ರಿಷಿಕಾ ಸಿಂಗ್ ಮದುವೆ ಕ್ಯಾನ್ಸಲ್; ಮಾಧ್ಯಮಗಳಿಂದ ಸೇಫ್ ಆಗಲು ಕಿಚ್ಚ ಸುದೀಪ್ ಸಹಾಯ ಪಡೆದ ನಟಿ

Published : Feb 20, 2023, 04:25 PM IST
ರಿಷಿಕಾ ಸಿಂಗ್ ಮದುವೆ ಕ್ಯಾನ್ಸಲ್; ಮಾಧ್ಯಮಗಳಿಂದ ಸೇಫ್ ಆಗಲು ಕಿಚ್ಚ ಸುದೀಪ್ ಸಹಾಯ ಪಡೆದ ನಟಿ

ಸಾರಾಂಶ

ಪ್ರೀತಿಸಿದ ಹುಡುಗನ ಜೊತೆ ರಿಷಿಕಾ ಸಿಂಗ್ ಮದುವೆ. ಕ್ಯಾನ್ಸಲ್ ಮಾಡಲು ಕಾರಣವೇನು? ಸಹಾಯಕ್ಕೆ ನಿಂತ ಸುದೀಪ್‌ ಬಗ್ಗೆ ನಟಿ ಮಾತು.....

ಖ್ಯಾತ ನಿರ್ದೇಶನ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಪಾರ್ಟಿ ನಂತರ ಕಾರಿನಲ್ಲಿ ಪ್ರಯಾಣ ಮಾಡುವಾಗ ಅಪಘಾತವಾಗಿ ಬೆನ್ನು ಮೂಲೆ ಪೆಟ್ಟು ಮಾಡಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಕಾಲ ಬೆಡ್ ರೆಸ್ಟ್‌ನಲ್ಲಿದ್ದ ನಟಿ ಫಿಸಿಯೋಥೆರಪಿ ಮೂಲಕ ಓಡಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ತಮ್ಮ ಮದುವೆ ಮುರಿದು ಬೀಳಲು ಕಾರಣವೇನು ಎಂದು ಹಂಚಿಕೊಂಡಿದ್ದಾರೆ. ಅಲ್ಲದೆ ಸಹಾಯ ಮಾಡಿದ ಅಭಿನಯ ಚಕ್ರವರ್ತಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಹೌದು! 2013ರಲ್ಲಿ ಕೇರಳದ ಸಂದೀಪ್‌ ಎಂಬುವವರ ಜೊತೆ ರಿಷಿಕಾ ಸಿಂಗ್ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್ 21ರಂದು ನಿಶ್ಚಿತಾರ್ಥವಿತ್ತು ಏಪ್ರಿಲ್ 14ರಂದು ಮದುವೆ ಇತ್ತು. ಮದುವೆ ಸಂಪೂರ್ಣ ತಯಾರಿ ನಡೆದಿತ್ತು ಅಮಂತ್ರಣ ಹಂಚುವುದು ಉಳಿದಿತ್ತು ಅಷ್ಟರಲ್ಲಿ ರಿಷಿಕಾ ಮತ್ತು ಸಂದೀಪ್ ಮದುವೆ ಕ್ಯಾನ್ಸಲ್ ಮಾಡುತ್ತಾರೆ. ಕುಟುಂಬಸ್ಥರು ಮತ್ತು ಮಾಧ್ಯಮದವರು ಎಷ್ಟೇ ಪ್ರಶ್ನೆ ಮಾಡಿದ್ದರೂ ಮೌನವಾಗಿದ್ದ ರಿಷಿಕಾ ಸಿಂಗ್ ಸಹಾಯ ಕೇಳಿದ್ದು ಸುದೀಪ್ ಬಳಿ ಎಂದು ಇತ್ತೀಚಿಗೆ ನಡೆದ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಕುಡಿಯುವುದು ತಪ್ಪಲ್ಲ, ಬಾಟಲ್‌ ಓಪನ್ ಮಾಡಿಲ್ಲ ಅಂದ್ರೆ ಪಾರ್ಟಿನೇ ಅಲ್ಲ: ರಿಷಿಕಾ ಸಿಂಗ್

'ಮದುವೆ ಮುರಿದಿತ್ತು ನಾನು ಡಿಪ್ರೆಶನ್‌ನಲ್ಲಿದೆ ಸಂದೀಪ್ ಕೂಡ ಡಿಪ್ರೆಶನ್‌ನಲ್ಲಿದ್ದರು. ಮದುವೆ ಮುರಿಯಲು ಕಾರಣ ಏನು ಎಂದು ಯಾರೊಂದಿಗೂ ನಾನು ಹಂಚಿಕೊಂಡಿರಲಿಲ್ಲ. ಜನರು ಮತ್ತು ಮಾಧ್ಯಮದವರಿಂದ ದೂರ ಉಳಿಯಬೇಕು ಎಂದಾಗ ಸಹಾಯ ಕೇಳಿದ್ದು ಕಿಚ್ಚ ಸುದೀಪ್ ಸರ್ ಬಳಿ. ಆ ಸಮಯದಲ್ಲಿ ಯಾರ ಜೊತೆಗೂ ಮಾತನಾಡಲು ಮನಸ್ಸು ಇರಲಿಲ್ಲ. ಒಂದು ದಿನ ರಾತ್ರಿ ಫುಲ್ ಅಳುತ್ತಿದ್ದೆ. ನನ್ನ ಮನೆಯವರು ನನ್ನನ್ನು ಅರ್ಥ ಮಾಡಿಕೊಂಡಿರಲಿಲ್ಲ ಯಾರೂ ನನ್ನ ಸಹಾಯಕ್ಕೆ ಬರುತ್ತಿರಲಿಲ್ಲ. ಸಂದೀಪ್ ಮತ್ತು ನಾನು ಚೆನ್ನಾಗಿ ಗೊತ್ತಿರುವ ಕಾರಣ ಅಣ್ಣ ಆದಿತ್ಯ ಕೂಡ ನಮ್ಮ ಜೊತೆ ಮಾತು ಬಿಟ್ಟಿದ್ವಿ. ನನ್ನ ಮನೆಯವರಿಗೆ ಈ ಘಟನೆಯನ್ನು ಅರ್ಥ ಮಾಡಿಸಬೇಕು ಅಂದ್ರೆ ಮತ್ತೊಬ್ಬರಿಂದ ಹೇಳಿಸಬೇಕಿತ್ತು. ರಾತ್ರಿ ಸುಮಾರು 11 ಗಂಟೆಗೆ ಸುದೀಪ್‌ ಸರ್‌ಗೆ ಕರೆ ಮಾಡಿದೆ. ಸಾಮಾನ್ಯವಾಗಿ ಸುದೀಪ್ ಸರ್ ಬ್ಯುಸಿಯಾಗಿರುತ್ತಾರೆ ಕರೆ ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಆದರೆ ನಾನು ಕರೆ ಮಾಡಿದ ಎರಡನೇ ರಿಂಗ್‌ಗೆ ಕಾಲ್ ಪಿಕ್ ಮಾಡಿದ್ದರು' ಎಂದು ರಿಷಿಕಾ ಸಿಂಗ್ ಮಾತನಾಡಿದ್ದಾರೆ.

ಸೀಟ್‌ ಬೆಲ್ಟ್‌ ಹಾಕಿದ್ದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ: ತಂಗಿ ಬಗ್ಗೆ ಭಾವುಕರಾದ ನಟ ಆದಿತ್ಯ

'ನಾನು ರಿಷಿಕಾ ಎಂದು ಮಾತು ಆರಂಭಿಸಿದೆ ಏನು ಹೇಳಬೇಕು ಗೊತ್ತಾಗದ ಮೊದಲು ಅಳುವುದಕ್ಕೆ ಶುರು ಮಾಡಿದೆ ಸಂಪೂರ್ಣ ಘಟನೆ ವಿವರಿಸಿದೆ. ನನಗೆ ಮನೆಯಲ್ಲಿ ಇರಲು ಆಗುವುದಿಲ್ಲ ಬಿಗ್ ಬಾಸ್ ಮನೆಗೆ ಸೇರಿಸಿ ಇಲ್ಲ ಹಾಸ್ಟಲ್‌ಗೆ ಸೇರಿಸಿ ಅಥವಾ ಬೇರೆ ಊರಿಗೆ ಕಳುಹಿಸಿಕೊಡಿ ಬೆಂಗಳೂರಿನಲ್ಲಿ ಮಾತ್ರ ನಾನು ಇರುವುದಿಲ್ಲ. ನಮ್ಮ ಮನೆಯವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಚಾಡಿ ಹೇಳಿದೆ. ನನ್ನ ಮಾತುಗಳನ್ನು ಕೇಳಿಸಿಕೊಂಡು 5 ನಿಮಿಷಗಳ ಕಾಲ ಸುದೀಪ್ ಮೌನವಾಗಿದ್ದರು ಆನಂತರ ಬೆಳಗ್ಗೆ ರಾಘು ನಿಮಗೆ ಕಾಲ್ ಮಾಡಲು ಹೇಳುವೆ ಎಂದು. ಪವರ್ ಅವರ ಕೈಯಲ್ಲಿತ್ತು ಏಕೆಂದರೆ ಹಣ ಆಫರ್ ಮಾಡಲು ರೆಡಿಯಾಗಿದ್ದರೂ ಬಿಗ್ ಬಾಸ್ ಆಫರ್‌ ರಿಜೆಕ್ಟ್‌ ಮಾಡಿದೆ ಆದರೆ ಇದನ್ನು ಮನಸ್ಸಿನಲ್ಲಿ ಇಟ್ಟಿಕೊಳ್ಳದೆ ಸಹಾಯ ಮಾಡಿದರು. ನಿನ್ನ ಸಂಭಾವನೆ ಏನಿದೆ ಎಂದು ತಂಡದ ಜೊತೆ ಮಾತನಾಡಲು ಸುದೀಪ್ ಸರ್ ಹೇಳಿದರು' ಎಂದು ರಿಷಿಕಾ ಹೇಳಿದ್ದಾರೆ.

'ನನ್ನ ಕುಟುಂಬದ ಜೊತೆ ಮಾತನಾಡಿದರು, ನನಗೆ ಎಸ್ಕೇಪ್ ಸಿಗ್ತು ಆನಂತರ ಡಿಪ್ರೆಶನ್‌ಗೆ ಜಾರಿ ಕೆಲಸವಿಲ್ಲದ ಹಣ ಇರಲಿಲ್ಲ ಆಗ ಬಿಗ್ ಬಾಸ್ ಕೊಟ್ಟು ಸಹಾಯ ಮಾಡಿದರು.  ಒಂದು ಫೋನ್ ಕಾಲ್‌ನಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗ್ತು. ನನಗೆ ಇದ್ದ ಕೋಪ ಡಿಪ್ರೆಶನ್‌ ಎಲ್ಲನೂ ಬಿಗ್ ಬಾಸ್ ಮನೆಯಲ್ಲಿ ತೋರಿಸಿಕೊಂಡೆ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?