ಗೋಲ್ಡನ್ ಸ್ಟಾರ್ ಕೈಯಲ್ಲೀಗ ನಾಲ್ಕು ಮತ್ತೊಂದು ಚಿತ್ರವಿದೆ. ಹೊಸದಾಗಿ ಘೋಷಣೆಯಾದ ರಾಯಗಢ ಸಿನಿಮಾ ಬಗ್ಗೆ, ಉಳಿದ ಚಿತ್ರಗಳ ಬಗ್ಗೆ ಹಾಗೂ ಕೊರೋನಾ ಕಾಲದ ಸಮಾಜ ಸೇವೆ ಬಗ್ಗೆ ಗಣೇಶ್ ಮಾತಾಡಿದ್ದಾರೆ.
- ರಾಯಗಢ ಚಿತ್ರದ ಹೆಸರೇ ಹೇಳುವಂತೆ ಆ್ಯಕ್ಷನ್ ಪ್ರಧಾನವಾದದ್ದು. ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾದಲ್ಲಿ ಈವರೆಗೆ ನೀವು ನೋಡಿದ್ದಕ್ಕಿಂತ ಡಿಫರೆಂಟಾದ ಗಣೇಶ್‌ನನ್ನು ನೋಡ್ತೀರಿ. ಇಂಡಸ್ಟ್ರಿಗೆ ಬಂದು 15 ವರ್ಷ ಕಳೆಯಿತು. ಹೊಸತನ, ಚಾಲೆಂಜಿಂಗ್ ಪಾತ್ರಗಳಲ್ಲಿ ಅಭಿನಯಿಸೋಕೆ ಇದು ಕರೆಕ್‌ಟ್ ಟೈಮ್. ಇಷ್ಟೆಲ್ಲ ಆದರೂ ಹ್ಯೂಮರ್ ಮತ್ತು ಎಮೋಶನ್ ಮಿಸ್ ಆಗಂಗಿಲ್ಲ ಅಂತ ನಿರ್ದೇಶಕ ಸುನಿ ಅವರಿಗೆ ಹೇಳಿದ್ದೇನೆ. ಯಾಕೆಂದರೆ ಅದು ನನ್ನ ಟ್ರಂಪ್ ಕಾರ್ಡ್. ನನ್ನ ಸಿನಿಮಾಗಳಲ್ಲಿ ಈ ಎರಡು ಫ್ಯಾಕ್ಟರ್ ಇರಲೇಬೇಕು.
ನಟ ಗಣೇಶ್ 'ತ್ರಿಬಲ್ ರೈಡಿಂಗ್' ಟೀಸರ್ ವೈರಲ್!
undefined
- ಹಿಂದಿನ ಗಾಳಿಪಟ ದಶಕದ ಹಿಂದಿನ ಯಂಗ್‌ಸ್ಟರ್ಸ್‌ಗೆ ಇಷ್ಟವಾಗೋ ಹಾಗಿತ್ತು. ಈ ಸಲದ ಗಾಳಿಪಟ 2 ಯೋಗರಾಜ ಭಟ್ಟರ ಬೆಸ್‌ಟ್ ಸಿನಿಮಾಗಳಲ್ಲೇ ಬೆಸ್‌ಟ್. ಕತೆ, ಸಂಭಾಷಣೆಗಳೆಲ್ಲ ಅದ್ಭುತ ಅನ್ನೋ ಹಾಗಿವೆ. ನನ್ನ ಪಾತ್ರವೂ ಈ ಕಾಲದವರಿಗೆ ಇಷ್ಟವಾಗೋ ಹಾಗಿದೆ. ಅದಕ್ಕೂ ಮೊದಲು ಸಖತ್ ರಿಲೀಸ್ ಆಗುತ್ತೆ.
- ಕೊರೋನಾ ಕಾಲದಲ್ಲಿ ಏನೆಲ್ಲ ಮಾಡಿದೆ ಅನ್ನೋದರ ಬಗ್ಗೆ ಹೇಳ್ಕೊಳ್ಳೋದು ನನಗಿಷ್ಟ ಇಲ್ಲ. ಆದರೆ ಸಹಾಯ ಕೇಳಿ ಬಂದವರಿಗೆ ಏನು ಸಹಾಯ ಬೇಕು ಅಂತ ಕೇಳಿ ಹೆಲ್‌ಪ್ ಮಾಡಿದ್ದು ಆತ್ಮತೃಪ್ತಿ ಕೊಟ್ಟಿದೆ. ಫೀಸ್ ಕಟ್ಟಲಿಕ್ಕಾಗ್ತಿಲ್ಲ ಅನ್ನೋ ಪೋಷಕರ ಮಕ್ಕಳಿಗೆ ಫೀಸ್ ಕಟ್ಟಿದ್ದು, ಮೆಡಿಸಿನ್, ಬೆಡ್, ಆಸ್ಪತ್ರೆ ವೆಚ್ಚ ಪೂರೈಸಿದ್ದು, ನಮ್ಮ ಸಿನಿಮಾ ಹುಡುಗರಿಗೆ ಸಂಬಂಧಪಟ್ಟವರಿಂದ ಹೇಳಿಸಿ ಸಹಾಯ ಮಾಡಿಸಿದ್ದು ಇತ್ಯಾದಿ ಕೆಲಸಗಳನ್ನು ಕರ್ತವ್ಯ ಅಂತ ಮಾಡಿದೆ. ಯಾಕೆಂದರೆ ನಾನೂ ಬಡತನದ ಹಿನ್ನೆಲೆಯಿಂದಲೇ ಬಂದವನು, ಈಗ ಸ್ವಲ್ಪ ಅನುಕೂಲ ಇದೆ. ಹಾಗಾಗಿ ಕೈಲಾದ ಸಹಾಯ ಮಾಡುತ್ತಿದ್ದೇನೆ.