
ನಟ ಶಿವರಾಜ್ ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟು 37 ವರ್ಷಗಳು ಕಳೆದಿವೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಮತ್ತು ರಂಜಿಸುತ್ತಿರುವ ಶಿವರಾಜ್ ಕುಮಾರ್ ಇಂದಿಗೂ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ. ಅದೇ ಚಾರ್ಮ್, ಅದೇ ಎನರ್ಜಿಯೊಂದಿಗೆ ಶಿವಣ್ಣ ಪ್ರತಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಯುವಕರೇ ನಾಚುವಂತ ಡಾನ್ಸ್, ಫೈಟಿಂಗ್ ಮಾಡುವ ಶಿವಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಶಿವಣ್ಣ 37 ವರ್ಷ ಪೂರೈಸಿದ ಈ ಸಮಯದಲ್ಲಿ ಹೃದಯಸ್ಪರ್ಶಿ ಪತ್ರ ಹಂಚಿಕೊಂಡಿದ್ದಾರೆ. ಅಪಾರ ಪ್ರೀತಿ, ಅಭಿಮಾನ ತೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಆನಂದ್ ಸಿನಿಮಾದಿಂದ ಪ್ರಾರಂಭವಾದ ಶಿವರಾಜ್ ಕುಮಾರ್ ಸಿನಿಮಾ ಪಯಣ ಇಂದಿಗೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ 37 ವರ್ಷಗಳಲ್ಲಿ 125 ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚಿಗಷ್ಟೆ ಶಿವಣ್ಣ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. 125ನೇ ಸಿನಿಮಾ ಕೂಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 1986ರ ಫೆಬ್ರವರಿ 19ರಂದು ಡಾ.ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು. ಮೊದಲ ಸಿನಿಮಾನೇ ಸೂಪರ್ ಹಿಟ್. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಹೃದಯ ಗೆದ್ದ ಶಿವಣ್ಣ ಬಳಿಕ ಹಿಂದೆ ತಿರುಗಿ ನೋಡಿದ್ದೆ ಇಲ್ಲ.
37 ವರ್ಷಗಳು, 125 ಸಿನಿಮಾಗಳಲ್ಲಿ ಅನೇಕ ಚಿತ್ರಗಳು ಸೂಪರ್ ಹಿಟ್. ಹ್ಯಾಟ್ರಿಕ್ ಹಿಟ್ ನೀಡುವ ಮೂಲಕ ಹ್ಯಾಟ್ರಿಕ್ ಹೀರೋ ಆಗಿಯೇ ಖ್ಯಾತಿಗಳಿಸಿದರು ಶಿವಣ್ಣ. ಶಿವಣ್ಣ ನಟನೆಯ ಸೂಪರ್ ಸಕ್ಸಸ್ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಆನಂದ್, ಓಂ, ಜೋಡಿ ಹಕ್ಕಿ, ನಮ್ಮೂರ ಮಂದಾರ ಹೂವೇ, ಜೋಗಿ, ಟಗರು ಹೀಗೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 60ನೇ ವಯಸ್ಸಿನಲ್ಲೂ ಶಿವರಾಜ್ ಅದೇ ಎನರ್ಜಿಯೊಂದಿಗೆ ಅಭಿಮಾನಿಗಳ ಮುಂದೆ ಬರ್ತಾರೆ. ಶಿವಣ್ಣ ಅವರನ್ನು ನೋಡುವುದೇ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ, ಸಂಭ್ರಮ.
ಮಂಗಳೂರಿನ ಪಿಲಿಕುಳದಲ್ಲಿ ರಜನಿಕಾಂತ್ 'ಜೈಲರ್' ಚಿತ್ರೀಕರಣ: ಪ್ರವೇಶ ನಿರ್ಬಂಧ!
ಶಿವಣ್ಣ ಪತ್ರ
37 ವರ್ಷ ಪೂರೈಸಿರುವ ಶಿವಣ್ಣ ಅಭಿಮಾನಿಗಳಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. 'ನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ 37 ವವರ್ಷಗಳು. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆನಂದ್ ಇಂದ ವೇದ ವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೇ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳು' ಎಂದು ಹೇಳಿದ್ದಾರೆ.
ಶಿವಣ್ಣ ಅವರ ಪ್ರೀತಿಯ, ಭಾವನಾತ್ಮಕ ಪತ್ರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ರಂಜಿಸಿದ್ದಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ. ಅದೇ ಎನರ್ಜಿ, ಅದೇ ಚಾರ್ಮಿ ಹಾಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Vedha Movie Success Meet: ಶಿವಣ್ಣ ನಿವಾಸದಲ್ಲಿ ವೇದ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್
ಶಿವಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಶಿವರಾತ್ರಿ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅನೇಕ ತಿಂಗಳಿಂದ್ಅಭಿಮಾನಿಗಳು ಕಾಯುತ್ತಿದ್ದ ಆ ಸಿನಿಮಾ ಕೊನೆಗೂ ಅನೌನ್ಸ್ ಆಗಿದೆ. ಅದೇ ಬೈರತಿ ರಣಗಲ್. ಮಫ್ತಿ ಖ್ಯಾತಿಯ ನರ್ತನ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಶ್ರೀನಿ ನಿರ್ದೇಶನದ ಘೋಸ್ಟ್, ನೀ ಸಿಗೊವರೆಗೂ ಹಾಗು ಇನ್ನೂ ಹೆಸರಿಡದ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಜೊತೆಗೆ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.