Puneeth Rajkumar: ಲಕ್ಕಿಮ್ಯಾನ್ ಚಿತ್ರದ ಅಪ್ಪು ವಿಡಿಯೋ ಝಲಕ್ ಹಂಚಿಕೊಂಡ ಡಾರ್ಲಿಂಗ್​ ಕೃಷ್ಣ

Suvarna News   | Asianet News
Published : Dec 12, 2021, 07:28 PM IST
Puneeth Rajkumar: ಲಕ್ಕಿಮ್ಯಾನ್ ಚಿತ್ರದ ಅಪ್ಪು ವಿಡಿಯೋ ಝಲಕ್ ಹಂಚಿಕೊಂಡ ಡಾರ್ಲಿಂಗ್​ ಕೃಷ್ಣ

ಸಾರಾಂಶ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ಪ್ರಭುದೇವ ಮತ್ತು ಡಾರ್ಲಿಂಗ್​ ಕೃಷ್ಣ ನಟಿಸಿರುವ 'ಲಕ್ಕಿ ಮ್ಯಾನ್​'  ಚಿತ್ರದ ಚಿತ್ರೀಕರಣ​ ಕೂಡ ಮುಗಿದಿದ್ದು, ಇದೀಗ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. 

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಅಪ್ಪು ಅವರು ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ಆ ಚಿತ್ರಗಳು ಬಿಡುಗಡೆಯಾಗುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ. ವಿಶೇಷವಾಗಿ ಪುನೀತ್ ಅಭಿನಯದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಆ ಪೈಕಿ 'ಜೇಮ್ಸ್​' (James) ಸಿನಿಮಾ ರಿಲೀಸ್​ ಆಗುವುದು ಖಚಿತ ಎಂಬುದು ಈಗಾಗಲೇ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅಪ್ಪು ಜತೆ ಪ್ರಭುದೇವ ಮತ್ತು ಡಾರ್ಲಿಂಗ್​ ಕೃಷ್ಣ (Darling Krishna) ನಟಿಸಿರುವ 'ಲಕ್ಕಿಮ್ಯಾನ್​' (Luckyman) ಚಿತ್ರದ ಚಿತ್ರೀಕರಣ​ ಕೂಡ ಮುಗಿದಿದ್ದು, ಇದೀಗ ಚಿತ್ರದ ಡಬ್ಬಿಂಗ್ (Dubbing)​ ಕೆಲಸಗಳು ನಡೆಯುತ್ತಿವೆ. 
 
ಡಬ್ಬಿಂಗ್​ ಮಾಡುತ್ತಿರುವ ಅನುಭವವನ್ನು ಡಾರ್ಲಿಂಗ್​ ಕೃಷ್ಣ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. ಈ ಬಗ್ಗೆ 'ಲಕ್ಕಿಮ್ಯಾನ್ ಸಿನಿಮಾಗೆ ಡಬ್ಬಿಂಗ್ ಶುರು ಮಾಡಿದೆ. ಈ ದೃಶ್ಯಕ್ಕೆ ಡಬ್ಬಿಂಗ್ ಮಾಡುವುದು ಅತ್ಯಂತ ಕಷ್ಟಕರವಾದ ಭಾಗವಾಗಿತ್ತು. ಅಪ್ಪು ಸರ್ ಜೊತೆಗಿನ ಈ ಚಿತ್ರದ ಶೂಟಿಂಗ್ ತುಂಬಾ ವಿಶೇಷವಾಗಿತ್ತು ಮತ್ತು ಇದು ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ' ಎಂದು ಕ್ಯಾಪ್ಷನ್‌ ಬರೆದು ಜೊತೆಗೆ ಒಂದು ಸಣ್ಣ ವಿಡಿಯೋ ಕ್ಲಿಪ್‌ನ್ನು ಡಾರ್ಲಿಂಗ್ ಕೃಷ್ಣ ಪೋಸ್ಟ್ ಮಾಡಿದ್ದಾರೆ. 'ಲಕ್ಕಿಮ್ಯಾನ್​' ಚಿತ್ರದಲ್ಲಿ ಅಪ್ಪು ನಟನೆಯ ದೃಶ್ಯದ ತುಣುಕುಗಳು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ಅಪ್ಪು ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಿ ಎಂದ ಶ್ರೀಮುರಳಿ

ಪರ್ಸಾ ಪಿಕ್ಚರ್ಸ್ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್​ ಕೆಲಸಗಳು ಹಾಸ್ಯನಟ ಸಾಧು ಕೋಕಿಲ (Sadhu Kokila) ಅವರ ಸ್ಟುಡಿಯೋದಲ್ಲಿ ನಡೆಯುತ್ತಿವೆ. 'ಲಕ್ಕಿಮ್ಯಾನ್​' ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪ್ರಭುದೇವ (Prabhudeva) ಸಹೋದರ ನಾಗೇಂದ್ರ ಪ್ರಸಾದ್ (Nagendra Prasad)​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಡ್ಯಾನ್ಸ್ (Dance) ಮಾಡಿದ್ದಾರೆ. ಡಾ. ರಾಜ್​ಕುಮಾರ್ (Dr.Rajkumar) ಅವರ ಮೇಲೆ ಬರೆದ ಈ ಹಾಡಿನಲ್ಲಿ ಇದೇ ಮೊದಲ ಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡುವಂತಾಗಿದೆ.

ಮೂಲತಃ ಮೈಸೂರಿನವರಾದ ಪ್ರಭುದೇವ ಕನ್ನಡದಲ್ಲಿ ಮೊದಲು ನಟಿಸಿದ್ದು ಉಪೇಂದ್ರ (Upendra) ಅವರ 'ಹೆಚ್2ಒ' (H2O) ಚಿತ್ರದಲ್ಲಿ. ಸಹೋದರ ನಾಗೇಂದ್ರ ಪ್ರಸಾದ್ ಅಭಿನಯದ 'ಮನಸೆಲ್ಲಾ ನೀನೆ' (Manasella Neene) ಚಿತ್ರದಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಮತ್ತು 2007ರಲ್ಲಿ 'ಪ್ರಾರಂಭ' ಚಿತ್ರದಲ್ಲಿ ಕೂಡ ನಟಿಸಿದ್ದರು. ಇದೀಗ 13 ವರ್ಷಗಳ ನಂತರ ಮತ್ತೆ 'ಲಕ್ಕಿಮ್ಯಾನ್' ಚಿತ್ರದ ಮೂಲಕ ಪ್ರಭುದೇವ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. ಇನ್ನು 'ಲಕ್ಕಿಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ (Sangeetha Sringeri) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ರೋಶಿನಿ ಪ್ರಕಾಶ್ (Roshini Prakash) ಕಾಣಿಸಿಕೊಂಡಿದ್ದಾರೆ. ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್​ ಸೇರಿದಂತೆ ಅನೇಕ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ.

DilPasand: ಬೋಲ್ಡ್‌ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಜೋಡಿ

ಡಾರ್ಲಿಂಗ್ ಕೃಷ್ಣ ಸಾಲು ಸಾಲು ಚಿತ್ರಗಳಲ್ಲು ಬ್ಯುಸಿಯಾಗಿದ್ದು, ಇತ್ತೀಚೆಗೆ 'ದಿಲ್​ ಪಸಂದ್​' ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ರಶ್ಮಿ ಫಿಲಂಸ್ (Rashmi Films) ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumant Kranthi) ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು (Nishvika Naidu) ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ‌. ಚಿತ್ರಕ್ಕೆ ಶಿವ ತೇಜಸ್ (Shiva Tejas) ಆಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ', 'ಮಿಸ್ಟರ್ ಬ್ಯಾಚುಲರ್', 'ಲವ್ ಮಾಕ್ಟೇಲ್ 2' ಹಾಗೂ 'ಲವ್ ಮಿ ಔರ್ ಹೇಟ್ ಮಿ'ಸಿನಿಮಾಗಳು ಅನೌನ್ಸ್ ಆಗಿ ಚಿತ್ರೀಕರಣದ ಹಂತದಲ್ಲಿವೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?