'ಸ್ಕೂಲ್ ಹುಡುಗರ್ ಗಾಂಜ, ಡ್ರಗ್ ಸೇವನೆ ಮಾಡ್ತಾರೆ,
ಕೆಲವು ಹುಡುಗರೇ ಒಂದು ಹೆಜ್ಜೆ ಮುಂದೆ ಹೋಗಿ ಡ್ರಗ್ ಪೆಡ್ಲಿಂಗ್ ಮಾಡ್ತಾರೆ, ಪೊಲೀಸ್ ಡಿಪಾರ್ಟ್ಮೆಂಟ್ ಹೈ ಡಿಪಾರ್ಟ್ಮೆಂಟ್ ಪೊಲೀಸ್ ಡಿಪಾರ್ಟ್ಮೆಂಟ್ ಇಲ್ಲ ಅಂದ್ರೆ ನಾವು ಬದುಕಲು ಸಾಧ್ಯವಿಲ್ಲ. ಪೊಲೀಸರು ದಾಳಿ ಮಾಡ್ತಾರೆ ಅಂತ ಕೇಳಲ್ಪಟ್ಟೆ...
ನಟ ದುನಿಯಾ ವಿಜಯ್ (Duniya Vijay) ಚಿಟ್ ಚಾಟ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ನಟ ದುನಿಯಾ ವಿಜಯ್ 'ಡ್ರಗ್ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ. ಕಮಿಷನರ್ ಸರ್ ಸೀರಿಯಸ್ ಆಗಿ ತಗೊಂಡಿದ್ದಾರೆ. ಪೊಲೀಸರು ಕೂಡಾ ನನಗೆ ಫೋನ್ ಮಾಡಿ ಮಾತನಾಡಿದ್ದಾರೆ.
ಸುಮಾರು ಗಾಂಜಾ ಕೇಸ್, ಡ್ರಗ್ ಕೇಸ್ ಹಿಡಿತಿದ್ದಾರೆ ಖುಷಿಯಾಗಿದೆ. ಕೆಲವು ಮೆಡಿಕಲ್ ಸ್ಟೋರ್ ನವರನ್ನ ಮೀಟಿಂಗ್ ಕರೆದು ವಾರ್ನ್ ಮಾಡುತ್ತಿದ್ದಾರೆ. ಭೀಮ ಸಿನೆಮಾ ಇಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಆಗ್ತಿದೆ ಅಂದ್ರೆ ಖುಷಿಯಾಗ್ತಿದೆ' ಎಂದಿದ್ದಾರೆ.
ಅಷ್ಟೇ ಅಲ್ಲ, ಈ ಬಗ್ಗೆ ಇನ್ನೂ ಅನಿಸಿಕೆ ಹಂಚಿಕೊಂಡಿರುವ ನಟ ದುನಿಯಾ ವಿಜಯ್ 'ಸ್ಕೂಲ್ ಹುಡುಗರ್ ಗಾಂಜ, ಡ್ರಗ್ ಸೇವನೆ ಮಾಡ್ತಾರೆ,
ಕೆಲವು ಹುಡುಗರೇ ಒಂದು ಹೆಜ್ಜೆ ಮುಂದೆ ಹೋಗಿ ಡ್ರಗ್ ಪೆಡ್ಲಿಂಗ್ ಮಾಡ್ತಾರೆ, ಪೊಲೀಸ್ ಡಿಪಾರ್ಟ್ಮೆಂಟ್ ಹೈ ಡಿಪಾರ್ಟ್ಮೆಂಟ್ ಪೊಲೀಸ್ ಡಿಪಾರ್ಟ್ಮೆಂಟ್ ಇಲ್ಲ ಅಂದ್ರೆ ನಾವು ಬದುಕಲು ಸಾಧ್ಯವಿಲ್ಲ. ಪೊಲೀಸರು ದಾಳಿ ಮಾಡ್ತಾರೆ ಅಂತ ಕೇಳಲ್ಪಟ್ಟೆ, ಇದರಿಂದ ಮಕ್ಕಳಿಗೆ ಒಳ್ಳೆದಾಗತ್ತೆ' ಎಂದಿದ್ದಾರೆ.
ಮನೆಗೇ ಹೋಗಿದ್ದ ಯಮುನಾ ನೋಡಿ ಡಾ ರಾಜ್ ಮಾಡಿದ್ದೇನು, ನಟಿ ರಿಯಾಕ್ಷನ್ ಏನಿತ್ತು?
ಮುಂದುವರಿದು 'ದೊಡ್ಡ ಜಾಲಕ್ಕೆ ಕೈ ಹಾಕಬೇಕಾದ್ರೆ ಟಾರ್ಗೆಟ್ ಕೂಡಾ ಆಗಿದ್ದೀನಿ. ನಾನು ಯಾರಿಗೂ ಹೆದರಲ್ಲ ದುಡ್ಡು ಸಂಪಾದನೆ ಮಾಡಲು ಮಕ್ಕಳ ಭವಿಷ್ಯ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಕೆಲವು ಹೆಣ್ಣುಮಕ್ಕಳು ಇದರಲ್ಲಿ ಭಾಗಿಯಾಗಿದ್ದಾರೆ. ಇನ್ನೊಂದು ರೌಂಡ್ ಕ್ಲಿಯರ್ ಆಗಿಬಿಟ್ರೆ ಖಂಡಿತವಾಗಿಯೂ ಡ್ರಗ್ ಮುಕ್ತ ಬೆಂಗಳೂರು ಆಗುತ್ತೆ. ತಂದೆ ತಾಯಿ ಮಕ್ಕಳನ್ನ ಸ್ಕೂಲಿಗೆ ಬಿಟ್ಟು ಹೋದ್ರೆ ಅವರು ಸ್ಕೂಲ್ ಗೆ ಹೋಗದೆ ಡ್ರಗ್ ಸೇವನೆ ಮಾಡ್ತಾರೆ.
ನಮ್ಮ ಕಾಲದಲ್ಲಿ ಸ್ಕೂಲ್ ಗೆ ಚಕ್ಕರ್ ಹಾಕಿ ಸಿನಿಮಾಗೆ ಹೋದ್ರೆ ಈಗಿನ ಮಕ್ಕಳು ಡ್ರಗ್ ಸೇವೆನೆ ಮಾಡ್ತಾರೆ. ಬುದ್ದಿವಂತರು, ವಿದ್ಯಾವಂತರು ಮತ್ತೊಮ್ಮೆ ಒಕ್ಕೊರಲಿನಿಂದ ಕೂಗಿದ್ರೆ ಮಕ್ಕಳ ಜೀವ ಉಳಿಸುವ ಕೆಲಸ ಆಗತ್ತೆ' ಎಂದಿದ್ದಾರೆ.
ಪುನೀತ್ ಹುಟ್ಟೋ ಮೊದಲೇ ಬಿ ಸರೋಜಾದೇವಿ ಹೇಳಿದ್ರಂತೆ ಪವರ್ ಸ್ಟಾರ್ ಬರೋದನ್ನ!
'ಟೈಡಲ್ ಮಾತ್ರೆ ಎಷ್ಟು ಪರಿಣಾಮಕಾರಿ ಅಂದ್ರೆ 26-27 ವರ್ಷಕ್ಕೆ ಇಬ್ಬರು ಹೆಣ್ಣು ಮಕ್ಕಳು ತೀರಿ ಹೋಗಿದ್ದಾರೆ. ಎಲ್ಲಾ ಮೆಡಿಕಲ್ ಶಾಪ್ ಗಳು ಮಾಡಲ್ಲ, ಕೆಲವು ಮೆಡಿಕಲ್ ಶಾಪ್ ಗಳು ಮಾತ್ರ ಮಾರಾಟ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರನ್ನ ಬೆಂಡೆತ್ತುವ ಕೆಲಸ ಆಗಬೇಕು. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು' ಎಂದಿದ್ದಾರೆ 'ಭೀಮ' ಚಿತ್ರದ ಸೃಷ್ಟಿಕರ್ತ ನಟ ದುನಿಯಾ ವಿಜಯ್.