ಸ್ನೇಹಕ್ಕಾಗಿ ಸಿನಿಮಾ ಒಪ್ಪಿಕೊಂಡು ಮೋಸ ಆಗಿದೆ, ದೊಡ್ಡ ಪಾಠ ಕಲಿತಿದ್ದೀನಿ: ಸುಧಾರಾಣಿ

By Vaishnavi Chandrashekar  |  First Published Nov 9, 2024, 10:00 AM IST

ಸದಾ ಕ್ಯಾಮೆರಾ ಎದುರಿಸಿ ಜನರಿಗೆ ಮನೋರಂಜನೆ ನೀಡುತ್ತಿರುವ ಸುಧಾ ರಾಣಿ ಅವರ ಬಿಗ್ ಸಪೋರ್ಟ್‌ ತಾಯಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.


2 ವರ್ಷದ ಪಾಪು ಆಗಿದ್ದಾಗ ಕ್ಯಾಮೆರಾ ಎದುರಿಸಿದ ಸುಧಾರಾಣಿ, 3 ವರ್ಷದಲ್ಲಿ ಬಿಸ್ಕೆಟ್ ಬ್ರಾಂಡ್ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಅದೇ ವಯಸ್ಸಿನಲ್ಲಿ ಡಾ. ವಿಷ್ಣುವರ್ಧನ್ ನಟನೆಯ ಕಿಲಾಡಿ ಕಿಟ್ಟು ಸಿನಿಮಾದಲ್ಲಿ ಕಾಣಿಸಿಕೊಂಡರು. ಅಲ್ಲಿಂದ ನೆಕ್ಸಟ್‌ ಕ್ಯಾಮೆರಾ ಎದುರಿಸಿದ್ದು ನಾಯಕಿಯಾಗಿ ಶಿವರಾಜ್‌ಕುಮಾರ್ ಜೊತೆ ಆನಂದ್ ಚಿತ್ರದ ಮೂಲಕ. 1986ರಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಈ ಚಿತ್ರದಲ್ಲಿ ಸುಧಾರಾಣಿ ಕೇವಲ 13 ವರ್ಷ. 38 ವರ್ಷದ ಬಳಿಕವೂ ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳ ಮೂಲಕ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ.

'ಕ್ಯಾಮೆರಾಗಳು ಸುತ್ತ ಬೆಳೆದ ಕಾರಣ ಅದನ್ನು ಎದುರಿಸಲು ನನಗೆ ಏನೋ ಹೊಸತು ಅನಿಸಲಿಲ್ಲ. ನನ್ನ ಪಕ್ಕ ಕಲ್ಲಿನಂತೆ ನಿಂತಿದು ಧೈರ್ಯ ಕೊಟ್ಟಿದ್ದು ನನ್ನ ತಾಯಿ. ಇಂದು ನಾನು ಏನೇ ಆಗಿದ್ದರು ಅದು ನನ್ನ ತಾಯಿಗೆ ಸೇರಬೇಕಿರುವ ಕ್ರೆಡಿಟ್. ಪುಟ್ಟ ಮಗುವಾಗಿದ್ದಾಗ ಕ್ಯಾಮೆರಾ ಎದುರಿಸಲು ಶುರು ಮಾಡಿದೆ ಅಲ್ಲಿಂದ ಅವಕಾಶಗಳು ಹುಡುಕಿ ಬಂದಿತ್ತು. ಅಲ್ಲಿಂದ ತಾಯಿ ಏನೇ ಹೇಳಿದ್ದರೂ ಕೇಳಬೇಕು ಅನ್ನೋ ಆಲೋಚನೆ ಶುರುವಾಗಿತ್ತು, ಇದು ಭಯದಿಂದ ಅಲ್ಲ ನಂಬಿಕೆಯಿಂದ ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸುಧಾ ರಾಣಿ ಮಾತನಾಡಿದ್ದಾರೆ.

Tap to resize

Latest Videos

undefined

ಆಸ್ಟ್ರೇಲಿಯ ಯೂನಿವರ್ಸಿಟಿಯಲ್ಲಿ ಸ್ಕಾಲರ್ಶಿಪ್‌ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ ರೋಶನಿ ಪ್ರಕಾಶ್!

'ನಾನು ಆಯ್ಕೆ ಮಾಡಿಕೊಂಡಿರುವ ಸಿನಿಮಾಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕೆಲವೊಂದು ಸಿನಿಮಾಗಳನ್ನು ಸ್ನೇಹಕ್ಕಾಗಿ ಒಪ್ಪಿಕೊಂಡು ಮಾಡಿರುವೆ. ಹಲವು ಕಥೆಗಳನ್ನು ಪಾತ್ರದಿಂದ ರಿಜೆಕ್ಟ್ ಮಾಡಿದ್ದೀನಿ. ಕಲಾವಿದರಾಗಿ ನಮ್ಮ ಪಾತ್ರ ಟ್ರಾಸಿಷನ್ ಆಗುವುದು ಗೊತ್ತಾಗುತ್ತದೆ ಆದರೆ ನನ್ನ ಪಾತ್ರಗಳ ಬದಲಾವಣೆ ಆಗಿದ್ದು ಗೊತ್ತೇ ಆಗಿಲ್ಲ. ಕೆಲವೊಂದು ಸಮಯಲ್ಲಿ ನಾನೇ ಪ್ರಮುಖ ಪಾತ್ರಧಾರಿ ಎಂದು ಹೇಳಿ ಕಥೆಯನ್ನು ಬದಲಾಯಿಸಿದ್ದು ಇದೆ, ಆಗ ನಾನು ಪ್ರಶ್ನೆಗಳು ಮೂಡುತ್ತಿದ್ದವು ಆದರೆ ತುಂಬಾ ತಡವಾಗಿರುತ್ತಿತ್ತು. ಅಲ್ಲಿಂದ ಅರ್ಥವಾಗಿದ್ದು ಸ್ನೇಹಕ್ಕಾಗಿ ಸಿನಿಮಾಗಳನ್ನು ಸಹಿ ಮಾಡಬಾರದು. ಅದು ನನಗೆ ಆಗುವ ಮೋಸ ಮಾತ್ರವಲ್ಲ ದೊಡ್ಡ ಪಾಠವಾಗಿ ಉಳಿದು ಬಿಡುತ್ತದೆ' ಎಂದು ಸುಧಾ ರಾಣಿ ಹೇಳಿದ್ದಾರೆ. 

click me!