ತಮಿಳು ಧಾರಾವಾಹಿಯಲ್ಲಿ ನಟಿ ರಚಿತಾ ರಾಮ್ ಸಹೋದರಿ; ಗರಂ ಆದ ಕನ್ನಡಿಗರು!

By Vaishnavi ChandrashekarFirst Published May 26, 2023, 5:09 PM IST
Highlights

ತಮಿಳು ಧಾರಾವಾಹಿ ಸಹಿ ಮಾಡಿದ ನಿತ್ಯಾ ರಾಮ್. ಕನ್ನಡ ಸಿನಿಮಾ ಮಾಡಬೇಕು ಎಂದು ಡಿಮ್ಯಾಂಡ್ ಮಾಡುತ್ತಿರುವ ರಚ್ಚು...
 

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿ ಪ್ರಪಂಚಕ್ಕೆ ಗುಡ್ ಬೈ ಹೇಳಿ ವಿದೇಶದಲ್ಲಿ ವಾಸಿಸುತ್ತಿದ್ದರು. ಹಲವು ವರ್ಷಗಳ ಬ್ರೇಕ್ ನಂತರ ತಮಿಳು ಜನಪ್ರಿಯ ಸೀರಿಯಲ್ ಅಣ್ಣ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪತಿ ಗೌತಮ್ ಕೂಡ ಸಖತ್ ಸಪೋರ್ಟ್‌ ಮಾಡುತ್ತಾರೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

'ನಾಲ್ಕು ವರ್ಷಗಳ ಕಾಲ ದೂರ ಉಳಿದುಬಿಟ್ಟೆ..ನಟನೆಯಲ್ಲಿ ನಾಲ್ಕು ವರ್ಷ ಹೆಚ್ಚು. ಈ ಪ್ರಾಜೆಕ್ಟ್‌ ಸಹಿ ಮಾಡುವ ಮುನ್ನ ತುಂಬಾ ಯೋಚನೆ ಮಾಡಿರುವೆ ಏಕೆಂದರೆ ಕ್ಯಾಮೆರಾ ನೋಡಿದಾಗ ನಾನೇ ಹೇಗೆ ರಿಯಾಕ್ಟ್‌ ಮಾಡುವೆ ಎಂದು ಗೊತ್ತಿಲ್ಲ. ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗೆ ಆಯ್ತು. ಒಂದು ಸಲ ಕ್ಯಾಮೆರಾ ಆನ್ ಆದ್ಮೇಲೆ ನನ್ನ ಎನರ್ಜಿ ಹೆಚ್ಚಿತ್ತು. ಧಾರಾವಾಹಿ ಪ್ರೋಮೋ ರಿಲೀಸ್ ಆದ್ಮೇಲೆ ನನ್ನ ಧೈರ್ಯ ಹೆಚ್ಚಾಗಿತ್ತು. ಮದುವೆ ಆದ್ಮೇಲೆ ನನ್ನ ಲೈಫ್‌ ಅಷ್ಟು ಬದಲಾಗಿಲ್ಲ' ಎಂದು ನಿತ್ಯಾ ಟೈಮ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಮೂರು ತಿಂಗಳ ನಂತರ ಪತಿಗೆ ಜೊತೆಯಾದ Nitya Ram!

'ಕೆಲವು ಫ್ಯಾಮಿಲಿಗಳ ಪ್ರಕಾರ ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕು ಆಗ ಅವರ ಜವಾಬ್ದಾರಿಗಳು ಕಳೆಯುತ್ತದೆ ಅಂದುಕೊಳ್ಳುತ್ತಾರೆ. ನನ್ನ ಕ್ಯಾರೆಕ್ಟರ್‌ ಕೂಡ ಅದೇ ರೀತಿ ಬೆಳೆಯುತ್ತದೆ ಆದರೆ ನಾನು ಡಾಕ್ಟರ್ ಆಗಿ ಜೀವನದಲ್ಲಿ ಬೆಳೆಯುವೆ. ಸಹೋದರನ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತಾಳೆ. ಹೆಣ್ಣು ಮಕ್ಕಳು ಕೂಡ ಸಾಧನೆ ಮಾಡುವ ಗುರಿ ಇಟ್ಟುಕೊಂಡಿರುತ್ತಾರೆ ಕೆಲಸ ಮತ್ತು ಮನೆ ಎರಡನ್ನೂ ಸಮವಾಗಿ ನಿಭಾಯಿಸುತ್ತಾರೆ ಎಂದು ಜನರಿಗೆ ತೋರಿಸಿ ಕೊಡುವ ಪಾತ್ರವಿದು' ಎಂದು ನಿತ್ಯಾ ಹೇಳಿದ್ದಾರೆ. 

ನಿತ್ಯಾ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ರಚಿತಾ ರಾಮ್ ಆಸೆ ಅಂತೆ. 'ಅನೇಕರಿಗೆ ಗೊತ್ತಿಲ್ಲ ನಾನು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿರುವೆ ಎಂದು. ಬರುತ್ತಿದ್ದಂತೆ ಆಡಿಷನ್ ಕೊಟ್ಟು ನನ್ನ ತಮಿಳು ಸೀರಿಯಲ್ ಆರಂಭಿಸಿದೆ. ಒಳ್ಳೆ ಒಳ್ಳೆ ಪಾತ್ರಗಳು ಕಥೆಗಳು ಸಿಕ್ಕರೆ ಖಂಡಿತಾ ನಾನು ಸಿನಿಮಾ ಮಾಡುವೆ' ಎಂದಿದ್ದಾರೆ ನಿತ್ಯಾ. 

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ರಚಿತಾ ರಾಮ್ ಅಕ್ಕ!

ನಿತ್ಯಾ ರಾಮ್ ಬೆಂಗಳೂರಿಗೆ ಬಂದಾಗ ರಚಿತಾ ರಾಮ್ ಪೋಸ್ಟ್‌ ಹಾಕುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ. ರಚಿತಾಗೂ ಮುನ್ನ ಬಣ್ಣದ ಜರ್ನಿ ಆರಂಭಿಸಿದ್ದು ನಿತ್ಯಾ. ನಿತ್ಯಾ ಈಗಾಗಲೆ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿ ಆನಂತರ ತಮಿಳು ಕಿರುತೆರೆಗೆ ಕಾಲಿಟ್ಟಿದ್ದು. ರಚಿತಾ ಕನ್ನಡಿತಿಯಾಗಿ ಕನ್ನಡ ಸಿನಿಮಾ ಮಾಡುತ್ತಿರುವಾಗ ಸಹೋದರಿ ಯಾಕೆ ತಮಿಳು ಮಾಡಬೇಕು ಅನ್ನೋದು ನೆಟ್ಟಿಗರ ಅಭಿಪ್ರಾಯ. 'ಕನ್ನಡಿಗರು ತಮಿಳು ತಮಿಳು ಅಂತ ಹೋದರೆ ನಮ್ಮ ಚಿತ್ರರಂಗದಲ್ಲಿ ಯಾರು ಉಳಿಯುತ್ತಾರೆ? ಮೊದಲು ಕನ್ನಡದಲ್ಲಿ ನಟಿಸಿ' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

click me!