ಶಶಾಂಕ್ ಹೊಸ ಸಿನಿಮಾ ಹೆಸರು 'ಲವ್ 360'!

Suvarna News   | Asianet News
Published : Jul 10, 2021, 11:54 AM IST
ಶಶಾಂಕ್ ಹೊಸ ಸಿನಿಮಾ ಹೆಸರು 'ಲವ್ 360'!

ಸಾರಾಂಶ

ನಿರ್ದೇಶಕ ಶಶಾಂಕ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಹೆಸರು ಲವ್ 360. ಏನಿರಬಹುದು ಈ ಚಿತ್ರದ ವಿಶೇಷತೆ?  

ಸ್ಯಾಂಡಲ್‌ವುಡ್‌ಗೆ 'ಕೃಷ್ಣನ್ ಲವ್‌ ಸ್ಟೋರಿ' ಪರಿಚಯಿಸಿಕೊಟ್ಟ ನಿರ್ದೇಶಕ ಶಶಾಂಕ್ ಇದೀಗ ನಿರ್ಮಾಣದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.  ಅವರು ಮುಂದಿನ ಚಿತ್ರಕ್ಕೆ ಲವ್ 360 ಎಂಬ ಶೀರ್ಷಿಕೆ ಇಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೀಣ್, ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 

ಕರಾವಳಿ ಭಾಗದ ಒಂದು ಸಣ್ಣ ನಗರ ಪ್ರದೇಶದಲ್ಲಿ ನಡೆಯುವ ಕತೆಯೇ ಈ ಚಿತ್ರದ್ದು. ಬೆಂಗಳೂರು, ಕರಾವಳಿ ಭಾಗದಲ್ಲಿ ಆಗಸ್ಟ್‌ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.  ‘ಈ ಚಿತ್ರದ ಮೂಲಕ ಹೊಸ ನಟನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಆಪ್ತವಾದ ಪ್ರೇಮ ಕತೆಯ ಸಿನಿಮಾವಿದು,’ಎನ್ನುತ್ತಾರೆ ಶಶಾಂಕ್.

ನಿರ್ದೇಶಕ ಶಶಾಂಕ್ ಹೊಸ ಚಿತ್ರದಲ್ಲಿ ಮೆಡಿಕಲ್ ಪದವೀಧರ ಪ್ರವೀಣ್‌ ನಾಯಕ!

ಎಮೋಷನಲ್‌ ಲವ್ ಸ್ಟೋರಿ ಹೊಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ.  ಸಖತ್ ಡಿಫರೆಂಟ್ ಅಗಿರುವ ಲವ್ ಸ್ಟೋರಿಯನ್ನು ಜನರಿಗೆ ಪರಿಚಯಿಸಿಕೊಡುವ ಶಶಾಂಕ್, ಈ ಚಿತ್ರದ ಮೂಲಕ ಮತ್ತೊಂದು ನೈಜ ಘಟನೆ ಹೇಳಲು ಮುಂದಾಗಿದ್ದಾರೆ. ಚಿತ್ರರಂಗದಲ್ಲಿ ಹೊಸಬರು ಮಿಂಚಬೇಕು, ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಬೇಕು ಎಂಬುದು ಶಶಾಂಕ್‌ ಅವರ ಗುರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?