ಬ್ಯಾಡ್ ನ್ಯೂಸ್, ರಾಮ್‌ಚರಣ್ ಜೊತೆಗಿನ ಸಿನಿಮಾ ಮುಂದಕ್ಕೆ ಹಾಕಿದ ಶಿವರಾಜ್‌ಕುಮಾರ್!

By Shriram Bhat  |  First Published Nov 8, 2024, 7:44 PM IST

ನಟ ಶಿವಣ್ಣ ಸಿನಿಮಾ ಜರ್ನಿಯಲ್ಲಿ ಹೊಸದೊಂದು ಮೈಲಿಗಲ್ಲು ಆಗಲಿರುವುದು ಸದ್ಯಕ್ಕೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಅದು 'ಆರ್‌ಆರ್‌ಆರ್‌' ಸಿನಿಮಾ ಖ್ಯಾತಿಯ ತೆಲುಗು ನಟ ರಾಮ್‌ಚರಣ್ ಜೊತೆಗಿನ ಸಿನಿಮಾದಲ್ಲಿ ನಟನೆ. ಹೌದು, ಕನ್ನಡದ ನಟ..


ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅನಾರೋಗ್ಯಕ್ಕೆ ಒಳಗಾಗಿರುವುದು ಗೊತ್ತೇ ಇದೆ. ಚಿಕಿತ್ಸೆಗಾಗಿ ಸದ್ಯದಲ್ಲೇ ಶಿವಣ್ಣ ಅಮೆರಿಕಾಗೆ ತೆರಳಲಿದ್ದು, ಸದ್ಯ ಎಲ್ಲ ಸಿನಿಮಾಗಳ ಶೂಟಿಂಗ್ ಪೋಸ್ಟ್‌ಪೋನ್ ಮಾಡಿದ್ದಾರೆ. 'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿರುವ ಶಿವಣ್ಣ ಅವರು ಬೇರೆ ಎಲ್ಲ ಸಿನಿಮಾಗಳ ಡೇಟ್ಸ್‌ ಅನ್ನು ಸದ್ಯ ಕ್ಯಾನ್ಸಲ್ ಮಾಡಿಸಿದ್ದಾರೆ. ಕಾರಣ, ಅಮೆರಿಕಾದಲ್ಲಿ ಒಂದೆರಡು ತಿಂಗಳು ಕಾಲ ಇರಬೇಕಾಗಬಹುದು!

ನಟ ಶಿವರಾಜ್‌ಕುಮಾರ್‌ ಅವರಿಗೆ ಗಂಭೀರ ಖಾಯಿಲೆ ತಗಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ (America) ಸದ್ಯದಲ್ಲೇ ತೆರಳಲಿದ್ದಾರೆ ಎನ್ನಲಾಗಿದೆ. ಯಾವ ಖಾಯಿಲೆ, ಎಷ್ಟು ಕಾಲ ಆಯ್ತು ಎಂಬೆಲ್ಲ ಮಾಹಿತಿಗಿಂತ ಈಗ ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. ಸುದ್ದಿಜಾಲಗಳ ಮೂಲಕ ಈ ಸಂಗತಿ ಜಗತ್ತಿಗೇ ಹರಡುತ್ತಿದ್ದು, ಕರುನಾಡ ಚಕ್ರವರ್ತಿ ಶಿವಣ್ಣ ಶೀಘ್ರ ಗುಣಮುಖರಾಗಿ ಬರಲಿ ಎಂದು ಅಸಂಖ್ಯಾತ ಅಭಿಮಾನಿಗಳು ಹಾರೈಸುತ್ತಿದ್ದಾರೆ. 

Tap to resize

Latest Videos

undefined

ಕಾಂತಾರ ಪ್ರೀಕ್ವೆಲ್‌ಗೆ ಭಾರೀ ತಯಾರಿ, 'ನ ಭೂತೋ ನ ಭವಿಷ್ಯತಿ' ಎಂಬಂತೆ ನಡಿತಿರೋ ಶೂಟಿಂಗ್!

ಈ ಸಮಯದಲ್ಲಿ, ನಟ ಶಿವಣ್ಣ ಸಿನಿಮಾ ಜರ್ನಿಯಲ್ಲಿ ಹೊಸದೊಂದು ಮೈಲಿಗಲ್ಲು ಆಗಲಿರುವುದು ಸದ್ಯಕ್ಕೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಅದು 'ಆರ್‌ಆರ್‌ಆರ್‌' ಸಿನಿಮಾ (RRR Movie) ಖ್ಯಾತಿಯ ತೆಲುಗು ನಟ ರಾಮ್‌ಚರಣ್ ಜೊತೆಗಿನ ಸಿನಿಮಾದಲ್ಲಿ ನಟನೆ. ಹೌದು, ಕನ್ನಡದ ನಟ ಶಿವರಾಜ್‌ಕುಮಾರ್‌ ಅವರು ತೆಲುಗು ನಟ ರಾಮ್‌ಚರಣ್ ಜೊತೆಗೂಡಿ 'RC-16' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸದ್ಯ ಶಿವಣ್ಣರ ಅನಾರೋಗ್ಯದ ಕಾರಣಕ್ಕೆ, ಇದನ್ನು ಮುಂದೂಡಲಾಗಿದೆ. ಒಂದೆರಡು ತಿಂಗಳು ಬಳಿಕ ತಾವು ಶೂಟಿಂಗ್‌ ಟೀಮ್ ಸೇರಿಕೊಳ್ಳುವುದಾಗಿ ಶಿವಣ್ಣ ತಿಳಿಸಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಸದ್ಯದಲ್ಲೇ ಟ್ರೀಟ್‌ಮೆಂಟ್‌ಗೆ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. 

ಪ್ರಭಾಸ್ ಜೊತೆ ಭಾರೀ ಒಪ್ಪಂದ ಮಾಡಿಕೊಂಡ ಹೊಂಬಾಳೆ ಫಿಲಂಸ್; ಡಾರ್ಲಿಂಗ್ ಲಕ್ ನೋಡ್ರೀ!

ಈಗಾಗಲೇ ಚಿಕಿತ್ಸೆಯ ಹಂತಗಳಲ್ಲಿ ಎರಡು ಸೆಷನ್ ಮುಗಿದಿದೆ, ಇನ್ನು ಎರಡು ಸೆಷನ್ ಬಾಕಿ ಇದ್ದು, ಅದಕ್ಕಾಗಿ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಬಳಿಕ ಒಂದು ಸರ್ಜರಿ ಸಹ ಆಗಬೇಕಿದೆ ಎಂದಿದ್ದಾರೆ ವೈದ್ಯರು. ಆದರೆ ಅದನ್ನು ಭಾರತದಲ್ಲಿಯೇ ಪಡೆದುಕೊಳ್ಳಬೇಕೋ ಅಥವಾ ಅಲ್ಲಿ ಅಮೆರಿಕಾದಲ್ಲಿಯೋ ಎಂಬ ಬಗ್ಗೆ ಇನ್ನೂ ಸ್ವಲ್ಪ ಗೊಂದಲವಿದೆ. ಆ ಬಗ್ಗೆ ಸದ್ಯದಲ್ಲೇ ನಿರ್ಧರಿಸಲಾಗುವುದು' ಎಂದಿದ್ದಾರೆ. 

ಸಹಜವಾಗಿಯೇ ನಟ ಶಿವಣ್ಣರ ಅಭಿಮಾನಿಗಳು ಆತಂಕಕ್ಕೆ ಈಡಾಗುತ್ತಾರೆ. ಆದರೆ ಆ ಬಗ್ಗೆ ಸ್ವತಃ ಶಿವಣ್ಣ 'ನನ್ನ ಅನಾರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಲೂ ನಾನು ಶೂಟಿಂಗ್ ಹಾಗೂ ರಿಯಾಲಿಟಿ ಶೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆಗೆ ಹೋಗಿಬಂದ ಬಳಿಕ ಮತ್ತೆ ನನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಲಿದ್ದೇನೆ' ಎಂದಿದ್ದಾರೆ. 'ಅಭಿಮಾನಿಗಳಿಂದ ಯಾವುದನ್ನೂ ಮುಚ್ಚಿಡಬೇಕಾದ ಅಗತ್ಯ ನನಗಿಲ್ಲ' ಎಂದಿರುವ ನಟ ಶಿವಣ್ಣ ಅವರು, ಹೊರಗಡೆ ಜಗತ್ತಿಗೆ ಎಷ್ಟು ಮಾಹಿತಿ ನೀಡಬೇಕೋ ಅಷ್ಟನ್ನು ನೀಡಿದ್ದಾರೆ. 

ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ. ಹೌದು, ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. 

click me!