
ಬೆಂಗಳೂರು (ಜು. 20): ನಟ ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ವಿಕ್ರಾಂತ್ ರೋಣ ಸ್ಟಾರ್ ಸುದೀಪ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. "ವಿಕ್ರಾಂತ್ ರೋಣ ಪ್ರಚಾರ ಕಾರ್ಯಗಳಿಂದ ವೈರಲ್ ಫೀವರ್ ಆಗಿದೆ ಇಂದು ನಾಳೆ ವಿಶ್ರಾಂತಿ ಪಡೆದು ಶುಕ್ರವಾರದಿಂದ ಪ್ರೊಮೋಷನ್ಸ್ ಮಾಡಲಿದ್ದಾರೆ" ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ
ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸುದೀಪ್ ಆಪ್ತ ಜಾಕ್ ಮಂಜು ಆಗ್ರಹಿಸಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಅನೇಕ ರಾಜ್ಯಗಳಿಗೆ ಸುತ್ತಾಡುತ್ತ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಪ್ರಚಾರಕ್ಕಾಗಿ ಕಿಚ್ಚ ಸುದೀಪ್ ಡೆಲ್ಲಿ, ಮುಂಬೈ ಹಾಗೂ ರಾಜಸ್ತಾನ ಸುತ್ತಿ ಬಂದಿದ್ದರು. ಬಳಿಕ ಭಾನುವಾರ ಪತ್ನಿ ಸಮೇತ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಿಚ್ಚ ಸುದೀಪ್ ನಿನ್ನೆ ಚೆನ್ನೈ ತೆರಳಬೇಕಿತ್ತು ಆದರೆ ವೈರಲ್ ಫೀವರ್ ನಿಂದ ಚೆನ್ನೈ ಪ್ರಯಾಣ ರದ್ದಾಗಿದೆ ಎಂದು ಜಾಕ್ ಮಂಜು ಆತಂಕ ದೂರ ಮಾಡಿದ್ದಾರೆ.
ಇದನ್ನೂ ಓದಿ: Vikrant Rona: ಕಿಚ್ಚ ವರ್ಸ್ ಎಂಬ ಕಿಚ್ಚನ ಡಿಜಿಟಲ್ ಜಗತ್ತು
ಸುದೀಪ್ ನಟನೆಯ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳ 28ರಂದು ಬಹುನಿರೀಕ್ಷೆಯ ಚಿತ್ರ ರಿಲೀಸ್ ಆಗುತ್ತಿದೆ. ಕಳೆದ ಒಂದು ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದರು. ಇತ್ತೀಚೆಗೆ ಪತ್ರೀಕಾಗೋಷ್ಠಿ ಆಯೋಜಿಸಿದ್ದ ಸುದೀಪ್ ಚಿತ್ರದ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.