ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

By Suchethana D  |  First Published Nov 13, 2024, 2:05 PM IST

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್‌! 
 


ಹ್ಯಾಟ್ರಿಕ್‌ ಹೀರೋ  ಶಿವರಾಜ್‌ಕುಮಾರ್‌ ಅವರಿಗೆ ಈಗ 62 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಫಿಟ್‌ ಆಗಿದ್ದು, ನಾಯಕ ನಟನಾಗಿಯೇ ಮುಂದುವರೆಯುತ್ತಿದ್ದಾರೆ. ಸದ್ಯ ಶಿವರಾ‌ಜ್‌ ಕುಮಾರ್‌ ಇದೇ 15ರಂದು ತೆರೆಕಾಣಲಿರುವ ‘ಭೈರತಿ ರಣಗಲ್‌’ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದೇ ವೇಳೆ, ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಅಭಿಮಾನಿಗಳು ಆತಂಕದಲ್ಲಿದ್ದಾರೆ. ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಕನ್‌ಫರ್ಮ್ ಮಾಡಿರುವ ಶಿವರಾಜ್‌ ಕುಮಾರ್‌ ಅವರು,  ನನಗೆ ಅನಾರೋಗ್ಯ ಸಮಸ್ಯೆ ಇರುವಂಥದ್ದು ಮುಚ್ಚಿಡುವ ವಿಷಯ ಏನೂ ಅಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ.  ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಇದರ ನಡುವೆಯೇ,  ಈ ವಯಸ್ಸಿನಲ್ಲಿಯೂ ಸಕತ್‌ ಡಾನ್ಸ್‌ ಮಾಡುತ್ತಲೇ ಹಲವಾರು ಕಾರ್ಯಕ್ರಮಗಳಲ್ಲಿ ಜೋಶ್‌ನಿಂದ ತೊಡಗಿಕೊಳ್ಳುವ ಬಗ್ಗೆ ಹಲವರಿಗೆ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ. ಶಿವಣ್ಣ ಅವರು ಡ್ರಿಂಕ್ಸ್‌ ಮಾಡುತ್ತಾರೆ ಎಂದೂ  ಕೆಲವರು ಹೇಳುವುದು ಇದೆ. ಈಗ ಅದೇ ಪ್ರಶ್ನೆಯನ್ನು ಕೀರ್ತಿ ನಾರಾಯಣ್‌ ಅವರು ಶಿವರಾಜ್‌ ಕುಮಾರ್‌ ಮುಂದೆ ಇಟ್ಟಿದ್ದಾರೆ. ಶಿವಣ್ಣ ಇಷ್ಟೊಂದು ಎನರ್ಜಿ ಮೆಂಟೇನ್‌ ಮಾಡಲು ಅವರು ಸಿಕ್ಕಾಪಟ್ಟೆ ಕುಡಿಯೋದೇ ಕಾರಣ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ನೀವೇನೆನ್ನುತ್ತೀರಿ, ನಿಮ್ಮ ಮಿಕ್ಸಿಂಗ್‌ ರೇಷಿಯೋ ಏನು ಎಂದು ಕೀರ್ತಿ ಅವರು ಕೇಳಿದಾಗ, ಶಿವರಾಜ್‌ ಕುಮಾರ್‌ ಸೀರಿಯಸ್‌ ಆಗಿಯೇ ಉತ್ತರ ಕೊಟ್ಟರು.

Tap to resize

Latest Videos

undefined

ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ವಿಡಿಯೋ ವೈರಲ್

ಅವರು ಹೇಳಿದ್ದು ಏನೆಂದ್ರೆ, ನಾನು ದೊಡ್ಡ ಕುಡುಕ. ಎಷ್ಟು ದೊಡ್ಡ ಎಂದರೆ ನನ್ನನ್ನು ಕಂಟ್ರೋಲ್‌ ಮಾಡಲು ಆಗುವುದಿಲ್ಲ. ಒಂದಿಷ್ಟು ಡಿಕಾಕ್ಷನ್‌ ಹಾಕ್ತೇನೆ ಎನ್ನುತ್ತ ಕೈಯಲ್ಲಿ ಸ್ವಲ್ಪ ಡಿಕಾಕ್ಷನ್‌ ತೋರಿಸಿದ್ದಾರೆ. ನಂತರ ಮುಕ್ಕಾಲು ಭಾಗ ಹಾಲು ಹಾಕುತ್ತೇನೆ. ಇದು ಡೇಲಿ ಮಾಡುತ್ತೇನೆ. ಬೆಳಿಗ್ಗೆನೂ ಕುಡೀತೇನೆ, ವಾಕಿಂಗ್‌ನಿಂದ ಬಂದಮೇಲೂ ಕುಡೀತೇನೆ. ಸ್ನಾನ ಮಾಡಿಕೊಂಡು ಬಂದು ಶೂಟಿಂಗ್‌ ಇಲ್ಲ ಎಂದ್ರೆ ಇನ್ನೊಂದು ಸ್ವಲ್ಪ ಕುಡಿಯುತ್ತೇನೆ. ಹೀಗೆ ದಿನಪೂರ್ತಿ ಕುಡೀತಾನೇ ಇರುತ್ತೇನೆ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.

ಇನ್ನು ಶಿವರಾಜ್‌ ಕುಮಾರ್‌ ಅವರ ಸದ್ಯದ ಆರೋಗ್ಯದ ಸ್ಥಿತಿ ಕುರಿತು ಹೇಳುವುದಾದರೆ, ಅವರೇ ಹೇಳಿದಂತೆ, ಅನಾರೋಗ್ಯ ಸಮಸ್ಯೆಯಿಂದ ಆರಂಭದಲ್ಲಿ ನನಗೂ ಸ್ವಲ್ಪ ಭಯವಾಗಿತ್ತು. ಆದರೆ ಈಗ ಎನೂ ಸಮಸ್ಯೆ ಇಲ್ಲ ಎಂದಿದ್ದಾರೆ.  ಕೆಲವು ತಿಂಗಳ ಹಿಂದಷ್ಟೇ ನನಗೆ ಅನಾರೋಗ್ಯದ ಬಗ್ಗೆ ಗೊತ್ತಾಗಿತ್ತು. ಆದರೆ ಆಗ ನಾನು ‘45’ ಸಿನಿಮಾದ ಶೂಟಿಂಗ್‌ನಲ್ಲಿ ಇದ್ದೆ. ಶೂಟಿಂಗ್‌ ಮುಗಿಸಿದೆ. ಅನಾರೋಗ್ಯದ ನಡುವೆಯೂ ಕೆಲವು ಸಾಹಸ ಸನ್ನಿವೇಶಗಳನ್ನೂ ಮಾಡಿದ್ದೇನೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದೇನೆ. ಸದ್ಯ ಭೈರತಿ ರಣಗಲ್‌ ಚಿತ್ರದ ಪ್ರಚಾರಲ್ಲಿ ಭಾಗಿಯಾಗಿದ್ದೇನೆ. ನನ್ನ ಎಲ್ಲಾ ನಿರ್ಮಾಪಕರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಯಾರಿಂದಲೂ ಅನಾರೋಗ್ಯದ ವಿಷಯ ಮುಚ್ಚಿಟ್ಟಿಲ್ಲ ಎಂದಿದ್ದಾರೆ. 

ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

 

 
 
 
 
 
 
 
 
 
 
 
 
 
 
 

A post shared by @keerthientclinic

click me!