ವಾವ್ ಎಷ್ಟು ಚೆನ್ನಾಗಿದಾಳೆ ನಿನ್ ಮಗ್ಳು, ಯಾರಿಗೂ ತೋರಿಸ್ಬೇಡ: ಗಾಯತ್ರಿ ಪ್ರಭಾಕರ್

By Shriram Bhat  |  First Published Nov 13, 2024, 1:55 PM IST

 'ನನ್ ಹಸ್ಬಂಡ್ ಒಳ್ಳೇ ಸ್ಟಿಲ್ ಫೋಟೋಗ್ರಾಫರ್. ಅವ್ರು ಮಗಳದ್ದು 18 ವರ್ಷದ್ದು ಬರ್ತ್‌ಡೇ ಆದ್ಮೇಲೆ ಒಂದ್ ಫೋಟೋ ಶೂಟ್ ಮಾಡಿದ್ರು.. ಆ ಫೋಟೋನ ನಾನು ಪರ್ಸ್ನಲ್ಲಿ ಇಟ್ಕೊಂಡಿದ್ದೆ, ಅದ್ನ ನಾನು ಡಿ ಬಾಬುಗೆ ತೋರಿಸ್ತಾ ಇದ್ದೆ..  'ಏ ನಿನ್ನ ಮಗಳು..


ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರು ಹಲವಾರು ಹೊಸ ನಟಿಯರನ್ನು ಪರಿಚಯ ಮಾಡಿದ್ದಾರೆ. ಸುಧಾರಾಣಿ, ಮಾಲಾಶ್ರೀ, ರಮ್ಯಾ ಹಾಗೂ ರಕ್ಷಿತಾ ಸೇರಿದಂತೆ ನಟಿ ಅನು ಪ್ರಭಾಕರ್ (Anu Prabhakar) ಕೂಡ ಪಾರ್ವತಮ್ಮನವರ 'ವಜ್ರೇಶ್ವರಿ ಕಂಬೈನ್ಸ್‌' ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದವರು. 1999ರಲ್ಲಿ ನಟ ಶಿವರಾಜ್‌ಕುಮಾರ್ (Shiva Rajkumar) ನಾಯಕತ್ವದ 'ಹೃದಯಾ ಹೃದಯಾ' ಚಿತ್ರದಲ್ಲಿ ಅನು ಪ್ರಭಾಕರ್ ನಾಯಕಿ. ಎಂಎಸ್‌ ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 

ಈ ಹೃದಯಾ ಹೃದಯಾ (Hrudaya Hrudaya) ಚಿತ್ರದ ನಾಯಕಿ ಅನು ಪ್ರಭಾಕರ್ ಅಮ್ಮ ಗಾಯತ್ರಿ ಪ್ರಭಾಕರ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನ್ನಾಡಿದ್ದಾರೆ. ತಮ್ಮ ಮಗಳು ಅನು ಪ್ರಭಾಕರ್ ಹೇಗೆ ಚಿತ್ರರಂಗಕ್ಕೆ ಬರುವಂತಾಯಿತು, ಪಾರ್ವತಮ್ಮನವರ ಕಣ್ಣಿಗೆ ತಮ್ಮ ಮಗಳು ಬಿದ್ದಿದ್ದು ಹೇಗೆ ಎಂಬ ಗುಟ್ಟನ್ನು ಸಂದರ್ಶನವೊಂದರಲ್ಲಿ ನಟಿ ಹಾಗೂ ಅನು ಪ್ರಭಾಕರ್ ಅಮ್ಮ ಗಾಯ್ತಿ ಪ್ರಭಾಕರ್ ಅವರು ಹೊರಜಗತ್ತಿಗೆ ಬಹಿರಂಗ ಪಡಿಸಿದ್ದಾರೆ. ಈ ಡೀಟೇಲ್ಸ್ ಇಲ್ಲಿದೆ ನೋಡಿ..

Tap to resize

Latest Videos

undefined

ಸಿಹಿಕಹಿ ಚಂದ್ರುಗೆ ಶಂಕರ್‌ ನಾಗ್ ಹೇಳಿದ್ದ ಗುಟ್ಟೇನು; ಕೊಳ್ಳಿ ಇಟ್ಟಿದ್ದು ಯಾರು ಅಯ್ಯೋ ಶಂಕ್ರಣ್ಣ!

ಓವರ್ ಟು ಗಾಯ್ತಿ ಪ್ರಬಾಕರ್.. 'ನನ್ ಹಸ್ಬಂಡ್ ಒಳ್ಳೇ ಸ್ಟಿಲ್ ಫೋಟೋಗ್ರಾಫರ್. ಅವ್ರು ಮಗಳದ್ದು 18 ವರ್ಷದ್ದು ಬರ್ತ್‌ಡೇ ಆದ್ಮೇಲೆ ಒಂದ್ ಫೋಟೋ ಶೂಟ್ ಮಾಡಿದ್ರು.. ಆ ಫೋಟೋನ ನಾನು ಪರ್ಸ್ನಲ್ಲಿ ಇಟ್ಕೊಂಡಿದ್ದೆ, ಅದ್ನ ನಾನು ಡಿ ಬಾಬುಗೆ ತೋರಿಸ್ತಾ ಇದ್ದೆ..  'ಏ ನಿನ್ನ ಮಗಳು ಎಷ್ಟು ಚೆನ್ನಾಗಿದಾಳೆ, ಯಾರಿಗೂ ತೋರಿಸಬ್ಯಾಡ, ನಾನು ಲಾಲಿ ಅಂತ ಒಂದು ಸಿನಿಮಾ ಮಾಡ್ತಾ ಇದೀನಿ, ಅದ್ರಲ್ಲಿ ಅವ್ಳನ್ನು ಇಂಟ್ರೊಡ್ಯೂಸ್ ಮಾಡಿಸ್ಬಿಡೋಣ' ಅಂದ.  ಅದನ್ನ, ಅಲ್ಲೇ ಬಸವರಾಜ್ ರೆಡ್ಡಿ ನಿಂತಿದ್ದವ್ರು ಕೇಳಿಸ್ಕೊಂಡು, ಹೋಗಿ ಗೀತಮ್ಮನವರ ಹತ್ರ ಹೇಳಿದ್ದಾರೆ. 

ಗೀತಾ ಶಿವರಾಜ್‌ಕುಮಾರ್ ಅವರು ಒಂದೇ ತಾಸಿನಲ್ಲಿ ನನಗೆ ಫೋನ್ ಮಾಡಿದ್ದಾರೆ. 'ನಿನ್ನ ಮಗಳ ಫೋಟೋ ಕಳಿಸಿಕೊಡಿ' ಅಂತ ಅವ್ರು ಫೋನ್ ಮಾಡಿದಾರೆ. ಅದಾದಮೇಲೆ 2 ತಾಸಿನಲ್ಲಿ ಮತ್ತೆ ಫೋನ್ ಮಾಡಿ 'ಅಮ್ಮ ಕರೀತಾರೆ, ನೀನು ಬರ್ಬೇಕಂತೆ ಮಗಳನ್ನ ಕರ್ಕೊಂಡು ಅಂತ.. '. ಸರಿ ನಾನು ಹೋದೆ. ಒಂದೇ ದಿನದಲ್ಲಿ ಪಾರ್ವತಮ್ಮ ಮತ್ತೆ ಅಣ್ಣ ಡಾ ರಾಜ್‌ಕುಮಾರ್ ಅವ್ರು ಮನೆಗೆ ಕರೆದ್ದರು. 

ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್‌ ಮಾಡಿದ್ದೇನು?

ಅಲ್ಲಿ ಅವ್ರು ತಟ್ಟೆನಲ್ಲಿ ಹಣ್ಣು, ಹೂವು, ಅರಿಶಿನ-ಕುಂಕುಮ ಹಾಗೂ ಸ್ವೀಟ್ ಎಲ್ಲಾನೂ ಇಟ್ಟು 'ಏನೂ ಕೇಳದೇ, ನಿನ್ನ ಮಗಳು ನಮ್ಮ ಚಿತ್ರದ ನಾಯಕಿ. ನನ್ನ ಮಗ ಶಿವರಾಜ್‌ಕುಮಾರ್ ಅವರ 52ನೇ ಚಿತ್ರದ ನಾಯಕಿ ನೀನು..ಅಂತಂದ್ರು' ಎಂದಿದ್ದಾರೆ ಗಾಯತ್ರಿ ಪ್ರಭಾಕರ್. ಅಮ್ಮನ ಮಾತಿಗೆ ಪಕ್ಕದಲ್ಲೇ ಇದ್ದ ನಟಿ ಅನು ಪ್ರಭಾಕರ್ ಅವರು ಒಮ್ಮೆ ಜೋರಾಗಿ ಇನ್ನೊಮ್ಮೆ ಮುಗುಳ್ನಗುತ್ತ ನಿಂತಿದ್ದರು. ಒಟ್ಟಿನಲ್ಲಿ, ಕನ್ನಡದ ನಟಿ ಅನು ಪ್ರಭಾಕರ್ ಅವರು ಸಿನಿಮಾರಂಗಕ್ಕೆ ಬಂದ ಸೀಕ್ರೆಟ್ ಈ ರೀತಿಯಲ್ಲಿ ರಿವೀಲ್ ಆಗಿದೆ. 

 

 

click me!