
ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟಂಬರ್ 10, 11ರಂದು ಬೆಂಗಳೂರಿನಲ್ಲಿ 10ನೇ ಸೈಮಾ ನಡೆಯಲಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಈ ಬಾರಿಯ ಸೈಮಾ ವಿಶೇಷ ಎಂದರೆ ಕಳೆದ ವರ್ಷ ನಿಧನ ಹೊಂದಿದ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಪುನೀತ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸೈಮಾ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ತಮಿಳು ಸ್ಟಾರ್ ಕಮಲ್ ಹಾಸನ್, ಟಾಲಿವುಡ್ ಹೀರೋ ಅಲ್ಲು ಅರ್ಜುನ್ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು. ಇನ್ನು ವಿವಿಧ ಭಾಷೆಯ ಸ್ಟಾರ್ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಸೈಮಾ 2022 ಸಮಾರಂಭ ಅನೇಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪವರ್ ಸ್ಟಾರ್ ಪುನೀತ್ ರಾಜ್ ಅವರನ್ನು ನೆನೆಯದ ದಿನವಿಲ್ಲ. ಕಳೆದ ವರ್ಷ ನಿಧನಹೊಂದಿದ ಪವರ್ ಸ್ಟಾರ್ ಅವರನ್ನು ಅಭಿಮಾನಿಗಳು ಪ್ರತಿದಿನ ನೆನಪಿಸಿಕೊಳ್ಳುತ್ತಾರೆ. ಸೈಮಾ ವೇದಿಕೆಯಲ್ಲೂ ಅಪ್ಪು ನೆನಪು ಕಾಡಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗು ಶಿವಣ್ಣ ಸಹೋದರಿಯರು ಸೈಮಾ 2022 ವೇದಿಕೆಯಲ್ಲಿ ಕಾಣಿಸಿಕೊಂಡರು. ತನ್ನ ಕುಟುಂಬದ ಜೊತೆ ವೇದಿಕೆ ಏರಿದ ಶಿವಣ್ಣ ತಮ್ಮನ ನೆನಪಿಗೆ ಜಾರಿದರು. ಪ್ರೀತಿಯ ಸಹೋದರನಿಗೆ ಹಾಡು ಹೇಳಿ ಭಾವುಕರಾದರು. ಪುನೀತ್ ಇಷ್ಟದ 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಾ...'ಹಾಡನ್ನು ಹೇಳಿದರು. ಶಿವಣ್ಣ ಈ ಹಾಡನ್ನು ಹೇಳುತ್ತಿದ್ದಂತೆ ಇಡೀ ಕುಟುಂಬ ಅಪ್ಪು ನೆನೆದು ಕಣ್ಣೀರಿಟ್ಟರು. ಶಿವಣ್ಣ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.
ಅದೇ ವೇದಿಕೆಯಲ್ಲಿ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ವೇದಿಕೆಯಲ್ಲಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸಹ ವಿಡಿಯೋ ಶೇರ್ ಮಾಡಿ ಭಾವುಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
SIIMA 2022: ಕನ್ನಡ ಚಿತ್ರರಂಗದಲ್ಲಿ ಯಾರ್ಯಾರಿಗೆ ಯಾವ ಪ್ರಶಸ್ತಿ ಬಂದಿದೆ ನೋಡಿ!
ಯಶ್ ಮಾತು
ಇನ್ನು ರಾಕಿಂಗ್ ಸ್ಟಾರ್ ಸೈಮಾ ಅವಾರ್ಡ್ ಬಗ್ಗೆ ಮಾತನಾಡಿದ್ದು , 'ಯಾವಾಗಲು ನಾವು ಹೊರಗಡೆ ಹೋಗ್ತಾ ಇದ್ವಿ, ಇಲ್ಲಿಗೆ ಬರಬೇಕು ಎನ್ನುವ ಆಸೆ ಇತ್ತು. ಇವತ್ತು ಸೈಮಾ ಅವರು ಬಂದಿದ್ದಾರೆ. ನಮ್ಮ ಪ್ರಕಾರ ಎಲ್ಲರೂ ಬರ್ತಾರೆ. ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ, ಎಲ್ಲರೂ ಬರ್ತಾರೆ' ಎಂದು ಹೇಳಿದರು.
SIIMA 2022; ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ, ಎಲ್ಲರೂ ಬರ್ತಾರೆ- ಯಶ್
ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿ, 'ಅಪ್ಪು ಸರ್ ಗೆ ನಾವು ಇಡೀ ಕರ್ನಾಟಕ ಬೇರ ಬೇರೆ ರೀತಿ ಗೌರವ ಸಲ್ಲಿಸಿದ್ದೇವೆ. ಅವರ ನೆನಪನಲ್ಲಿ ಸೈಮಾ ಮಾಡುತ್ತಿರುದು ತುಂಬಾ ಖುಷಿ ಇದೆ. ಆದರೆ ಇದಕ್ಕಿಂತ ಅವರು ಇದ್ದಿದ್ದರೆ ಆ ಖುಷಿ ಇನ್ನು ಜಾಸ್ತಿ ಇರುತ್ತಿತ್ತು' ಎಂದು ಹೇಳಿದರು.
ಅತ್ಯುತ್ತಮ ನಟ ಪುನೀತ್
ಸೈಮಾ 2022 ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನೀಡಲಾಯಿತು. ಯುವರತ್ನ ಸಿನಿಮಾದ ನಟನೆಗೆ ಪುನೀತ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇಡಿ ಯುವರತ್ನ ತಂಡ ಪ್ರಶಸ್ತಿ ಸ್ವೀಕರಿಸಿ ಅಪ್ಪುಗೆ ಅರ್ಪಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.