ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು. ಕನ್ನಡದ ನಟ-ನಿರ್ದೇಶಕ ಶಂಕರ್ ನಾಗ್ ಅವರು ಕೇವಲ 35ನೇ ವಯಸ್ಸಿಗೇ ಇಹಲೋಕ ತ್ಯಜಿಸಿಬಿಟ್ಟರು. ದಾವಣಗೆರೆ ಬಳಿ ನಡೆದ ಲಾರಿ-ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ನಟ ಶಂಕರ್ ನಾಗ್ ಅವರು ನಿಧನರಾದರು. ಶಂಕರ್..
'ಅದನ್ನ ಮಾತ್ರ ನಾನು ನನ್ನ ಜೀವನದಲ್ಲಿ ಯಾವತ್ತೂ ಮರೆಯಲ್ಲ..' ಅಂದ್ರು ಕನ್ನಡ ಕಿರುತೆರೆಯ ನಟ ಹಾಗೂ ನಿರ್ದೇಶಕ ಸಿಹಿಕಹಿ ಚಂದ್ರು (Sihi kahi Chandru) ಅವರು. ಅವರು ಕಿರುತೆರೆಯನ್ನು ಆಳುವ ಮೊದಲು ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಂಥ ಸಿಹಿಕಹಿ ಚಂದ್ರು 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ (Weekend with Ramesh) ಅದೊಂದು ಸಂಗತಿ ಹೇಳೀಬಿಟ್ಟರು ನೋಡಿ, ಅಲ್ಲಿದ್ದವರ ಎಲ್ಲ ಕಣ್ಣಂಚಿಂದ ನೀರು ಬೇಡಬೇಡವೆಂದರೂ ಕೆನ್ನೆಯ ಮೇಲೆ ಇಳಿಯಿತು. ತಮ್ಮತಮ್ಮ ಮನೆಯಲ್ಲಿ ವೀಕೆಂಡ್ ಶೋ ನೋಡುತ್ತಿದ್ದವರ ಗಂಟಲು ಕೂಡ ಕಟ್ಟಿಕೊಂಡಿತು.
ಹಾಗಿದ್ದರೆ ನಟ-ನಿರ್ಮಾಪಕ ಹಾಗೂ ನಿರ್ದೇಶಕರಾದ ಸಿಹಿಕಹಿ ಚಂದ್ರು ಅವರು ಅಂಥದ್ದೇನನ್ನು ಅಲ್ಲಿ ಹೇಳಿದ್ದಾರೆ? ಇಲ್ಲಿ ನೋಡಿ.. 'ನಾನು ಹಾಗೂ ಶಂಕರ್ ನಾಗ್ (Shankar Nag) ನರಸಿಂಹ ಅಂತ ಒಂದು ಸಿನಿಮಾ ಮಾಡ್ತಾ ಇದ್ವಿ. ಲಂಚ್ಅವರ್ ಆದ್ಮೇಲೆ ಒನ್ ಅವರ್ ಇಬ್ರೂಗೂ ಕೆಲಸ ಇರ್ಲಿಲ್ಲ. 'ಬಾರೋ ನನ್ ಜೊತೆಗೆ ಅಂತ ಹೇಳ್ಬಿಟ್ಟು, ಅವ್ರದೊಂದು ಮೆಟಾಡೋರ್ ವ್ಯಾನ್ ಇತ್ತು, ಅದ್ರಲ್ಲಿ ನನ್ನ ರಾಜ್ ಮಹಲ್ ಲೀಲಾ ಎಕ್ಸ್‌ಟೆನ್ಷನ್‌ಗೆ ಕರ್ಕೊಂಡು ಹೋದ್ರು ನಾನ್ಒಂದ್ ಮನೆ ಕಟ್ಟಿದೀನಿ ತೋರಿಸ್ಬೇಕು ನಿನಗೆ ಅಂತ.. ಪುಟಾಣಿ ಒಂದ್ ಬೆಡ್ ರೂಂ ಹೌಸ್. ಕಾಂಕ್ರೀಟ್ ಬ್ಲಾಕ್ಸ್‌ನಲ್ಲಿ ಕಟ್ಟಿರೋ ಒಂದು ಮನೆ..
undefined
ಆ ತಂತ್ರಜ್ಞಾನವನ್ನು ಅವ್ರು ಜರ್ಮಿನಿಯಿಂದ Germany) ತಗೊಂಡು ಬಂದು ಅದೇ ರೀತಿ ಇಲ್ಲೊಂದು ಮಾಡೆಲ್ ಹೌಸ್ ಕಟ್ಟಿದ್ರು.. 'ಎಷ್ಟು ದಿನ ಬೇಕಾಯ್ತು ಇದನ್ನು ಕಟ್ಟೋಕೆ' ಅಂತ ನಾನು ಕೇಳಿದ್ದಕ್ಕೆ 'ಎರಡು ದಿನ ಬೇಕಾಯ್ತು ಅಷ್ಟೇ ಇದ್ನ ಕಟ್ಟಿ ಮುಗಿಸೋಕೆ..' ಅಂದ್ರು. ಕಾಂಕ್ರೀಟ್ ಫ್ಲೋರ್ ಹಾಕ್ಬಿಟ್ರೆ ಎರಡೇ ಎರಡು ದಿನದಲ್ಲಿ ಮನೆ ಕಟ್ಟಿ ಡೆಲಿವರಿ ಕೊಡಬಹುದು' ಅಂದಿದ್ರು. ಇಂತಹ ಮನೆ ಇದು.. 15 ಸಾವಿರ ರೂಪಾಯಿ ಆಗುತ್ತೆ ಇಂಥಹ ಒಂದು ಮನೆಗೆ.
ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್ ಮಾಡಿದ್ದೇನು?
ನನ್ನ ಗುರಿ ಏನು ಅಂದ್ರೆ, ಕರ್ನಾಟಕದಲ್ಲಿರೋ ಎಲ್ಲಾ ಸ್ಲಂಗಳಲ್ಲಿರೋ ಎಲ್ಲಾ ಗುಡಿಸಲುಗಳನ್ನು ತೆಗೆದು ಈ ಥರದ್ದೊಂದು ಮನೆ ಕಟ್ಟಿಕೊಡಬೇಕು.. ಸರ್ಕಾರದಿಂದ ಹತ್ತು ಸಾವಿರ ರೂಪಾಯಿ ಸಬ್‌ಸಿಡಿ ಕೊಡಿಸೋಕೆ ಹೋರಾಡ್ತಾ ಇದೀನಿ. ಅದೇನಾದ್ರು ಆಗ್ಬಿಟ್ರೆ, ನಾನು ಕರ್ನಾಟಕದಲ್ಲಿರೋ ಎಲ್ಲಾ ಸ್ಲಂಗಳು ಇಲ್ದೇ ಇರೋ ತರ ಮಾಡ್ಬಿಡ್ತೀನಿ ಅಂದಿದ್ದರು.. ಅದನ್ನ ಕೇಳಿಸಕೊಂಡಿದ್ದ ಸಿಹಿಕಹಿ ಚಂದ್ರು ಅವರು 'ಸ್ಲಂ ಇಲ್ಲದ ಕರ್ನಾಟಕವನ್ನು ಕಣ್ಣಲ್ಲಿಯೇ ಕಸನು ಕಂಡಿದ್ದರು.
ಆದರೆ, ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು. ಕನ್ನಡದ ನಟ-ನಿರ್ದೇಶಕ ಶಂಕರ್ ನಾಗ್ ಅವರು ಕೇವಲ 35ನೇ ವಯಸ್ಸಿಗೇ ಇಹಲೋಕ ತ್ಯಜಿಸಿಬಿಟ್ಟರು. ದಾವಣಗೆರೆ ಬಳಿ ನಡೆದ ಲಾರಿ-ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ನಟ ಶಂಕರ್ ನಾಗ್ ಅವರು ನಿಧನರಾದರು. ಶಂಕರ್ ಅವರ 'ಸ್ಲಂ ಇಲ್ಲದ ಕರ್ನಾಟಕ' ಪ್ರಾಜೆಕ್ಟ್ ಇಂದಿಗೂ ಕನಸಾಗಿಯೇ ಉಳಿದಿದೆ. ಸಿಹಿಕಹಿ ಚಂದ್ರ ಹೇಳದಿದ್ದರೆ ನಟ ಶಂಕರ್ ನಾಗ್ ಅವರು ಅಂತಹ ಕನಸೊಂದನ್ನು ಕಂಡಿದ್ದರು ಎಂಬುದು ಸಹ ಹೊರಜಗತ್ತಿಗೆ ತಿಳಿಯುತ್ತಿರಲಿಲ್ಲ.
ಡಾ ರಾಜ್ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!
ಶಂಕರ್ ನಾಗ್ ಅವರ ಸ್ಲಂ ಮುಕ್ತ ಕರ್ನಾಟಕ ಕನಸಿಗೆ ಕೊಳ್ಳಿ ಇಟ್ಟಿದ್ದು ಅವರ ಸಾವು. ಬರಬಾರದ ಕಾಲದಲ್ಲಿ ಬಂದ ಅವರ ಸಾವು, ಶಂಕರಣ್ಣನ ಎಲ್ಲ ಕನಸುಗಳಿಗೆ ಕೊಳ್ಳಿ ಇಟ್ಟುಬಿಟ್ಟತು. ಆಟೋ ರಾಜನ ಸ್ಲಂ ಇಲ್ಲದ ಕರುನಾಡು ಕಸದಬುಟ್ಟಿ ಸೇರಿಕೊಂಡಿತು. ಆದರೆ, ಅದೇ ಶಂಕರ್ ನಾಗ್ ಅವರ ಮೆಟ್ರೋ ಕನಸು ಮಾತ್ರ ಹಲವು ವರ್ಷಗಳ ಬಳಿಕ ಇಂದು ನನಸಾಗಿದೆ. ಒಟ್ಟಿನಲ್ಲಿ ಕನಸುಗಾರ ಶಂಕರ್ ನಾಗ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕನಸುಗಳು ಹಲವರ ಮಾತುಗಳ ಮೂಲಕ ಇನ್ನೂ ಜೀವಂತವಾಗಿವೆ!