
ಒಳ್ಳೆ ಕಂಟೆಂಟು, ಕ್ವಾಲಿಟಿ ಸಿನಿಮಾವನ್ನು ಸಿರಿಗನ್ನಡಂ ಪ್ರೇಕ್ಷಕಪ್ರಭು ಯಾವತ್ತು ಕೈ ಬಿಡುವುದಿಲ್ಲ ಅನ್ನೋದನ್ನು ನಾವು ನೋಡ್ತಾ ಬಂದಿದ್ದೇವೆ. ಈಗ ಮಗದೊಮ್ಮೆ ಅದನ್ನು ಚೇಸ್ ಸಿನಿಮಾ ಮೂಲಕ ಚಿತ್ರಪ್ರೇಮಿಗಳು ಸಾಬೀತುಪಡಿಸಿದ್ದಾರೆ. ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲಿಂಗ್ ಅಂಶದ ಜೊತೆಗೆ ಸಸ್ಪೆನ್ಸ್ ಜಾನರ್ ನ ಚೇಸ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಆರಂಭದಿಂದಲೂ ವಿಭಿನ್ನ ಕಥಾನಕದ ಸುಳಿವು ನೀಡುತ್ತಾ ಪ್ರೇಕ್ಷಕರನ್ನು ಅತ್ತಿತ್ತ ಸರಿಸದಂತೆ ಥ್ರಿಲ್ಲಿಂಗ್ ಕಂಟೆಂಟ್ ಉಣಬಡಿಸುತ್ತಿದ್ದ ಚೇಸ್ ಸಿನಿಮಾ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಮೊದಲ ಹೆಜ್ಜೆಯಲ್ಲಿ ನಿರ್ದೇಶಕ ವಿಲೋಕ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ.
ಕೆಜಿಎಫ್ 2 ಸಿನಿಮಾ ಬಳಿಕ ಎಲ್ಲರ ಬಾಯಲ್ಲೂ 777 ಚಾರ್ಲಿ ಹೆಸರು ನಲಿದಾಡಿತ್ತು. ಅಂತಹ ಕ್ರೇಜ್ ಹುಟ್ಟುಹಾಕಿತ್ತು 777 ಚಾರ್ಲಿ.. ಚಾರ್ಲಿ ಸಿನಿಮಾದಂತೆ ಪ್ರೇಕ್ಷಕರನ್ನು ನಿಧನವಾಗಿ ಆವರಿಸಿದ್ದು ಇದೇ ಚೇಸ್ ಸಿನಿಮಾ. ಯಾವುದೇ ಅಬ್ಬರ ಪ್ರಚಾರವಿಲ್ಲ. ತನ್ನದೇ ಸ್ಯಾಂಪಲ್ಸ್ ಮೂಲಕವೇ ಪ್ರೇಕ್ಷಕರಲ್ಲಿ ನಿರೀಕ್ಷೆಯ ಕೋಟೆ ಕಟ್ಟಿದ್ದ ಚೇಸ್ ನೋಡುಗರನ್ನು ಕೈ ಬೀಸಿ ಕರೆದಿತ್ತು. ಅದರ ಪ್ರತಿಫಲವೋ ಏನೋ ಚೇಸ್ ಎಲ್ಲೆಡೆರ ಹೌಸ್ ಫುಲ್ ಪ್ರದರ್ಶನ ಕಾಣ್ತಾ ಚಿತ್ರಪ್ರೇಮಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಚೇಸ್ ಸಿನಿಮಾವನ್ನು ಪ್ರೇಕ್ಷಕ ಈ ಮಟ್ಟಿಗೆ ಆಹ್ವಾದಿಸುವುದಕ್ಕೆ ಕಾರಣ ಸಿನಿಮಾದ ಕಂಟೆಂಟ್.. ಆ ರೀತಿ ಕಂಟೆಂಟ್ ಆಯ್ದುಕೊಂಡ ನಿರ್ದೇಶಕ ವಿಲೋಕ್ ಶೆಟ್ಟಿ ಅದನ್ನು ಅಷ್ಟೇ ಸೊಗಸಾಗಿ ರೂಪಿಸಿದ್ದಾರೆ. ಪ್ರೇಕ್ಷಕರನ್ನು ಪ್ರತಿ ಕ್ಷಣವೂ ಚಕಿತಗೊಳಿಸುತ್ತಾ ಸಾಗುವ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಅಂಶದ ಜೊತೆಗೆ ಪ್ರಯೋಗಾತ್ಮಕ ಅಂಶಗಳು ಇಡೀ ಸಿನಿಮಾದ ಜೀವಾಳ. ಇದರ ಜೊತೆ ತಾಂತ್ರಿಕ ವರ್ಗದ ದೃಶ್ಯ ಆಡಾಂಬರ ಚೇಸ್ ಸಿನಿಮಾದ ಶ್ರೀಮಂತಿಕೆಯನ್ನು ಮತ್ತಷ್ಟು ಅಂದಗೊಳಿಸಿದೆ.
Chase Film Review: ಕಥೆಗೆ ಹೊಸ ಸ್ವರೂಪ, ಅಭಿನಯವೇ ದೀಪ
ವಿಲೋಕ್ ಶೆಟ್ಟಿ ಹೆಣೆದ ಕಥೆಗೆ ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಬ್ಯಾನರಿನಡಿಯಲ್ಲಿ ಮನೋಹರ್ ಸುವರ್ಣ ನಿರ್ಮಾಣ ಹಣ ಹೂಡಿದ್ದಾರೆ. ಚೇಸ್ ಇಷ್ಟು ಅದ್ಧೂರಿ ಪ್ರದರ್ಶನ ಕಾಣುತ್ತಿರೋದರ ಹಿಂದೆ ಸುವರ್ಣರ ಸಿನಿಮಾ ಆಸಕ್ತಿ ಪ್ರಮುಖವಾದುದ್ದೂ. ನಿರ್ಮಾಣದಲ್ಲಿ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿಭಿನ್ನ ಶೇಡ್ ನಲ್ಲಿ ರಾಧಿಕಾ ನಾರಾಯಣ್ ಪ್ರೇಕ್ಷಕರನ್ನು ಆಕರ್ಷಿಸಿದ್ರೆ, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಸೇರಿದಂತೆ ಒಂದಿಡೀ ಪಾತ್ರ ವರ್ಗವೇ ಪ್ರೇಕ್ಷಕರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಅವಿನಾಶ್, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಅಭಿನಯ ಸಿನಿಮಾ ತೂಕವನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.