಚಾರ್ಲಿ' ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಬರಬೇಕಿತ್ತು. ಆದರೆ, ಚಿತ್ರದ ಕೆಲಸಗಳು ವಿಳಂಬವಾಗಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ತಡವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಟ್ವೀಟರ್‌ನಲ್ಲಿ (Twitter) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ '777 ಚಾರ್ಲಿಯ ಈ ಸುದೀರ್ಘ ಪಯಣದಲ್ಲಿ ನೀವು ನಮಗೆ ತೋರಿರುವ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಆಭಾರಿ. ನಾವು ಈ ಮೂಲಕ ತಿಳಿಸ ಬಯಸುವುದೇನೆಂದರೆ, ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ದಿನಾಂಕವಾದ 31 ಡಿಸೆಂಬರ್ 2021 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವು ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಅತೀ ಶೀಘ್ರದಲ್ಲಿ ಹೊಸ ಪ್ರಕಟಣೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಅಲ್ಲಿಯವರೆಗೂ, ಹರಸಿ.. ಹಾರೈಸಿ' ಎಂದು ಟ್ವೀಟ್ (Tweet) ಮಾಡಿದ್ದಾರೆ.
ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಶೂಟಿಂಗ್ ಮುಕ್ತಾಯ: ಡಿಸೆಂಬರ್ 31ರಂದು ತೆರೆಗೆ
ಪರಂವಃ ಸ್ಟುಡಿಯೋ (Paramvah Studios) ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಟಾರ್ಚರ್ ಸಾಂಗ್ (Torture Song) ಇತ್ತೀಚೆಗಷ್ಟೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ (Vijay Prakash) ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್‌ಕ್ರಮವಾಗಿ ಆಯಾಯ ಭಾಷೆಗಳಲ್ಲಿ ಹಾಡಿದ್ದಾರೆ. '777 ಚಾರ್ಲಿ' ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ.
777 ಚಾರ್ಲಿಯಲ್ಲಿ ನಟಿಸಿದ ಶ್ವಾನಕ್ಕೆ ಟ್ರೈನಿಂಗ್ ಮಾಡದ್ಹೇಗೆ?
ಇನ್ನು ಕೆಲ ತಿಂಗಳ ಹಿಂದಷ್ಟೇ ರಕ್ಷಿತ್ ಶೆಟ್ಟಿ '164 ಅಪೂರ್ವ ದಿನಗಳ ಶೂಟಿಂಗ್ಗೆ ಪೂರ್ಣ ವಿರಾಮ. ಚಾರ್ಲಿ ಚಿತ್ರೀಕರಣದ ಅದ್ಭುತವಾದ ಪಯಣವನ್ನು ನಿನ್ನೆ ಕುಂಬಳಕಾಯಿ ಒಡೆಯುವುದರ ಮೂಲಕ ಮುಗಿಸಿದ್ದೇವೆ. ಡಿಸೆಂಬರ್ 31ರಂದು ಚಿತ್ರಮಂದಿರದಲ್ಲಿ ಭೇಟಿಯಾಗೋಣ' ಎಂದು ಕ್ಯಾಪ್ಷನ್ ಬರೆದು ಕುಂಬಳಕಾಯಿ ಕಾರ್ಯಕ್ರಮದ ಒಂದಷ್ಟು ಸಿಹಿ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡಿದ್ದರು. ಯುವ ನಿರ್ದೇಶಕ ಕಿರಣ್ ರಾಜ್ (Kiran Raj) ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ '777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಸಂಗೀತಾ ಶೃಂಗೇರಿ (Sangeetha Sringeru) ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.