ಅದ್ಧೂರಿಯಾಗಿ ರಿಲೀಸ್ ಆಯ್ತು ಭೈರತಿ ರಣಗಲ್ ಸಿನಿಮಾ. ಶಿವಣ್ಣ ಆಕ್ಟಿಂಗ್ ಮೆಚ್ಚಿಕೊಂಡಾಡಿದ ನೆಟ್ಟಿಗರು....
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಅದ್ಧೂರಿಯಾಗಿ 365ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್ ನಟನೆಯ ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರವನ್ನು ಸೃಷ್ಟಿ ಮಾಡಲಾಗಿತ್ತು.ಸೆಕೆಂಡ್ ಹಾಫ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟರೂ ಪಾತ್ರ ಬಿಗ್ ಇಂಪ್ಯಾಕ್ಟ್ ಮಾಡಿತ್ತು ಹೀಗಾಗಿ ಇದೇ ಪಾತ್ರವನ್ನು ಹಿಡಿದು ಬೈರತಿ ಯಾರು ? ಹಿಂದಿನ ಕಥೆ ಏನು? ವೈಲೆಂಟ್ ಆಗಿದ್ದು ಯಾಕೆ ಎಂದು ಪ್ರತಿಯೊಂದನ್ನು ಈ ಪ್ರೀಕ್ವೆಲ್‌ನಲ್ಲಿ ತೋರಿಸಲಾಗಿದೆ.
ನರ್ತನ್ ಆಕ್ಷನ್ ಕಟ್ ಹೇಳಿರುವ ಬೈರತಿ ರಣಗಲ್ ಚಿತ್ರಕ್ಕೆ ಗೀತಾ ಪಿಕ್ಚರ್ಸ್‌ನ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಶಿವಣ್ಣ ಫಸ್ಟ್ ಲುಕ್, ಟೈಟಲ್ ಪೋಸ್ಟರ್, ಸಾಂಗ್ ರಿಲೀಸ್, ಟೀಸರ್, ಟ್ರೈಲರ್‌ಯಿಂದ ಹಿಡಿದು ಪ್ರತಿಯೊಂದರಲ್ಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿತ್ತು. ಫಸ್ಟ್ ಡೇ ಫಸ್ಟ್ ಫ್ಯಾನ್ ಶೋದಲ್ಲಿ ಶಿವಣ್ಣ ಎಂಟ್ರಿಗೆ ಆರತಿ ಬೆಳಗಿ ಪಟಾಕಿ ಹೊಡೆದು ಹಾಲಿನ ಅಭಿಷೇಕ ಮಾಡಿದ್ದಾರೆ. ಇನ್ನು ಶಿವಣ್ಣನಿಗೆ ಕಾಂಪಿಟೇಷನ್ ಕೊಡಲು ಯಾರೂ ಎದುರು ಬರುವುದಿಲ್ಲ ಎಂದು ಟ್ವಿಟರ್ ರಿವ್ಯೂದಲ್ಲಿ ತಿಳಿದು ಬರುತ್ತದೆ.
undefined
ಲಾರಿ ಡ್ರೈವರ್ ತಂದೆಯನ್ನು ಕಳೆದುಕೊಂಡ ತ್ರಿವಿಕ್ರಮ್, ಕಾಲಿಗೆ ಪೆಟ್ಟು ಬಿದ್ದ ಕೆಲಸ ಹೋಯ್ತು
ನರ್ತನ್ ಕೆಲಸ ಅದ್ಭುತ:
'ಭೈರತಿ ರಣಗಲ್ ಪರ್ಫೆಕ್ಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಫಸ್ಟ್ ಹಾಫ್ ಬ್ಲಾಕ್ ಬಸ್ಟರ್ ಹಿಟ್, ಸೆಕೆಂಡ್ ಹಾಫ್ ಡೀಸೆಂಟ್ ಆಗಿದೆ. ನರ್ತನ್ ಅದ್ಭುತ ಕೆಲಸ ಮಾಡಿದ್ದಾರೆ. ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ನಮ್ಮ ಆಶ್ಚರ್ಯಕ್ಕೆ ರವಿ ಬಸರೂರ್ ಸಂಗೀತ ಜೋರಾಗಿ ಇರಲಿಲ್ಲ, ಒಳ್ಳೆ ಸಂಗೀತ ನೀಡಿದ್ದಾರೆ. ನರ್ತನ್ ಗೆದ್ದಿದ್ದಾನೆ.
ನನ್ನಂಥ ಶತಮೂರ್ಖ ಇನ್ನೊಬ್ಬ ಇಲ್ಲ, ಎಕ್ಕಡ ತಗೊಂಡು ಹೊಡ್ಕೋಬೇಕು
ಡ್ರಾಮಾ- ಎಮೋಷನ್:
ಭೈರತಿ ರಣಗಲ್ ಚಿತ್ರ ಒಂದು ಸಿನಿಮಾಟಿಕ್ ಟ್ರೀಟ್. ಪ್ರತಿ ದೃಶ್ಯದಲ್ಲೂ ಡ್ರಾಮಾ ಮತ್ತು ಎಮೋಷನ್ ಇದೆ. ಕಥೆ ಹೇಳುವ ಶೈಲಿ, ಆಕ್ಷನ್ ಮತ್ತು ಆಕ್ಟಿಂಗ್...ಪ್ರತಿಯೊಂದು ಪರ್ಫೆಕ್ಟ್ ಆಗಿದೆ. ದಯವಿಟ್ಟು ಮಾಸ್ಟರ್‌ಪೀಸ್ ಮಿಸ್ ಮಾಡ್ಬೇಡಿ.
ರೋಮಾಂಚನ!
ಭೈರತಿ ರಣಗಲ್ ಸಿನಿಮಾ ಫಸ್ಟ್ ಹಾಸ್ ಕಂಪ್ಲೀಟ್ ಆಗಿದೆ...ಏನ್ ಸಿನಿಮಾ ಗುರು ಇದು ಮೈ ಚುಂಮ್ ಅನಿಸಿಬಿಡುತ್ತದೆ ಹೊರ ಬಂದ ಮೇಲೂ ಮೈ ಜುಂ ಅನುತ್ತಿದ್ದೆ. 1 ವಾರ ಆದರೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇಂಟರ್ವಲ್‌ನಲ್ಲಿದೆ ಮ್ಯಾಟರ್:
ಭೈರತಿ ರಣಗಲ್ ಸಿನಿಮಾದ ಇಂಟರ್‌ವಲ್‌ನ ಮಿಸ್ ಮಾಡಬೇಡಿ. ಸಿನಿಮಾ ಸೂಪರ್ ಆಗಿ ಬರೆದಿದ್ದಾರೆ, ಡಿಓಪಿಗೆ ನನ್ನ ಮನಸ್ಸು. ಕ್ಲಾಸ್ ಮಾಸ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ 100% ತೃಪ್ತಿ ಸಿಗುತ್ತದೆ. ನರ್ಥನ್ ಶ್ರಮ ಮೆಚ್ಚಬೇಕು.