ಬೈರತಿ ರಣಗಲ್: 'ಮಫ್ತಿ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ; ಹ್ಯಾಟ್ರಿಕ್ ಹೀರೋ ಪಾತ್ರ ನೆಗೆಟಿವ್ or ಪಾಸಿಟಿವ್?

Published : May 26, 2023, 05:09 PM IST
ಬೈರತಿ ರಣಗಲ್: 'ಮಫ್ತಿ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ; ಹ್ಯಾಟ್ರಿಕ್ ಹೀರೋ ಪಾತ್ರ ನೆಗೆಟಿವ್ or ಪಾಸಿಟಿವ್?

ಸಾರಾಂಶ

ಶಿವರಾಜ್ ಕುಮಾರ್ ನಟನೆಯ ಬೈರತಿ ರಣಗಲ್ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಹ್ಯಾಟ್ರಿಕ್ ಹೀರೋಗೆ ನಿರ್ದೇಶಕ ನರ್ತನ್ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

'ಬೈರತಿ ರಣಗಲ್' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಿನಿಮಾ. ಸುಮಾರು 6 ವರ್ಷಗಳಿಂದ ಶಿವಣ್ಣ ಅಭಿಮಾನಿಗಳು ಬೈರತಿ ರಣಗಲ್ ದರ್ಶನಕ್ಕೆ ಎದುರು ನೋಡುತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆ ಈಡೇರಿದೆ. ಅಂದಹಾಗೆ 'ಬೈರತಿ ರಣಗಲ್' ಇದು ಸೂಪರ್ ಹಿಟ್ ಮಫ್ತಿ ಸಿನಿಮಾದ ಪ್ರಿಕ್ವೆಲ್. ಬೈರತಿ ರಣಗಲ್ ಹಿನ್ನಲೆ ಏನು, ಡಾನ್ ಆಗಿದ್ದು ಹೇಗೆ ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ ನಿರ್ದೇಶಕ ನರ್ತನ್. ಈ ಸಿನಿಮಾಗೆ ಗೀತಾ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. 

ಅಂದಹಾಗೆ ಇಂದು (ಮೇ 26) ಬೈರತಿ ರಣಗಲ್ ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ಮಾಪಕ ಕೆಪಿ ಶ್ರೀಕಾಂತ್, ಕಾರ್ತಿಕ್ ಗೌಡ, ಗೀತಾ ಶಿವರಾಜ್ ಕುಮಾರ್, ನಿರ್ದೇಶಕ ನರ್ತನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಶಿವರಾಜ್ ಕುಮಾರ್ ಬೈರತಿ ರಣಗಲ್ ಲುಕ್‌ನಲ್ಲಿ ಅಂದರೆ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. 2017ರಲ್ಲಿ ಒಂದಿದ್ದ 'ಮಫ್ತಿ' ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಶಿವಣ್ಣ ಮಾಡಿದ್ದ 'ಬೈರತಿ ರಣಗಲ್' ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ಪಾತ್ರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗ್ತಿದೆ.

ಜೂನ್ 10ಕ್ಕೆ ಶೂಟಿಂಗ್ 

ಬೈರತಿ ರಣಗಲ್ ಜೂನ್ 10ರ ಹಾಗೆ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ನಿರ್ದೇಶಕ ನರ್ತನ್ ಬಹಿರಂಗ ಪಡಿಸಿದರು. ಶಿವಣ್ಣ ಸದ್ಯ ಘೋಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಆ ಸಿನಿಮಾದ ಶೂಟಿಂಗ್ ನೋಡಿಕೊಂಡು ಆರಂಭವಾಗಲಿದೆ ಎಂದು ನರ್ತನ್ ಬಹಿರಂಗ ಪಡಿಸಿದರು. ಬಳ್ಳಾರಿ ಮತ್ತು ಮೈಸೂರಿನಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿದೆ ಸಿನಿಮಾತಂಡ.

ಹೊಸಪೇಟೆಯ ಅನ್ನಪೂರ್ಣೇಶ್ವರಿ ಶಾಲೆ ದತ್ತು ಪಡೆದ ಗೀತಾ ಶಿವರಾಜ್‌ಕುಮಾರ್!

ಮಫ್ತಿ ಪ್ರಿಕ್ವೆಲ್ 

ಬೈರತಿ ರಣಗಲ್ ಬ್ಲಾಕ್‌ಬಸ್ಟರ್ ಹಿಟ್ ಮಫ್ತಿ ಸಿನಿಮಾದ ಪ್ರಿಕ್ವೆಲ್ ಆಗಿದೆ. ಬೈರತಿ ರಣಗಲ್ ಯಾಕೆ ಆದರೂ, ಹೇಗೆ ಆದರೂ ಎನ್ನುವ ಕಥೆ ಶುರುವಾಗುತ್ತೆ ಎಂದು ನರ್ತನ್ ಬಹಿರಂಗ ಪಡಿಸಿದರು. ಮಫ್ತಿ ಸಿನಿಮಾದಲ್ಲಿ ಬೈರತಿ ರಣಗಲ್ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮಫ್ತಿ ರಿಲೀಸ್ ಆಗಿ 6 ತಿಂಗಳಿಗೆ ಕಥೆ ರೆಡಿಯಾಗಿತ್ತು ಇಲ್ಲಿವರೆಗೂ ಬಂದಿದೆ ಎಂದು ಹೇಳಿದರು. 

ಶಿವಣ್ಣ ಇಲ್ಲಿ ನೆಗೆಟಿವ್ ಅಥವಾ ಪಾಸಿಟಿವ್?

ಮಫ್ತಿ ಸಿನಿಮಾದಲ್ಲಿ ಶಿವಣ್ಣ ನೆಗೆಟಿವ್ ಶೇಡ್ ಕೂಡ ಇತ್ತು. ಒಳ್ಳೆಯ ವ್ಯಕ್ತಿ ಆದರೆ ರಾಕ್ಷಸ ಆಗಿ ಬದಲಾಗಿದ್ದಾನೆ ಎನ್ನುವ ಕಥೆ ಇತ್ತು. ಬೈರತಿ ರಣಗಲ್ ಸಿನಿಮಾದಲ್ಲೂ ಶಿವಣ್ಣ ಅವರದ್ದೂ ಎರಡು ಶೇಡ್ ಇರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬರುತ್ತಾ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವುದಾಗಿ ನರ್ತನ್ ಬಹಿರಂಗ ಪಡಿಸಿದರು. ಜೈಲರ್‌ ಗ್ಲಿಂಫ್ಸ್‌ಗೆ ಫ್ಯಾನ್ಸ್‌

ಫಿದಾ: ರಜನಿಕಾಂತ್‌, ಶಿವಣ್ಣ, ಮೋಹನ್‌ಲಾಲ್‌ ಖಡಕ್‌ ಲುಕ್‌ ರಿವಿಲ್‌

ಈ ಸಿನಿಮಾ ತಡವಾಗಿದ್ದೇಕೆ?

ಮಫ್ತಿ ಸಿನಿಮಾ ರಿಲೀಸ್ ಆಗಿ 6 ವರ್ಷಗಳಾಗಿದೆ. 6 ವರ್ಷಗಳ ಬಳಿಕ ಸೀಕ್ವೆಲ್ ಬರ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನರ್ತನ್, ಕೆಲವು ಸಹ ಹಾಗೆ ಆಗುತ್ತೆ ಏನ್ ಮಾಡೋಕು ಆಗಲ್ಲ. ಬೇಗ ಮಾಡಿದ್ರೆ ವ್ಯಾಲ್ಯೂ ಇರಲ್ಲ ಹಾಗಾಗಿ ನಿಧಾನಕ್ಕೆ ಮಾಡಬೇಕು ಎಂದು ನರ್ತನ್ ಹೇಳಿದರು. ಇನ್ನೂ ಈ ಸಿನಿಮಾದ ಬಗ್ಗೆ, ಉಳಿದ ಪಾತ್ರವರ್ಗದ ಬಗ್ಗೆ, ನಾಯಕಿ ಯಾರು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ಹೇಳಿದರು ನಿರ್ದೇಶಕ ನರ್ತನ್. 

   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?