ಜನರು ಥಿಯೇಟರ್‌ ಒಳಗೆ ಬರಲಿಲ್ಲ, 'ಸೆಕ್ಸ್‌'ಸೇಷನ್‌ ಕಾಮೆಂಟ್‌ ಅಂತ ಮೆಸೇಜ್ ಮಾಡಿದ್ರು: ರವಿಚಂದ್ರನ್ ಸೋಲು-ಗೆಲುವಿನ ಸತ್ಯಗಳು

Published : Feb 20, 2023, 01:55 PM IST
ಜನರು ಥಿಯೇಟರ್‌ ಒಳಗೆ ಬರಲಿಲ್ಲ, 'ಸೆಕ್ಸ್‌'ಸೇಷನ್‌ ಕಾಮೆಂಟ್‌ ಅಂತ ಮೆಸೇಜ್ ಮಾಡಿದ್ರು: ರವಿಚಂದ್ರನ್ ಸೋಲು-ಗೆಲುವಿನ ಸತ್ಯಗಳು

ಸಾರಾಂಶ

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವೇದಿಕೆ ಮೇಲೆ ಟಾಕಿಂಗ್ ಟಾಮ್ ಪ್ರಶ್ನೆಗಳಿಗೆ ಕ್ರೇಜಿಯಾಗಿ ಉತ್ತರ ಕೊಟ್ಟ ರವಿಚಂದ್ರನ್  

ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಲೋಕೇಶ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಈ ರಿಯಾಲಿಟಿ ಶೋಗೆ ನಟಿ ತಾರ ಅನುರಾಧ, ನಟಿ ಅನು ಪ್ರಭಾಕರ್ ಮತ್ತು ಸೃಜನ್ ಲೋಕೇಶ್‌ ತೀರ್ಪುಗಾರರು. ಫಿನಾಲೆ ದಿನದಂದ ವಿಶೇಷ ಅತಿಥಿಯಾಗಿ ರವಿಚಂದ್ರನ್ ಆಗಮಿಸಿದ್ದರು. ಈ ವೇಳೆ ಸೃಜನ್ ಲೋಕೇಶ್‌ ಕೇಳಿದ ಸೋಲು ಗೆಲುವಿನ ಪ್ರಶ್ನೆಗಳಿಗೆ ಕ್ರೇಜಿಯಾಗಿ ಉತ್ತರ ಕೊಟ್ಟಿದ್ದಾರೆ. 

ಸೃಜನ್ ಪ್ರಶ್ನೆ: ಇಷ್ಟು ವರ್ಷದ ಸಿನಿ ಜರ್ನಿಯಲ್ಲಿ ಯಾವ ಒಂದು ಕ್ಷಣ ನಿಮ್ಮನ್ನು ತುಂಬಾ ಭಯ ಪಡಿಸಿತ್ತು ಅದರಿಂದ ನೀವು ಹೇಗೆ ಹೊರ ಬಂದಿದ್ದು?
ರವಿಚಂದ್ರನ್ ಉತ್ತರ: ಇತ್ತೀಚಿಗೆ ರವಿಬೊಪ್ಪಣ್ಣ ಅನ್ನೋ ಸಿನಿಮಾಗೆ ಜನರು ಥಿಯೇಟರ್‌ ಒಳಗೆ ಬಾರದಿದ್ದಾಗ ಜೀವನದಲ್ಲಿ ಫಸ್ಟ್‌ ಟೈಂ ಭಯ ಆಗಿದ್ದು ನನಗೆ. ಸಿನಿಮಾ ಥಿಯೇಟರ್‌ಗೆ ಬಂದು ಸಿನಿಮಾ ಚೆನ್ನಾಗಿಲ್ಲ ಅಂತ ಹೇಳಿದ್ದಾರೆ ಸಾಕಷ್ಟು ಸಲ ಸೋತಿದ್ದೀವಿ ಆದರೆ ಸೋಲು ಸ್ವೀಕಾರ ಮಾಡಿದ್ದೀನಿ ಆದರೆ ಸಿನಿಮಾ ನೋಡದೆ ಚೆನ್ನಾಗಿಲ್ಲ ಎಂದು ಹೇಳಿದ್ದು ದುಃಖ ಆಯ್ತು. ಅದರಿಂದ ಹೊರಗೆ ಬಂದಿದ್ದು ಹೇಗೆ ಅಂದ್ರೆ 40 ವರ್ಷ ಜನರು ತೋರಿಸಿರುವ ಪ್ರೀತಿ...ನೀನು ಮತ್ತೆ ಮತ್ತೆ ರಿಮೇಕ್ ಮಾಡುತ್ತಿರುವ ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿರುವೆ ಬೇರೆ ತರ ಸಿನಿಮಾ ಮಾಡು ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ. 6 ತಿಂಗಳಲ್ಲಿ ರೆಜುವಿನೇಟ್ ಆಗಿ 2023ರಿಂದ ನೀವು ಇಷ್ಟ ಪಟ್ಟ ರವಿಚಂದ್ರನ್ ಅದೇ ರೀತಿ ಸಿನಿಮಾ ಕೊಡ್ತಾರೆ ಅನ್ನೋ ಭರವಸೆ ಕೊಡುವೆ.

ಸೃಜನ್ ಪ್ರಶ್ನೆ: ಪ್ರೇಮಲೋಕದ ರವಿಚಂದ್ರನ್ ಇವಾಗ ನಿಮ್ಮ ಎದುರು ಬಂದ್ರೆ ಏನು ಹೇಳುತ್ತೀರಾ?
ರವಿಚಂದ್ರನ್ ಉತ್ತರ: ಮೊದಲು ಐ ಲವ್ ಯು ಎಂದು ಹೇಳುವೆ ಏಕೆಂದರೆ ಪ್ರೇಮಲೋಕದ ರವಿಚಂದ್ರನ್ ಮಗು ಆಗಿದ್ದಾಗ ಗೆಲ್ಲುತ್ತಲೇ ಇದ್ದ ಯಾವಾಗ ಬೆಳೆದ ಆಗ ಸೋಲುವುದಕ್ಕೆ ಶುರು ಮಾಡಿದೆ. ಮತ್ತೆ ಮಗು ಆಗಿರುವೆ ಮತ್ತೆ ಅದೇ ರವಿಚಂದ್ರನ್ ಆಗಿ ನಿಮ್ಮ ಮುಂದೆ ಬರುವೆ.

ರವಿಚಂದ್ರನ್ ಸಿನಿಮಾದಲ್ಲಿ ಕೋಟಿ ಬೆಲೆಯ ಟಿಬೆಟಿಯನ್ ಮ್ಯಾಸ್ಟಿಫ್; 15 ದಿನ ಉಳಿದುಕೊಳ್ಳಲು ದಾಂಡೇಲಿಯಲ್ಲಿ ಐಷಾರಾಮಿ ರೂಮ್

ಸೃಜನ್ ಪ್ರಶ್ನೆ: ನಿಮ್ಮ ಕೆಲಸದಲ್ಲಿ ನಿಮ್ಮ ನೀವೇ ಶಭಾಷ್‌ ಎಂದು ಹೇಳಿಕೊಂಡ ತಕ್ಷಣ ಯಾವುದು?
ರವಿಚಂದ್ರನ್ ಉತ್ತರ: ಏಕಾಂಗಿ ಸಿನಿಮಾ. ಪೇಜ್ ಟು ಪೇಜ್‌ ಪ್ರತಿಯೊಂದು ಫ್ರೇಮ್‌..ಸಿನಿಮಾ ಆರಂಭದಿಂದ ಅಂತ್ಯದವರೆಗೂ ಆ ರೀತಿ ಸೀನ್ ಈ ಪ್ರಪಂಚದಲ್ಲಿ ಯಾರೂ ಮಾಡಿಲ್ಲ. ಪ್ರತಿಯೊಂದು ಸಾಂಗ್ ಪ್ರತಿಯೊಂದು ಕಂಪೋಸಿಶನ್ ಈ ಹೃದಯದಿಂದ ಬಂದಿರುವುದು. ಜೀವನದಲ್ಲಿ ಎಂದೂ ಮರೆಯಲಾಗದ ಸಿನಿಮಾ ನಾನು ತುಂಬಾ ಇಷ್ಟ ಪಡುವ ಸಿನಿಮಾ. 

ಸೃಜನ್ ಲೋಕೇಶ್ ಪ್ರಶ್ನೆ: ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ ಅಂದಾಗ ಕೋಪ ಬಂತಾ? ಎಷ್ಟು  frastruation ಇತ್ತು?
ರವಿಚಂದ್ರನ್ ಉತ್ತರ: ನಾನು ಸದಾ ಕೋಪ ಮಾಡಿಕೊಳ್ಳುವುದು ನನ್ನ ಮೇಲೆ ಮಾತ್ರ. ನಾನು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮಾಡಿದ್ನಾ? ಅದೇ ನನ್ನ ಗೆಲುವು. ಆ ಲೆಕ್ಕದಲ್ಲಿ ನಾನು ಇನ್ನೂ ಸೋತ್ತಿಲ್ಲ, ತುಂಬಾ ಕಷ್ಟ ಸೋಲುವುದು ನಾನು. ಅಪ್ಪ, ಅಮ್ಮ ಮತ್ತು ಮನೆಯವರು ನನ್ನನ್ನು ತುಂಬಾ ನಂಬಿದರು ಪ್ರೀತಿಸಿದರು. ಜನರು ನನ್ನನ್ನು ನಂಬುತ್ತಿರುವುದು ಪ್ರೀತಿ ಮೇಲೆ. ಜನರಿಗೆ ನನ್ನ ಮೇಲೆ ಪ್ರೀತಿ ಕಡಿಮೆ ಆದರೆ ಅಥವಾ ನಂಬಿಕೆ ಹೋದರೆ ನೀವು ನನ್ನನ್ನು ಸೋಲಿಸಬಹುದು ಹೊರತು ನಾನು ಗೆಲುವು ಕೊಡುತ್ತಲೇ ಇರುವೆ. 

ಸೃಜನ್ ಲೋಕೇಶ್ ಪ್ರಶ್ನೆ: ನಿಮ್ಮ ಕೆಲಸದ ಬಗ್ಗೆ ನೀವು ಕೇಳಿರುವ ಬೆಸ್ಟ್‌ ವಿಮರ್ಶೆ ಯಾವುದು?
ರವಿಚಂದ್ರನ್ ಉತ್ತರ: ಮಲ್ಲ ಸಿನಿಮಾಗೆ ಕಂಗ್ರಾಜುಲೇಷನ್‌ ಫಾರ್‌ sexsational ಹಿಟ್ ಎಂದು ಕಳುಹಿಸಿದ್ದರು. ಥ್ಯಾಂಕ್ಸ್‌ ಫಾರ್‌ ವೆಕ್‌ಸೇಷನಲ್ ಕಾಮೆಂಟ್‌ ಅಂತ ನಾನು ಕಳುಹಿಸಿದೆ.

ಸೃಜನ್ ಲೋಕೇಶ್ ಪ್ರಶ್ನೆ: ನಿಮ್ಮ ಬಯೋಗ್ರಾಫಿ ಬರೆದರೆ ಏನೆಂದು ಹೆಸರು ಇಡುತ್ತೀರಾ?
ರವಿಂದ್ರನ್ ಉತ್ತರ: ಬೈ-ಯೋಗ್ರಾಫಿ ಎಂದು ಹೆಸರು ಇಡುವೆ. ನನ್ನನ್ನು ಬೇರೊಬ್ಬರು ಬೈಯೋದು ಬೇಡ ನನ್ನನ್ನು ನಾನು ಬೈಕೊಂಡು ಬರೆಯುವೆ. ನಾನು ಏನು ನಾನು ಎಲ್ಲಿ ಸರಿ ಇಲ್ಲ ಎಲ್ಲಿ ತಪ್ಪು ಮಾಡುತ್ತಿರುವೆ ಎಲ್ಲಾ ಗೊತ್ತಿದೆ. ತಪ್ಪು ಮಾಡಿದ್ದರು ಅಷ್ಟೇ ಕಾನ್ಫಿಡೆನ್ಸ್‌ನಲ್ಲಿ ತಪ್ಪು ಮಾಡುವೆ. ಹೆದರಿಕೊಂಡು ಯಾವತ್ತೂ ಕೆಲಸ ಮಾಡಿಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?