ರಮೇಶ್ ಅರವಿಂದ್ ಯಾವತ್ತೂ ತಮ್ಮ ಬದುಕಿನಿಂದ ಹೆಕ್ಕಿದ ಉದಾಹರಣೆಗಳನ್ನೇ ಕೊಡುತ್ತಿರುತ್ತಾರೆ. ಗೆಲ್ಲುವುದಕ್ಕೆ ಬೇಕಾದ 13 ಸೂತ್ರಗಳ್ನು ಅವರಿಲ್ಲಿ ಕೊಟ್ಟಿದ್ದಾರೆ. ಅವರ ಪ್ರೀತಿಯಿಂದ ರಮೇಶ್ ಕೃತಿಯಿಂದ ಆಯ್ದ ಆಧ್ಯಾಯ ಇದು. ಆ ಪುಸ್ತಕದ ತುಂಬ ರಮೇಶ್ ಫಾರ್ಮುಲಾಗಳಿವೆ. ಅದನ್ನು ಓದಿದರೆ ನೀವು ಅವರಂತಾಗುವುದಿಲ್ಲ, ನೀವು ನಿಮ್ಮಂತೆ ಆಗುತ್ತೀರಿ.
1. ಪ್ರಾಕ್ಟೀಸ್ ಮಾಡಬೇಕು
ಪ್ರಾಕ್ಟೀಸ್ ಮಾಡುತ್ತಿದ್ದರೆ ಯಾವುದೇ ಕಷ್ಟದ ಕೆಲಸಗಳು ಕೂಡ ಸುಲಭವಾಗಿ ಬಿಡುತ್ತದೆ. ಕೆಲವು ಕೌಶಲಗಳು ಪ್ರಾಕ್ಟೀಸ್ ಮಾಡದೇ ಇದ್ದಾಗ ಭಾರಿ ಭಯ ಹುಟ್ಟಿಸುತ್ತಿರುತ್ತವೆ. ಪ್ರಾಕ್ಟೀಸ್ ಮಾಡುತ್ತಾ ಮಾಡುತ್ತಾ ತುಂಬಾ ಸುಲಭವಾಗಿಬಿಡುತ್ತದೆ.
2. ಫಲಿತಾಂಶ ಕೊಡಬೇಕು
ಯಾವುದೇ ಕೆಲಸ ಹಿಡಿದ ಮೇಲೆ ಅದಕ್ಕೆ ಸೂಕ್ತವಾದ ಫಲಿತಾಂಶ ನೀಡಬೇಕು. ವರ್ಷವಿಡೀ ಓದಿ ವರ್ಷಾಂತ್ಯದಲ್ಲಿ ಪರೀಕ್ಷೆಯೇ ಬರೆಯದಿದ್ದರೆ ಅದಕ್ಕೆ ಅರ್ಥವಿಲ್ಲ. ನೀವು ಯಾವುದೇ ಕೆಲಸ ಮಾಡಿ ಅದಕ್ಕೆ ಫಲಿತಾಂಶ ಸಿಗುವ ಹಾಗೆ ನೋಡಿಕೊಳ್ಳಿ.
3. ನೆರವು ಕೇಳುವುದರಲ್ಲಿ ತಪ್ಪಿಲ್ಲ
ನಾವು ಬಹಳ ಸಲ ನೆರವು ಕೇಳುವ ಸಂದರ್ಭ ಬಂದಾಗಲೂ ನೆರವು ಕೇಳಲು ಹಿಂದೇಟು ಹೊಡೆಯುತ್ತೇವೆ. ಯಾರು ನಮಗೆ ನಿಜವಾಗಿಯೂ ಸಹಾಯ ಮಾಡಬಲ್ಲರೋ ಬೆಳೆಯುವ ಹಂತದಲ್ಲಿ ಅವರ ನೆರವು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ.
4. ತಪ್ಪುಗಳ ಕುರಿತು ತಲೆಕೆಡಿಸಿಕೊಳ್ಳದಿರಿ
ತಪ್ಪು ಗಳು ಮಾಡುವುದು ಸಹಜ. ಹಾಗಂತ ತಪ್ಪಾಯಿತು ಅಂತ ತಲೆಕೆಡಿಸಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ. ಆ ತಪ್ಪುಗಳಿಂದ ಪಾಠ ಕಲಿಯಬೇಕು. ಮತ್ತದೇ ತಪ್ಪುಗಳನ್ನು ಮಾಡಬಾರದು.
5. ಸಣ್ಣ ವಿಷಯಗಳೇ ದೊಡ್ಡದು
ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಬ್ಬರು ಲೆಕ್ಚರರ್ ಇದ್ದರು. ಅವರು ಹೇಳುತ್ತಿದ್ದ ಒಂದು ಮಾತು ಇವತ್ತಿಗೂ ನೆನಪಿದೆ. ಘ್ಕಿಖಞa್ಝ್ಝ ಠಿhಜ್ಞಿಜs ಠಿhಟsಛಿ sಞa್ಝ್ಝ ಚಿy ಠಿhಛಿಞsಛ್ಝಿvಛಿs ಞakಛಿ ಚಿಜಿಜ ಠಿhಜ್ಞಿಜs appಛಿa್ಟಚಿಜಿಜಜಛ್ಟಿಘಿಖ. ಸಣ್ಣ ವಿಷಯಗಳು ಸಣ್ಣದಾಗಿದ್ದರೂ ದೊಡ್ಡ ವಿಚಾರಗಳನ್ನು ಇನ್ನೂ ದೊಡ್ಡದಾಗಿ ಕಾಣಿಸುವ ಹಾಗೆ ಮಾಡುತ್ತದೆ ಅಂತ ಆ ಮಾತಿನ ತಾತ್ಪರ್ಯ. ಉದಾಹರಣೆಗೆ ಪ್ಲೀಸ್, ಥ್ಯಾಂಕ್ಯೂ ಎಂದು ಹೇಳುತ್ತಿರುತ್ತೇವೆ. ಅವೆಲ್ಲಾ ಸಣ್ಣ ವಿಷಯಗಳು. ಆದರೆ ಆ ಸಣ್ಣ ವಿಷಯಗಳೇ ಬದುಕಲ್ಲಿ ತುಂಬಾ ದೊಡ್ಡದಾಗಿ ಸಹಾಯ ಮಾಡುತ್ತವೆ.
6. ಉತ್ತಮ ನಡವಳಿಕೆ
ಉತ್ತಮ ನಡವಳಿಕೆಗೆ ಯಾವತ್ತೂ ಸೋಲಿಲ್ಲ. ಉತ್ತಮ ನಡವಳಿಕೆ ಇದ್ದರೆ ನಿಮಗೆ ಇನ್ನೊಬ್ಬರ ಮೇಲೆ ಅಕ್ಕರೆ ಇದೆ ಅಂತರ್ಥ. ಇನ್ನೊಬ್ಬರ ಸಮಯವನ್ನು ನೀವು ಗೌರವಿಸುತ್ತೀರಿ ಅಂತರ್ಥ. ಮತ್ತೊಬ್ಬರ ಭಾವನೆಗಳನ್ನು ಗೌರವಿಸುತ್ತೀರಿ ಅಂತರ್ಥ. ಆದುದರಿಂದಲೇ ಉತ್ತಮ ನಡವಳಿಕೆ ಹೊಂದಿದಷ್ಟೂಮನಸ್ಸಿಗೆ ಹತ್ತಿರವಾಗುತ್ತೀರಿ.
7. ನನ್ನ ತ್ಯಾಗರಾಜ ಅಂತಾರೆ, ನೀವೂ ತ್ಯಾಗರಾಜ ಆಗಿ
ತಕ್ಷಣದ ಲಾಭ ಸಿಗಬೇಕು ಎಂಬ ಮನಸ್ಥಿತಿ ಇರಬಾರದು. ಕೆಲವು ಕೆಲಸಗಳಲ್ಲಿ, ವಿಚಾರಗಳಲ್ಲಿ ತಕ್ಷಣದ ಲಾಭ ಸಿಗುವುದಿಲ್ಲ. ಇನ್ಯಾವತ್ತೋ ಒಂದಿನ ಲಾಭ ಸಿಗುತ್ತದೆ. ಹಾಗಾಗಿ ತಕ್ಷಣದ ಲಾಭಗಳನ್ನು ತ್ಯಾಗ ಮಾಡಬೇಕು. ದೂರದ ಲಾಭಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಕ್ಷಣ ಸಿಗುವ ಕ್ಷಣಿಕ ಸುಖಕ್ಕಿಂತ ನಿಮ್ಮ ಜೀವನದಲ್ಲೇ ಜೊತೆಯಲ್ಲೇ ದೀರ್ಘಕಾಲ ಇರುವ ಸುಖವನ್ನು ಹುಡುಕಿಕೊಂಡು ಹೋಗಬೇಕು. ಎಷ್ಟೋ ಜನ 10 ನಿಮಿಷದ ಸುಖಕ್ಕಾಗಿ ಇಡೀ ಜೀವನವನ್ನೇ ಕಳೆದುಕೊಂಡವರಿದ್ದಾರೆ. ಆ ಕಾರಣಕ್ಕೆ ತಕ್ಷಣದ ಸುಖಗಳತ್ತ ವಾಲುವುದು ಬೇಡ.
Ramesh Aravind Birthday ಇಂದು ಚಿರ ಯೌವನಿಗ ರಮೇಶ್ ಅರವಿಂದ್ ಹುಟ್ಟುಹಬ್ಬ
8. ಅವಮಾನಗಳಾಗುತ್ತವೆ, ಕೆಟ್ಟಘಟನೆಗಳು ಜರುಗುತ್ತವೆ, ಆಗಬಾರದ್ದೆಲ್ಲಾ ಆಗಿ ಹೋಗುತ್ತವೆ. ಆದರೆ ಅವೆಲ್ಲವೂ ಸಹಜ. ಈ ಯಾವುದಕ್ಕೂ ಕುಗ್ಗಬಾರದು.
9. ದಿರಿಸು
ಹಲವು ಸಲ ನೀವು ಧರಿಸುವ ಬಟ್ಟೆಗಳು ಇನ್ನೊಬ್ಬರಿಗೆ ನಿಮ್ಮ ಮೇಲೆ ಆಗುವಂತಹ ಫಸ್ಟ್ ಇಂಪ್ರೆಷನ್‌ಗೆ ಕಾರಣವಾಗುತ್ತದೆ.ಇನ್ನೊಬ್ಬರನ್ನು ಭೇಟಿ ಮಾಡಲು ಹೋದಾಗ ಅಥವಾ ಒಂದು ಕಾರ್ಯಕ್ರಮಕ್ಕೆ ಹೋದಾಗ ಸರಿಯಾದ ದಿರಿಸು ಧರಿಸುವುದು ಆ ವ್ಯಕ್ತಿಗೆ ಅಥವಾ ಆ ಕಾರ್ಯಕ್ರಮಕ್ಕೆ ನೀವು ಕೊಡುವ ಗೌರವ.ಹಾಗಾಗಿ ನೀವು ಧರಿಸುವ ಬಟ್ಟೆಗಳು ನೀಟಾಗಿ, ಕ್ಲೀನಾಗಿ, ಸರಳವಾಗಿದ್ದರೂ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಹ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ಯಾವ ಬಟ್ಟೆಧರಿಸಿದರೂ ಜೊತೆಗೆ ಒಂದು ಆತ್ಮೀಯವಾದ ಮುಗುಳ್ನಗೆ ಫಸ್ಟ್ ಇಂಪ್ರೆಷನ್‌ಗೆ ಸಹಾಯ ಮಾಡುತ್ತದೆ.
10. ಪ್ರತಿದಿನ ಕರೆಕ್ಷನ್ ಮಾಡಿಕೊಳ್ಳುತ್ತಾ ಇರಬೇಕು
ನಿಮ್ಮ ಪ್ರತಿಭೆಗಿಂತ, ನೀವು ಎಷ್ಟುನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೋಗುತ್ತೀರಿ ಅನ್ನುವುದು ಮುಖ್ಯ. ಕಾರು ಓಡಿಸಬೇಕಾದರೆ ನಮಗೇ ಗೊತ್ತಿಲ್ಲದೆ ಕ್ಲಚ್ ಅಮುಕುತ್ತೇವೆ, ಎರಡು ತಿರುಗಿಸುತ್ತೇವೆ, ಮಿರರ್ ಸರಿ ಮಾಡಿಕೊಳ್ಳುತ್ತೇವೆ, ಹಿಂದೆ ಬರುತ್ತಿರುವವನಿಗೆ ದಾರಿ ಮಾಡಿಕೊಡುತ್ತೇವೆ. ನಮ್ಮ ಅಕ್ಕಪಕ್ಕ ಇಷ್ಟೆಲ್ಲಾ ಜರುಗುತ್ತಿರುತ್ತದೆ. ಹೀಗೆ ನಮ್ಮ ಬದುಕು ಕೂಡ ಅಟೋ ಕರೆಕ್ಷನ್ ಮೋಡ್‌ನಲ್ಲಿ ಇರುತ್ತದೆ. ಅಕ್ಕಪಕ್ಕ ಏನೇನು ನಡೆಯುತ್ತಿದ್ದರೂ ನಿಮಗೆ ಗೊತ್ತೇ ಆಗದಂತೆ ಮುಂದೆ ಹೋಗುತ್ತಾ ಇರುತ್ತದೆ. ಎಲ್ಲವೂ ಕರೆಕ್ಟ್ ಆಯಿತು ಎಂದು ಯಾರೂ ಯಾವತ್ತೂ ಹೇಳಲು ಸಾಧ್ಯವೇ ಇಲ್ಲ. ಅದೊಂದು ಜರ್ನಿ ಇದ್ದಂತೆ. ನಾವು ನಮ್ಮನ್ನು ಕರೆಕ್ಟ್ ಮಾಡಿಕೊಳ್ಳುತ್ತಲೇ ಇರುತ್ತೇವೆ.
11. ರಿಚಾರ್ಜ್ ಮಾಡಿಕೊಳ್ಳಿ
ಬ್ಯಾಟರಿ ಚಾಜ್‌ರ್ ಮಾಡಿದಂತೆ ನಿಮ್ಮನ್ನೂ ನೀವು ರಿಚಾಜ್‌ರ್ ಮಾಡಿಕೊಳ್ಳಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರಿಚಾಜ್‌ರ್ ಮಾಡುವ ಪದ್ಧತಿ ಗಳಿರುತ್ತವೆ. ಕೆಲವರು ಪ್ರವಾಸ ಹೋದರೆ ರಿಚಾಜ್‌ರ್ ಆಗುತ್ತಾರೆ. ಹಲವರು ಸಿನಿಮಾ ನೋಡಿದಾಗ, ಸಂಗೀತ ಕೇಳಿದಾಗ, ಧ್ಯಾನಸ್ಥರಾದಾಗ ರಿಚಾಜ್‌ರ್ ಆಗುತ್ತಾರೆ. ನಿಮ್ಮ ಶೈಲಿ ಯಾವುದು ಎಂದು ನೀವು ತಿಳಿದುಕೊಳ್ಳಿ ಮತ್ತು ರಿಚಾಜ್‌ರ್ ಆಗಿ. ನಿಮ್ಮೊಳಗಿನ ಉತ್ಸಾಹದ ಬ್ಯಾಟರಿ ಡ್ರೈ ಆಗೋಕೆ ಯಾವತ್ತೂ ಬಿಡಬೇಡಿ.
12. ಶಿಸ್ತು ಇರಲಿ
ಎಲ್ಲದಕ್ಕೂ ಒಂದು ಜಾಗ ಇರುತ್ತದೆ. ಎಲ್ಲದಕ್ಕೂ ಒಂದು ಟೈಮ್ ಇರುತ್ತದೆ. ಆಯಾಯ ಜಾಗದಲ್ಲಿ ಆಯಾಯ ವಸ್ತುಗಳನ್ನು ಇಡಬೇಕು. ಕಾಗದ ಅಥವಾ ವಸ್ತುಗಳನ್ನು ಅಲ್ಲಿಟ್ಟೆ, ಇಲ್ಲಿಟ್ಟೆ, ಎಲ್ಲಿಟ್ಟೆಎಂದು ಹುಡುಕುವುದಕ್ಕಿಂತ ಎಲ್ಲವನ್ನೂ ಸರಿಯಾದ ಜಾಗದಲ್ಲಿ ಇಟ್ಟರೆ ಸಮಯ, ಶ್ರಮ ಎರಡೂ ಉಳಿಯುತ್ತದೆ. ಬೇಡದೇ ಇರುವ ಫೈಲ್‌ಗಳನ್ನು ಡಿಲೀಟ್ ಮಾಡುವುದು, ಬೇಡದಿರುವ ವಸ್ತುಗಳನ್ನು ಖಾಲಿ ಮಾಡುವುದು ಎಲ್ಲವೂ ಬಹಳ ಸಹಾಯ ಮಾಡುತ್ತದೆ.
13. ನಿಮ್ಮ ಕೊಡುಗೆ ಇರುವಂತೆ ನೋಡಿಕೊಳ್ಳಿ
ನೀವು ಎಲ್ಲೇ ಇರಿ, ಯಾರ ಜೊತೆಯೇ ಇರಿ ನಿಮ್ಮ ವ್ಯಾಲ್ಯೂವನ್ನು ಸೇರಿಸಿ. ಆ ಕ್ಷಣಕ್ಕೆ ನಿಮ್ಮದೊಂದು ಕೊಡುಗೆ ಇರಬೇಕು. ನಿಮ್ಮ ಜೊತೆ ಇರುವ ಇನ್ನೊಬ್ಬ ವ್ಯಕ್ತಿಯ ಬದುಕಲ್ಲಿ ಏನೋ ಒಂದು ವ್ಯಾಲ್ಯೂ ಸೇರಿಸಬೇಕು. ಅಲ್ಲಿನ ವಾತಾವರಣ ಹಿತ ಮಾಡಲಿಕ್ಕಾದರೆ ಮಾಡಿ, ಒಂದೊಳ್ಳೆ ವಿಷಯ ಹಂಚಿಕೊಳ್ಳಲು ಸಾಧ್ಯವಾದರೆ ಹಂಚಿಕೊಳ್ಳಿ. ಏನೋ ಒಂದು ಕೆಲಸ ಮಾಡಿ. ನಿಮ್ಮಿಂದಾಗಿ ಆ ಕ್ಷಣದ ಮಹತ್ವ ಹೆಚ್ಚಾಗಬೇಕು. ನಿಮ್ಮಿಂದಾಗಿ ಹೊಸ ವಿಚಾರ ಹೊಳೆಯುವುದೋ, ಹೊಸ ಭಾವ ಮೊಳೆಯುವುದೋ ಆಗಬೇಕು.