ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ನಂಟು ಜೋರಾಗಿಯೇ ಇದೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ, ಅಲ್ಲಿನ ಹಲವು ಸೆಲೆಬ್ರಟಿಗಳ ಜೊತೆ ಹಾಗು ಶೋದಲ್ಲಿ ನಟ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಈ ಕನ್ನಡದ ಸುದೀಪ್ ಒಳ್ಳೆಯ ಕ್ರಿಕೆಟರ್...
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ (The Great Indian Kapil Show) ಯಾರಿಗೆ ಗೊತ್ತಿಲ್ಲ? ಇಂಡಿಯಾದ ಈ ಶೋ ಜಗತ್ತಿನ ಜನರಿಗೆಲ್ಲ ಗೊತ್ತು ಎಂಬಷ್ಟು ಫೇಮಸ್ ಆಗಿದೆ. ಅಲ್ಲಿ ಹೋದ ಸೆಲೆಬ್ರಿಟಿಗಳು ಏನಾದ್ರೂ ಹೇಳಿದ್ರೆ, ಅದು ಕ್ಷಣ ಮಾತ್ರದಲ್ಲಿ ಪ್ರಪಂಚ ಪರ್ಯಟನೆ ಮಾಡೋದು ಪಕ್ಕಾ ಎಂಬಷ್ಟು ಖ್ಯಾತಿ ಪಡೆದಿದೆ ಈ ಶೋ. ಇದೀಗ ಕಿಚ್ಚ ಸುದೀಪ್ ಈ ಶೋದಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೇನೆಂದು ನೋಡಿ..
ಹೌದು, ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಹಿಂದಿ ಚಿತ್ರರಂಗ ಬಾಲಿವುಡ್ ನಂಟು ಜೋರಾಗಿಯೇ ಇದೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುವುದು ಮಾತ್ರವಲ್ಲ, ಅಲ್ಲಿನ ಹಲವು ಸೆಲೆಬ್ರಟಿಗಳ ಜೊತೆ ಹಾಗು ಶೋದಲ್ಲಿ ನಟ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಈ ಕನ್ನಡದ ಸುದೀಪ್ ಒಳ್ಳೆಯ ಕ್ರಿಕೆಟರ್ ಎಂಬುದು ಸಿಸಿಎಲ್ ಪ್ರಿಯರೂ ಸೇರಿದಂತೆ ಬಹುತೇಕರಿಗೆ ಗೊತ್ತು. ಈಗಲೂ ಸುದೀಪ್ ಹಲವಾರು ಸೆಲೆಬ್ರಿಟಿ ಕ್ರಿಕೆಟ್ ಮ್ಯಾಚ್‌ಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ.
undefined
ದರ್ಶನ್-ಉಪೇಂದ್ರ ಜೋಡಿ 'ಕಪಾಲಿ' ಚಿತ್ರ ಸದ್ಯದಲ್ಲೇ ಶುರು; ಈ ಶುಭ ಸುದ್ದಿಗೆ ಬೆಚ್ಚಿಬಿದ್ದ ಕರುನಾಡು!
ಅದಿರಲಿ, ಈಗ ಹರಡುತ್ತಿರುವ ಸುದ್ದಿ ಅಂತಿಂಥದ್ದಲ್ಲ ನೋಡಿ. ಭಾರತದ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿದ್ದು (Cricketer Navjot Singh Sidhu) ಅವರ ಮುಂದೆ ಸ್ವತಃ ನಟ ಕಿಚ್ಚ ಸುದೀಪ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ಇಷ್ಟು ವರ್ಷಗಳಾದರೂ ಅದನ್ನು ನೆಪಿಟ್ಟುಕೊಂಡು ಹೇಳಿದ್ದಾರೆ ಸುದೀಪ್, ಹಾಗೂ ಕೇಳಿಸಿಕೊಂಡ ಸಿದ್ದು ಕೂಡ ಅದನ್ನು ಹೌದು ಅಂತ ನೆನಪಿಸಿಕೊಂಡಿದ್ದಾರೆ. ಹೇಳಿದ ವಿಷಯ ಏನೆಂದರೆ, ಅದನ್ನು ಸುದೀಪ್ ಅವರ ಮಾತಿನಲ್ಲೇ ಕೇಳಿ, ಅದೇ ಬೇಟರ್. ಓವರ್ ಟು ಕಿಚ್ಚ ಸುದೀಪ್..
'ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ (World Cup) ಸಲುವಾಗಿ ನವಜೋತ್ ಸಿಂಗ್ ಸಿದ್ದು ಅವರು ಬೆಂಗಳೂರಿಗೆ ಬಂದಿದ್ದರು. ಆಗ ಗಲ್ಲಿ ಬಾಯ್ ಅಗಿ ನಾನು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಅದನ್ನು ನೋಡಲು ಸ್ಟೇಡಿಯಂನಲ್ಲಿ 'ಬಾಲ್ ಬಾಯ್' ಆಗಿದ್ದೆ. ಸಿದ್ದು ಜೀ ಅವರು ಒಂದು ಬ್ಯಾಟ್ ಯೂಸ್ ಮಾಡ್ತಾ ಇದ್ರು. ಅದರ ಮೇಲೆ 'ಪವರ್' ಅಂತ ಬರೆದಿರೋ ಒಂದು ಸ್ಟಿಕ್ಕರ್ ಇತ್ತು..' ಎನ್ನುತ್ತಿದ್ದಂತೆ ಅಲ್ಲೇ ಇದ್ದು ಸಿದ್ದು ಅವರು 'ಯೆಸ್, ಪವರ್ ಸ್ಟಿಕ್ಕರ್ ಇದ್ದ ಬ್ಯಾಟ್ ನೆನಪಾಯ್ತು.. ಅದು ನಾನು ಮೊಟ್ಟಮೊದಲು ಉಪಯೋಗಿಸುತ್ತಿದ್ದ ಸ್ಟಿಕ್ಕರ್..'ಎಂದಿದ್ದಾರೆ ಸಿದ್ದು.
ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?
ಬಳಿಕ ಸುದೀಪ್, ಅಂದು ಅವರು ನನಗೆ ಆ ಬ್ಯಾಟನ್ನು ಗಿಫ್ಟ್ ಆಗಿ ಕೊಟ್ಟಿದ್ರು. ಆದರೆ, ಆವತ್ತು ನನಗೆ ಗೊತ್ತಿರಲಿಲ್ಲ, ಮುಂದೊಂದು ದಿನ ಈ ಲೆಜೆಂಡ್ ಜೊತೆ ನಾನು ಇರುತ್ತೇನೆ, ನಾವಿಬ್ಬರೂ ಒಂದೇ ವೇದಿಕೆಯಲ್ಲಿ ಪರಸ್ಪರ ಎದುರಾಗಿ ಕುಳಿತಿರುತ್ತೇವೆ ಅಂತ'' ಎನ್ನುತ್ತಿದ್ದಂತೆ ಸಿದ್ದು ಅವರು ಮಾತನಾಡಿದ್ದಾರೆ. ಅದಕ್ಕೆ ಸಿದ್ದು ಅವರು, ಅರೇ, ಬಾಪರೇ.. ನನ್ನ ತಾಯಿ ಯಾವತ್ತೂ ಹೇಳ್ತಾ ಇದ್ರು.. ಒಳ್ಳೆಯತನ ಯಾವತ್ತೂ ಸಾಯೋದಿಲ್ಲ, ಅದು ನೂರು ಪಟ್ಟು ಹೆಚ್ಚಾಗಿ ಮತ್ತೆ ನಮ್ಮ ಬಳಿಗೇ ಖಂಡಿತ ಬರುತ್ತೆ ಅಂತ..
ಇಂದು ನೀವು ನನಗೆ ಕೊಟ್ಟಿರುವ ಗಿಫ್ಟ್ ಇದ್ಯಲ್ಲ ಇದು, ಜಗತ್ತಿನಲ್ಲಿ ಯಾವುದೇ ವ್ಯಕ್ತಿ ಇದನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ..' ಎಂದಿದ್ದಾರೆ. ಇಬ್ಬರೂ ಪರಸ್ಪರ ಅಭಿನಂದನೆಗಳನ್ನು ವಿನಿಮಯ ಮಾಡಿಕೊಳ್ಳು ಅಲ್ಲಿದ್ದವರು ಅದಕ್ಕೆ ಭಾರೀ ಚಪ್ಪಾಳೆ ಮೆರಗು ನೀಡಿದ್ದಾರೆ. ಇಬ್ಬರೂ 'ಲವ್ ಯೂ, ಲವ್ ಯೂ' ಹೇಳಿಕೊಂಡು ಆ ಘಟನೆಯನ್ನು ಇದೀಗ ಬಹಳ ವರ್ಷಗಳ ಬಳಿಕ ಜಗತ್ತಿನ ಮುಂದೆ ಬಹಿರಂಗ ಗೊಳಿಸಿದ್ದಾರೆ. ಈ ಸಂಗತಿಯೀಗ ವಿಶ್ವವನ್ನೇ ಸುತ್ತಾಡುತ್ತಿದೆ!
ಶಾರುಖ್ ಜೊತೆಗಿರುವ ಐಶ್ ವಿಡಿಯೋ ವೈರಲ್; ಈ ಪಂಚರಂಗಿ ಆಟ ಸಾಕು ಅಂತಿರೋ ನೆಟ್ಟಿಗರು!