ಅಮೆರಿಕಾದಿಂದ ಚಿಕತ್ಸೆ ಪಡೆದುಬಂದ ಬಳಿಕ ನಟ ಶಿವಣ್ಣ ಅವರು ಸೂಪರ್ ಸ್ಟಾರ್ ರಜನಿಕಾಂತ್ ಜತೆ 'ಜೈಲರ್ 2' ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ, ಅವರದೇ ಹೋಮ್ ಪ್ರೊಡಕ್ಷನ್‌ನಲ್ಲಿ 'ಎ ಫಾರ್ ಆನಂದ್' ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್‌ಗಳು ನಟ ಶಿವಣ್ಣ ಕೈನಲ್ಲಿದ್ದು..
ಸ್ಯಾಂಡಲ್‌ವುಡ್ ನಟ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shivarajkumar) ಅವರಿಗೆ ಸದ್ಯ ಕಾನ್ಸರ್ ಖಾಯಿಲೆಗೆ ಟ್ರೀಟ್‌ಮೆಂಟ್ ನಡಿತಾ ಇದೆ ಅನ್ನೋ ವಿಷಯ ಗೊತ್ತೇ ಇದೆ. ಸದ್ಯ ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೊರಟು ನಿಂತಿರೋ ಶಿವಣ್ಣ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಅನಾರೋಗ್ಯ, ಟ್ರೀಟ್‌ಮೆಂಟ್ ಜೊತೆಗೆ, ಮನೆಯಲ್ಲಿ ಅಪ್ಪಾಜಿ ಡಾ ರಾಜ್‌ಕುಮಾರ್ (Dr Rajkumar) ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ತಮ್ಮನ್ನು ಏನಂತ ಕರೀತಾರೆ ಎಂಬುದನ್ನು ಸಹ ಹೇಳಿದ್ದಾರೆ ನಟ ಶಿವರಾಜ್‌ಕುಮಾರ್.
ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟ ಶಿವರಾಜ್‌ಕುಮಾರ್ 'ನನ್ನ ಅಪ್ಪಾಜಿಯವರು ನನ್ನನ್ನು 'ಅಪ್ಪಾಜಿ' ಅಂತಲೇ ಕರೀತಾ ಇದ್ರು. ಕಾರಣ, ನಾನು ಅವರ ತಂದೆಯ ತರಹವೇ ಅಂತಿದ್ರು ಅವ್ರು. ನಾನು ಚಿಕ್ಕ ಮಗುವಾಗಿದ್ದ ಕಾಲದಿಂದಲೂ ನನಗೆ ನಮ್ಮ ತಂದೆ ಅವರ ತಂದೆಯನ್ನು ಕರೆಯುವಂತೆ 'ಅಪ್ಪಾಜಿ' ಎಂದೇ ಕರೆಯುತ್ತಿದ್ದರು. ಅವರು ನನ್ನಲ್ಲೇ ತಮ್ಮ ತಂದೆಯನ್ನು ಕಾಣುತ್ತಿದ್ದರು. ನೀನು ನ್ನ ಕಂದ ಅಲ್ಲ ಅಪ್ಪಾಜಿ, ನಾನೇ ನಿನ್ನ ಕಂದ ಅಂತಿದ್ರು' ಎಂದಿದ್ದಾರೆ ಶಿವಣ್ಣ.
ದೊಡ್ಡ ಜಾಲಕ್ಕೆ ಕೈ ಹಾಕಬೇಕಾದ್ರೆ ಟಾರ್ಗೆಟ್ ಕೂಡಾ ಆಗಿದ್ದೀನಿ: ನಟ ದುನಿಯಾ ವಿಜಯ್!
ಇನ್ನು ಪತ್ನಿ ಗೀತಾ ಅವರು ಏನಂತ ಕರೀತಾರೆ ಎಂಬ ಪ್ರಶ್ನೆಗೆ 'ಗೀತಾ ನನ್ನನ್ನು 'ದಾಡಾ' ಎಂದು ಕರೆಯುತ್ತಾರೆ' ಎಂದಿದ್ದಾರೆ. ಯಾಕೆ ಹಾಗೆ ಕರೀತಾರೆ, ಅದರ ಹಿಂದಿನ ರಹಸ್ಯವೇನು ಅಂತೆಲ್ಲಾ ಹೇಳದ ನಟ ಶಿವಣ್ಣ ಅವರು ಏನು ಕರೀತಾರೆ ಅಂತಷ್ಟೇ ಹೇಳಿದ್ದಾರೆ. ಇನ್ನು ಪುನೀತ್ ಹಾಗು ರಾಘು ಅವರು ನನ್ನನ್ನು 'ಶಿವಣ್ಣ' ಅಂತ ಕರೀತಾರೆ ಎಂಬ ಸಂಗತಿಯನ್ನು ಸಹ ಬಿಚ್ಚಿಟ್ಟಿದ್ದಾರೆ ನಟ ಶಿವರಾಜ್‌ಕುಮಾರ್. ಅಮ್ಮ ಹಾಗೂ ಅಪ್ಪನ ಬಗ್ಗೆ ಮಾತನಾಡುತ್ತ, ತಮ್ಮ ಪುನೀತ್ ಬಗ್ಗೆ ಮಾತನಾಡುತ್ತ ನಟ ಶಿವಣ್ಣ ಅವರು ಭಾವುಕರಾಗಿದ್ದು ಕೂಡ ಕಂಡುಬಂತು.
ಅಮೆರಿಕಾದಿಂದ ಚಿಕತ್ಸೆ ಪಡೆದುಬಂದ ಬಳಿಕ ನಟ ಶಿವಣ್ಣ ಅವರು ಸೂಪರ್ ಸ್ಟಾರ್ ರಜನಿಕಾಂತ್ ಜತೆ 'ಜೈಲರ್ 2' ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ, ಅವರದೇ ಹೋಮ್ ಪ್ರೊಡಕ್ಷನ್‌ನಲ್ಲಿ (ಗೀತಾ ಶಿವರಾಜ್‌ಕುಮಾರ್) 'ಎ ಫಾರ್ ಆನಂದ್' ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್‌ಗಳು ನಟ ಶಿವಣ್ಣ ಕೈನಲ್ಲಿದ್ದು, ಅಮೆರಿಕಾದಿಂದ ಬಳಿಕವಷ್ಟೇ ಅವೆಲ್ಲಾ ಚಿತ್ರಗಳಿಗೆ ಡೆಟ್ಸ್ ಹೊಂದಾಣಿಕೆ ಮಾಡಲಿದ್ದಾರಂತೆ ಶಿವಣ್ಣ. 'ನೀವು ಚಿಕಿತ್ಸೆ ಪಡೆದು ಇಲ್ಲಿಂದ ಆರಾಮವಾಗಿ ಹೋಗಲಿದ್ದೀರಿ' ಎಂದಿದ್ದಾರಂತೆ ಅಮೆರಿಕಾ ಡಾಕ್ಟರ್'.
ಮನೆಗೇ ಹೋಗಿದ್ದ ಯಮುನಾ ನೋಡಿ ಡಾ ರಾಜ್ ಮಾಡಿದ್ದೇನು, ನಟಿ ರಿಯಾಕ್ಷನ್ ಏನಿತ್ತು?